ಪ್ರಗತಿವಾಹಿನಿ ಸುದ್ದಿ, ಹರಿಹರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹರಿಹರದ ಪಂಚಮಸಾಲಿ ಮಠದ ಶ್ವಾಸ ಗುರೂಜಿ, ಶ್ರೀ ವಚನಾನಂದ ಸ್ವಾಮೀಜಿಯವರನ್ನು ಭೇಟಿ ಮಾಡಿ ಕೆಲ ಕಾಲ ಸಮಾಲೋಚನೆ ನಡೆಸಿದರು.
ಈ ಭೇಟಿಯ ಕುರಿತು ತಮಗಾದ ಅನುಭವ ಹಂಚಿಕೊಂಡ ವಚನಾನಂದ ಸ್ವಾಮೀಜಿಯವರು, ಅಖಂಡ ಭಾರತದ ನಿರ್ಮಾಣದಲ್ಲಿ ನಿರತವಾಗಿರುವ ಅಮಿತ್ ಶಾ., ಕೇವಲ ಚುನಾವಣಾ ಚಾಣಕ್ಯ ಮಾತ್ರವಲ್ಲದೇ, ಭಾರತದ ಮಾಣಿಕ್ಯವೆಂದು ಬಣ್ಣಿಸಿದರು. ಶಾ ಕೇವಲ ಒಬ್ಬ ರಾಜಕಾರಣಿಯಿಲ್ಲದೆ, ಒಬ್ಬ ಅದ್ಭುತ ಜಿಜ್ಞಾಸು ಮತ್ತು ಆಳವಾದ ಆಧ್ಯಾತ್ಮಿಕ ತಳಹದಿ ಹೊಂದಿರುವ ವ್ಯಕ್ತಿ ಎಂದು ಹೊಗಳಿದರು.
ಆಧ್ಯಾತ್ಮಿಕ ಜಿಜ್ಞಾಸು ಅಮಿತ್ ಶಾ:
ಹರಿಹರ ಪೀಠಕ್ಕೆ ಭೇಟಿ ನೀಡಿ, ಔಪಚಾರಿಕ ಗೌರವಗಳನ್ನು ಸ್ವೀಕರಿಸಿ, ಸ್ವಾಮೀಜಿಗಳಿಗೆ ವಂದನೆ ಸಲ್ಲಿಸಿದ ಅಮಿತ್ ಶಾ ಒಂದು ಕ್ಷಣ ಮೌನವಾಗಿ, ಅಲ್ಲಿದ್ದ ಶ್ರೀಚಕ್ರದ ಕಲಾಕೃತಿಯನ್ನು ವೀಕ್ಷಿಸಿ ‘ಅದ್ಭುತ’ ಎಂದು ಬಣ್ಣಿಸಿದರಲ್ಲದೆ ಲಿಂಗಾಯತ ಧರ್ಮದಲ್ಲಿ ಕುಂಡಲನಿ ಯೋಗದ ಕುರಿತಾದ ಮಾಹಿತಿ ಪಡೆದರು. 800 ವರ್ಷಗಳ ಹಿಂದೆ ಶಂಕರರು ಅಲ್ಲಿನ ಹರಿಹರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದನ್ನು ತಿಳಿದುಕೊಂಡು, ತಾವು ಕೂಡ ಹರಿಹರೇಶ್ವರನ ದರ್ಶನ ಪಡೆದರು.
ಅಖಂಡ ಭಾರತ ನಿರ್ಮಾಣ ಏಕಮೇವ ಧ್ಯೇಯ:
‘ಭಾರತ ವಿಶ್ವಗುರುವಾಗಬೇಕು, ಅಖಂಡ ಭಾರತ ನಿರ್ಮಾಣಕ್ಕೆ ನಿಮ್ಮಂತಹ ಸಂತ-ಮಹಂತರ ಆಶೀರ್ವಾದಗಳು ಬೇಕು’ ಎಂದು ಎಂದ ಶಾ, ಸ್ವಾಮೀಜಿಯವರ ಹತ್ತಿರ ಯಾವುದೇ ರಾಜಕಾರಣದ ಬಗ್ಗೆ ಚರ್ಚಿಸದೆ, ಯೋಗ, ಆಧ್ಯಾತ್ಮ ಸಾಧನೆ, ಸಿದ್ಧಿಗಳ ಕುರಿತಷ್ಟೇ ಮಾತನಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ