Kannada NewsKarnataka NewsLatest

ಕರೆ ಮಾಡಿದ ಹುಡುಗಿಯ ನಂಬಿ ಕಾಲು ಜಾರಿದ ವೃದ್ಧನಿಗೆ ಬಿತ್ತು ಬರೊಬ್ಬರಿ 15 ಲಕ್ಷ !

ಪ್ರಗತಿವಾಹಿನಿ ಸುದ್ದಿ, ಹೈದರಾಬಾದ್: ವಾಟ್ಸ್ಆ್ಯಪ್ ನಲ್ಲಿ ಕಾಲ್ ಮಾಡಿ ನಗ್ನವಾಗಿ ನಿಂತ ಹುಡುಗಿಯನ್ನು ನೋಡಿ ಮರುಳಾಗಿ ಆಕೆಯ ಮಾತಿಗೆ ತಾನೂ ಬೆತ್ತಲಾದ 78 ವರ್ಷದ ವ್ಯಕ್ತಿಯೊಬ್ಬರು ಬರೊಬ್ಬರಿ 15 ಲಕ್ಷ ರೂ. ಟೋಪಿ ಹಾಕಿಸಿಕೊಂಡು ಪರಿತಪಿಸುತ್ತಿದ್ದಾರೆ.

ವಾಟ್ಸ್ಆ್ಯಪ್ ಕರೆ ಮಾಡಿದ ಹುಡುಗಿ ಬಟ್ಟೆ ಬಿಚ್ಚುತ್ತಿದ್ದಳು. ಈ ವೇಳೆ ನಾರಾಯಣಗುಡಾದ ವೃದ್ಧ ವ್ಯಕ್ತಿಯ ಆಸಕ್ತಿ ವೃದ್ಧಿಸಿದೆ. ಕರೆ ಮಾಡಿದಾಕೆ ಹೇಳಿದ ಮಾತ್ರಕ್ಕೆ ವೃದ್ಧ ವ್ಯಕ್ತಿಯೂ ನಗ್ನರಾಗಿದ್ದಾರೆ. ಈ ವೇಳೆ ಫೋಟೊ ಪಡೆದ ಸೈಬರ್ ವಂಚಕರು ನಂತರ ಫೋಟೊ ವೈರಲ್ ಮಾಡುವುದಾಗಿ ಬ್ಲ್ಯಾಕ್ ಮೇಲ್ ಮಾಡಿ ವೃದ್ಧನಿಂದ 15 ಲಕ್ಷ ರೂ. ಎಬ್ಬಿಸಿದ್ದಾರೆ.

ಸೌಂದರ್ಯಕ್ಕೆ ಮರುಳಾಗಿ ಸುಖಾಸುಮ್ಮನೆ ತಾಪತ್ರಯಕ್ಕೆ ಬಿದ್ದ ವೃದ್ಧ ಈಗ ಹೈದರಾಬಾದ್ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ 15 ಲಕ್ಷ ರೂ. ವಾಪಸ್ ಕೊಡಿಸುವಂತೆ ಕೇಳಿಕೊಂಡಿದ್ದಾರೆ. ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

Related Articles

Back to top button