Latest

ಭಾರತ – ಚೀನಾದ ಬಗೆಗಿನ ಗುಪ್ತಚರ ವರದಿಗೆ ತಲ್ಲಣಿಸಿದ ಅಮೆರಿಕ

ಪ್ರಗತಿವಾಹಿನಿ ಸುದ್ದಿ, ವಾಷಿಂಗ್ಟನ್‌: ಅಮೆರಿಕದ ಗುಪ್ತಚರ ಇಲಾಖೆಯು ಭಾರತ ಮತ್ತು ಚೀನಾದ ದೇಶಗಳು ವಿವಾದಿತ ಗಡಿಯಲ್ಲಿ ಸೈನ್ಯವನ್ನು ಬಲಪಡಿಸಿದ್ದು, ಈ ಹೆಜ್ಜೆ ಎರಡು ಅಣ್ವಸ್ತ್ರ ರಾಷ್ಟ್ರಗಳ ನಡುವಿನ ಸಂಘರ್ಷದ ಅಪಾಯ ಹೆಚ್ಚಿಸಲಿದೆ. ಅಲ್ಲದೇ ಇದು ಅಮೆರಿಕದ ಹಿತಾಸಕ್ತಿಗಳಿಗೆ ನೇರ ಬೆದರಿಕೆ ಒಡ್ಡುತ್ತಿದ್ದು ಅಮೆರಿಕ ಮಧ್ಯಸ್ಥಿಕೆಗೆ ಕರೆ ನೀಡಲು ಅವಕಾಶವಿಡುತ್ತದೆ ಎಂದು ಹೇಳಿದೆ.

ಇದರಿಂದ ಅಮೆರಿಕಕ್ಕೆ ತಲ್ಲಣ ಉಂಟಾಗಿದೆ ಎಂದೇ ಹೇಳಬೇಕು. ಈ ಎರಡೂ ರಾಷ್ಟ್ರಗಳಿಗೂ ರಷ್ಯಾದ ಸ್ನೇಹವಿದೆ.

ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಭಾರತ ಮತ್ತು ಚೀನಾ ನಡುವಿನ   ಘರ್ಷಣೆಗಳು ತ್ವರಿತವಾಗಿ ಉಲ್ಬಣಗೊಳ್ಳುತ್ತವೆ ಎಂಬುದಕ್ಕೆ ಈ ಹಿಂದಿನ ಸಂಘರ್ಷಗಳೇ ಸಾಕ್ಷಿ ಎಂದು ಅಮೆರಿಕ ಗುಪ್ತಚರ ವಾರ್ಷಿಕ ವರದಿ ತಿಳಿಸಿದೆ. ದಶಕದಲ್ಲಿಯೇ ಅತ್ಯಂತ ಗಂಭೀರವಾದ 2020 ರಲ್ಲಿನ ಗಲ್ವಾನ್ ಕಣಿವೆ ಘರ್ಷಣೆ ಸಾವು–ನೋವುಗಳಿಗೆ ಸಾಕ್ಷಿಯಾಗಿತ್ತು. ಎರಡೂ ಕಡೆಯವರು ಗಡಿ ಮಾತುಕತೆಯಲ್ಲಿ ತೊಡಗಿದ್ದರೂ ಕೂಡ ಭಾರತ-ಚೀನಾ ಸಂಬಂಧ ಉತ್ತಮವಾಗಿಲ್ಲ ಎಂದು ಉಲ್ಲೇಖಿಸಲಾಗಿದೆ.

ಈ ಅಂಶ ಗಮನಕ್ಕೆ ಬರುತ್ತಿದ್ದಂತೆಯೇ ಅಮೆರಿಕಾ ಕಳವಳ ವ್ಯಕ್ತಪಡಿಸಿದೆ. ಹಿಂದಿನ ದಶಕಗಳಿಂದ ಭಾರತ ತನ್ನ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಚೀನಾ ಸಹ ಪೈಪೋಟಿಗಿಳಿದಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಗಳಿಸುವತ್ತ, ವಿಶ್ವ ಸಂಸ್ಥೆಯಲ್ಲಿ ಕಾಯಂ ಭದ್ರತಾ ಸದಸ್ಯತ್ವ ಪಡೆಯುವತ್ತ ಮುಂಚೂಣಿಯಲ್ಲಿರುವ ಭಾರತದ ವೇಗವನ್ನು ಚೀನಾ ಶತಾಯಗತಾಯ ತಪ್ಪಿಸುವ ಪ್ರಯತ್ನದತ್ತ ಮುಂದುವರೆಯುತ್ತಿದೆ. ಅಮೆರಿಕಕ್ಕೂ ಸಹ ಭಾರತದ ಅಂತರಾಷ್ಟ್ರೀಯ ಪ್ರಭಾವವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಲೇ ಇದೆ.

Home add -Advt

ಈ ವಿಷಯ ಮುಂದಿಟ್ಟುಕೊಂಡು, ಸಂಘರ್ಷ ತಡೆಯುವ ನೆಪವೊಡ್ಡಿ ಮಧ್ಯೆ ಪ್ರವೇಶಿಸುವ ಇಂಗಿತ ಅಮೆರಿಕಾದ್ದು. ಭಾರತ – ಚೀನಾ ಎರಡೂ ರಾಷ್ಟ್ರಗಳಿಗೆ ಅಮೆರಿಕಾದ ಮಧ್ಯ ಪ್ರವೇಶ ಬೇಕಿಲ್ಲ. ಹೀಗಾಗಿ ಮೂಗು ತೂರಿಸಲು ಅಮೆರಿಕಾಕ್ಕೆ ಆಸ್ಪದವಿಲ್ಲವಾಗಿದೆ. ಅದರ ನಾಯಕತ್ವಕ್ಕೆ ಎರಡೂ ಬೃಹತ್‌ ರಾಷ್ಟ್ರಗಳು ಮಣೆ ಹಾಕುತ್ತಿಲ್ಲ.

https://pragati.taskdun.com/t-sunandamma-award-for-literature-bhuvaneshwari-hegade/
https://pragati.taskdun.com/early-morning-milk-shortage-in-the-capital-people-hotel-tea-stall-owners-in-problem/
https://pragati.taskdun.com/a-suspicious-balloon-flew-in-the-field-the-people-of-bailahongala-shocked/

Related Articles

Back to top button