ಬಾಲಿವುಡ್ ಬಿಗ್ ಬಿಗೆ ಕೊರೋನಾ ಸೋಂಕು

ಪ್ರಗತಿವಾಹಿನಿ ಸುದ್ದಿ, ಮುಂಬೈ – ಖ್ಯಾತ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಗೆ ಕೊರೋನಾ ಸೋಂಕು ತಗುಲಿದೆ. ಟ್ವೀಟರ್ ನಲ್ಲಿ ಸ್ವತಃ ಅವರೇ ಈ ವಿಷಯ ಬಹಿರಂಗಪಡಿಸಿದ್ದು, ತಮ್ಮೊಡನೆ ಸಂಪರ್ಕಕ್ಕೆ ಬಂದವರೆಲ್ಲ ಪರೀಕ್ಷೆ ಮಾಡಿಸಿಕೊಳ್ಳುವಂತೆ ವಿನಂತಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅಮಿತಾಬ್ ಬೇಗ ಗುಣಮುಖವಾಗಲು ಹಾರೈಕೆಗಳ ಸುರಿಮಳೆಯೇ ಹರಿದುಬರುತ್ತಿದೆ. ಅಮಿತಾಬ್ ಅವರನ್ನು ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಮಿತಾಬ್ ಬಚ್ಚನ್ ಅವರಿಗೆ ಸೋಂಕು ತಗುಲಿರುವ ಸುದ್ದಿ ಹರಡುತ್ತಿದ್ದಂತೆ ಬಾಲಿವುಡ್ ಖ್ಯಾತನಾಮರೆಲ್ಲ ಕಂಗಾಲಾಗಿದ್ದಾರೆ.

Related Articles

Back to top button