Kannada NewsKarnataka NewsLatest
*ನಗರಸಭೆ ಪೌರಾಯುಕ್ತೆಗೆ ಆಸಿಡ್ ಎರಚುವುದಾಗಿ ಅನಾಮಧೇಯ ಪತ್ರ: ದೂರು ನೀಡಿದ ಅಮೃತಾಗೌಡ*

ಪ್ರಗತಿವಾಹಿನಿ ಸುದ್ದಿ: ಅಕ್ರಮವಾಗಿ ಅಳವಡಿಸಿದ್ದ ಬ್ಯಾನರ್ ತೆರವು ಮಾಡಿದ್ದಕ್ಕೆ ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತಗೆ ರಾಜಕೀಯ ಮುಖಂಡ ರಾಜೀವ್ ಗೌಡ ನಿಂದಿಸಿ ಜೀವ ಬೆದರಿಕೆ ಹಾಕಿದ್ದ ಪ್ರಕರಣ ನಡೆದಿದ್ದು, ಬಂಧನ ಭೀತಿಯಲ್ಲಿರುವ ಆರೋಪಿ ತಲೆಮರೆಸಿಕೊಂಡಿದ್ದು ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ನಡುವೆಯೇ ಪೌರಾಯುಕ್ತೆಗೆ ಆಸಿಡ್ ದಾಳಿ ನಡೆಸುವ ಬೆದರಿಕೆ ಕೀಡ ಬಂದಿದೆ.
ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾಗೌಡ ಅವರಿಗೆ ಆಸಿಡ್ ಎರಚುವುದಾಗಿ ಅನಾಮಧೇಯ ಪತ್ರವೊಂದು ಶಿಡ್ಲಘಟ್ಟ ನಗರ ಸಭೆ ಕಚೇರಿಗೆ ಬಂದಿದೆ. ಪತ್ರದಲ್ಲಿರುವ ಬೆದರಿಕೆ ಅಂಶಗಳನ್ನು ಕಂಡು ಆತಂಕಗೊಂಡಿರುವ ಪೌರಾಯುಕ್ತೆ ಅಮೃತಾಗೌಡ, ಶಿಡ್ಲಘಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಸಿದ್ದಾರೆ.
ಅಲ್ಲದೇ ಬೆದರಿಕೆ ಪತ್ರದ ಸಮೇತ ಚಿಂತಾಮಣಿ ಕೋರ್ಟ್ ಗೆ ದೂರು ನೀಡಿದ್ದಾರೆ. ಬೆದರಿಕೆ ಪತ್ರದಿಂದ ಭಯಗೊಂಡಿರುವ ಅಮೃತಾಗೌಡ ರಕ್ಷಣೆಗಾಗಿ ಮನವಿ ಮಾಡಿದ್ದಾರೆ.

