
ಪ್ರಗತಿವಾಹಿನಿ ಸುದ್ದಿ, ಇಂಫಾಲಾ: ಮಣಿಪುರದಲ್ಲಿ ಹಿಂಸಾಚಾರ ತಾರಕಕ್ಕೇರಿದ್ದು, ಇಂಫಾಲಾದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಯೊಬ್ಬರನ್ನು ಮನೆಯಿಂದ ಹೊರಗೆಳೆದು ಹತ್ಯೆ ಮಾಡಲಾಗಿದೆ.
ಶ. ಲೆಟ್ಮಿಂಥಾಂಗ್ ಹಾಕಿಪ್, ಇಂಫಾಲ್‌ನಲ್ಲಿ ಆದಾಯ ತೆರಿಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದು, ಅವರನ್ನು ಇಲಾಖೆಯ ಅವರ ಅಧಿಕೃತ ನಿವಾಸದಿಂದ ಹೊರಕ್ಕೆ ಎಳೆದು ತಂದು ಕೊಲ್ಲಲಾಯಿತು ಎಂದು ಭಾರತೀಯ ಕಂದಾಯ ಸೇವೆ (ಐಆರ್‌ಎಸ್) ಅಸೋಸಿಯೇಷನ್ ತಿಳಿಸಿದೆ.
“ಶ. ಲೆಟ್ಮಿಂಥಾಂಗ್ ಹಾಕಿಪ್ ಅವರ ಸಾವಿಗೆ ಕಾರಣವಾದ ಹಿಂಸಾಚಾರದ ಭೀಕರ ಕೃತ್ಯವನ್ನು ಬಲವಾಗಿ ಖಂಡಿಸಿರುವ ಐಆರ್‌ಎಸ್ ಅಸೋಸಿಯೇಷನ್ ಯಾವುದೇ ಕಾರಣಕ್ಕೂ ಕರ್ತವ್ಯದಲ್ಲಿದ್ದ ಅಮಾಯಕ ಸಾರ್ವಜನಿಕ ಸೇವಕನ ಹತ್ಯೆಯನ್ನು ಸಹಿಸುವುದಿಲ್ಲ” ಎಂದು ಹೇಳಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ