Latest

ಕಬಡ್ಡಿ ಆಡುವಾಗಲೇ ಕುಸಿದು ಬಿದ್ದು 18 ವರ್ಷದ ಯುವಕ ಸಾವು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಪ್ರಥಮ ವರ್ಷದ ಫಾರ್ಮಸಿ ವಿದ್ಯಾರ್ಥಿಯೊಬ್ಬ ಕಾಲೇಜಿನ ಮೈದಾನದಲ್ಲಿ ನಡೆದ ಕಬಡ್ಡಿ ಸ್ಪರ್ಧೆ ವೇಳೆ ಮೈದಾನದಲ್ಲೇ ಹೃದಯಾಘಾತದಿಂದ ಕುಸಿದು ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾನೆ.

ಶ್ರೀ ಸತ್ಯಸಾಯಿ ಜಿಲ್ಲೆಯ ಮಡಕಶಿರಾ ಮೂಲದ, ಬಾಲಾಜಿ ಕಾಲೇಜ್ ಆಫ್ ಫಾರ್ಮಸಿಯ ಪ್ರಥಮ ವರ್ಷದ ಫಾರ್ಮಸಿ ವಿದ್ಯಾರ್ಥಿ ತನುಜ್ ಕುಮಾರ್ ನಾಯಕ್ (18) ಮೃತಪಟ್ಟವ. ಇತ್ತೀಚೆಗಷ್ಟೇ ಕಾಲೇಜಿಗೆ ಸೇರಿದ್ದ ಈತ ತನ್ನ ಸ್ನೇಹಿತರೊಂದಿಗೆ ಕಬಡ್ಡಿ ಆಡುತ್ತಿದ್ದ.

ಕಬಡ್ಡಿ ಅಂಕಣದಲ್ಲಿ ಎದುರಾಳಿ ತಂಡದವರು ಬಂದಾಗ ಅವರನ್ನು ಹಿಡಿಯಲು ಇತರ ಐವರೊಂದಿಗೆ ಪ್ರಯತ್ನಿಸುತ್ತಿದ್ದ ವೇಳೆ ಏಕಾಏಕಿ ಕುಸಿದುಬಿದ್ದ. ಕೂಡಲೆ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವನ ನಾಡಿ ಮಿಡಿತ ತೀರ ದುರ್ಬಲವಾಗಿತ್ತು ಎಂದು ವೈದ್ಯರು ತಿಳಿಸಿದರು. ಕಾಲೇಜಿನ ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಆತನ ಚಿಕಿತ್ಸೆಗಾಗಿ ಧನಸಹಾಯ ಮಾಡಿದ್ದರು.

ಆದರೂ ಸತತ ಎರಡು ದಿನಗಳಿಂದ ಕೋಮಾದಲ್ಲೇ ಇದ್ದ ತನುಜ್ ಕುಮಾರ್ ಮಂಗಳವಾರ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದ.

Home add -Advt
https://pragati.taskdun.com/role-of-youth-in-building-a-strong-india-is-important-historian-shivananda-helavara/

https://pragati.taskdun.com/a-woman-tried-to-commit-suicide-by-drinking-phenol-to-her-three-children-in-the-premises-of-the-district-collectors-office/

https://pragati.taskdun.com/belgaum-kidney-check-up-camp-tomorrow/

Related Articles

Back to top button