Latest

ಚುನಾವಣಾ ಪ್ರಚಾರ ಅರ್ಧಕ್ಕೆ ಬಿಟ್ಟುಹೋದ ಅಮಿತ್ ಶಾ

ಪ್ರಗತಿವಾಹಿನಿ ಸುದ್ದಿ, ಇಂಫಾಲ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಏ.25ರಿಂದ ಕರ್ನಾಟಕ ರಾಜ್ಯಾದ್ಯಂತ ಪ್ರಚಾರ ಕೈಗೊಂಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಚಾರವನ್ನು ಅರ್ಧಕ್ಕೇ ಮೊಟಕುಗೊಳಿಸಿ ತೆರಳಿದ್ದಾರೆ.

ಮಣಿಪುರದಲ್ಲಿ ಪರಿಶಿಷ್ಟ ಪಂಗಡದ ಸ್ಥಾನಮಾನದ ಕುರಿತು ನ್ಯಾಯಾಲಯದ ಆದೇಶದ ವಿರುದ್ಧ ಬುಡಕಟ್ಟು ಗುಂಪುಗಳು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರದ ಸ್ವರೂಪ ಪಡೆದಿದ್ದು ಕಾನೂನು ತೀವ್ರ ಸುವ್ಯವಸ್ಥೆ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಅವರು ಚುನಾವಣೆ ಪ್ರಚಾರ ಸಭೆಗಳನ್ನು ರದ್ದುಪಡಿಸಿದ್ದಾರೆ.

ಚುನಾವಣೆ ಪ್ರಚಾರ ಇನ್ನು ನಾಲ್ಕು ದಿನಗಳು ಮಾತ್ರ ನಡೆಯುವ ಹಿನ್ನೆಲೆಯಲ್ಲಿ ಅವರು ಪುನಃ ಚುನಾವಣೆ ಪ್ರಚಾರ ಕಾರ್ಯದಲ್ಲಿ ಭಾಗಿಯಾಗುವ ಬಗ್ಗೆ ಸಂದೇಹಗಳು ವ್ಯಕ್ತವಾಗಿವೆ.

ನಿಗದಿತ ಪ್ರವಾಸ ಪಟ್ಟಿಯಂತೆ ಅಮಿತ್ ಶಾ ಇಂದು ರಾಯಚೂರಿನಲ್ಲಿ ನಡೆಯಲಿರುವ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಿದ್ದರು. “ರಾಜ್ಯದಲ್ಲಿ ಯಾವುದೇ ಪರಿಸ್ಥಿತಿಯಲ್ಲೂ ಬಿಜೆಪಿ ಗೆಲ್ಲುವುದು ಶತಸಿದ್ಧ” ಎಂದು ವಿಶ್ವಾಸ ವ್ಯಕ್ತಪಡಿಸಿ ಶಾ ಮಣಿಪುರದತ್ತ ನಿರ್ಗಮಿಸಿದ್ದಾರೆ.

Home add -Advt

https://pragati.taskdun.com/let-d-k-shivkumar-change-his-name-says-former-minister-k-s-ishwarappa/

https://pragati.taskdun.com/karnataka-sslc-result-likely-to-be-declared-on-may-8/
https://pragati.taskdun.com/gold-price-jumps-to-record-highs/

Related Articles

Back to top button