Latest

ಪಾಸ್ ಪೋರ್ಟ್ ಸಿಗದೆ ಉಕ್ರೇನ್ ನಲ್ಲಿ ರಾಜ್ಯದ ವಿದ್ಯಾರ್ಥಿನಿ ಪರದಾಟ

ಪ್ರಗತಿವಾಹಿನಿ, ಮಂಗಳೂರು – ಉಕ್ರೇನ್​​ನಲ್ಲಿ ರಷ್ಯಾ ದಾಳಿ ಮುಂದುವರಿದಿದ್ದು, ಭಾರತೀಯ ವಿದ್ಯಾರ್ಥಿಗಳನ್ನು ಹಂತ ಹಂತವಾಗಿ ಕರೆತರಲಾಗುತ್ತಿದೆ. ಯುದ್ಧ ಪೀಡಿತ ಉಕ್ರೇನ್​ನಲ್ಲಿ ಮಂಗಳೂರು ಮೂಲದ ವಿದ್ಯಾರ್ಥಿನಿ ಅನೈನಾ ಅನ್ನಾ ಪಾಸ್ ಪೋರ್ಟ್ ಇಲ್ಲದೇ ಸಂಕಷ್ಟಕ್ಕೊಳಗಾಗಿದ್ದಾರೆ.
ಮಂಗಳೂರಿನ ದೇರೆಬೈಲ್​ನ ಅನೈನಾ ಅನ್ನಾ ದಾಳಿಗೊಳಗಾದ ಖಾರ್ಕಿವ್ ನಗರದಲ್ಲಿ ಇದ್ದು, ಇವರ ಯುನಿವರ್ಸಿಟಿ ಕಟ್ಟಡದ ಪಕ್ಕದಲ್ಲೇ ಕಟ್ಟಡವೊಂದು ಸ್ಫೋಟಗೊಂಡಿದೆ. ಹಾಗಾಗಿ ಇವರು ಬಂಕರ್ ಬಿಟ್ಟು ರೈಲು ಹತ್ತಿದ್ದಾರೆ. ಆದರೆ, ಇವರ ಪಾಸ್​ಪೋರ್ಟ್ ಏಜೆಂಟ್ ಒಬ್ಬರ ಬಳಿ ಇದೆ. ಅವರಿಗೆ ಕರೆ ಮಾಡಿದರೆ ಅವರಿರುವಲ್ಲಿಗೆ ಬಂದು ಪಡೆಯುವಂತೆ ಹೇಳುತ್ತಿದ್ದಾರೆ. ಆದರೆ, ಅವರಿದ್ದ ಸ್ಥಳದಲ್ಲಿ ದಾಳಿ ನಡೆಯುತ್ತಿರುವುದರಿಂದ ಅಲ್ಲಿಗೆ ಹೋಗಲು ಸಾಧ್ಯವಾಗಿಲ್ಲ. ಅವರು ಹತ್ತಿದ ರೈಲು ಪೋಲೆಂಡ್​ ಕಡೆಗೆ ಹೊರಟಿರುವುದರಿಂದ ಪಾಸ್​ಪೋರ್ಟ್ ಸಿಗುವ ಸಾಧ್ಯತೆ ಕಡಿಮೆ.
ಈ ವಿಷಯದ ಕುರಿತು ರಾಯಭಾರಿ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು,  ತಾತ್ಕಾಲಿಕ ವ್ಯವಸ್ಥೆ ಮಾಡುವುದಾಗಿ ಭರವಸೆಯನ್ನು ನೀಡಿದ್ದಾರೆ ಎಂದು ಅನೈನಾ ಅನ್ನಾ ಅವರ ತಾಯಿ ಸಂಧ್ಯಾ ತಿಳಿಸಿದ್ದಾರೆ.

Related Articles

Back to top button