Latest

ಕೃಷಿಗೆ ಉತ್ತೇಜನ ನೀಡುವುದೇ ನನ್ನ ಮುಖ್ಯ ಉದ್ದೇಶ; ಆನಂದ ಮಾಮನಿ

ಪ್ರಗತಿವಾಹಿನಿ ಸುದ್ದಿ; ಹೊಸೂರ: ರೈತರ ಶ್ರಯೋಭಿವೃದ್ದಿಗಾಗಿ ಆರ್ಥಿಕ ನೆರವು ನೀಡುವದರೊಂದಿಗೆ ಗ್ರಾಮದಲ್ಲಿರುವ ಪಿಕೆಪಿಎಸ್ ಗಳ ಕಟ್ಟಡಗಳನ್ನ ಆಧುನಿಕರಣಗೊಳಿಸಿ ಕೃಷಿಗೆ ಉತ್ತೇಜನವನ್ನು ನೀಡುವದೆ ನನ್ನ ಮುಖ್ಯ ಉದ್ದೇಶ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವಿಧಾನಸಭೆಯ ಉಪಸಭಾಪತಿ ಆನಂದ ಮಾಮನಿ ಹೇಳಿದರು.

ಗ್ರಾಮದ ಪಿಕೆಪಿಎಸ್ ಸಂಘದ ನೂತನ ಕಟ್ಟಡದ ಅಡಿಗಲ್ಲು ಸಮಾರಂಭ ನೆರವೇರಿಸಿ ಮಾತನಾಡಿದ, ನಬಾರ್ಡ್ ದಿಂದ ಕಟ್ಟಡ ಕಟ್ಟಲಿಕ್ಕೆ ಮಂಜುರಾತಿಯಾದ 31.20ಲಕ್ಷ ರೂಪಾಯಿ ಹಣ ಶೇ 1 ಪ್ರತಿಶತ ಬಡ್ಡಿದರದಲ್ಲಿ ಸಾಲ ನೀಡಿದ್ದು ಶ್ಲಾಘನೀಯ. ರೈತರಿಗೆ ಕೃಷಿ ಚಟುವಟಿಕೆಗೆ ಶೇ 3ರ ಬಡ್ಡಿದರದಲ್ಲಿ ದೀರ್ಘಾವಧಿ ಹಾಗೂ ಶೂನ್ಯ ಬಡ್ಡಿದರದಲ್ಲಿ ಬೆಳೆಸಾಲವನ್ನು ಬಿಡಿಸಿಸಿ ಬ್ಯಾಂಕ್ ದಿಂದ ನೀಡುತ್ತಿದ್ದು ಇದನ್ನು ರೈತ ಬಾಂಧವರು ಸದುಪಯೋಗ ಪಡೆಸಿಕೊಳ್ಳಬೇಕೆಂದರು.

ಕಾಡಾ ಅಧ್ಯಕ್ಷಡಾ.ವಿ.ಆಯ್.ಪಾಟೀಲ, ಗಂಗಾಧರಸ್ವಾಮೀಜಿ ಸಾನಿಧ್ಯವಹಿಸಿ ಮಾತನಾಡಿದರು. ಸಂಘದ ಅಧ್ಯಕ್ಷ ಸೋಮಲಿಂಗಪ್ಪ ಚಳಕೊಪ್ಪ ಅಧ್ಯಕ್ಷತೆವಹಿಸಿದ್ದರು.
ವೇದಿಕೆಯ ಮೇಲೆ ಡಿಸಿಸಿ ಬ್ಯಾಂಕ್ ತಾಲೂಕಾ ನಿಯಂತ್ರಣಾಧಿಕಾರಿ ಸಿ.ಆರ್.ಪಾಟೀಲ ,ಬ್ಯಾಂಕ್ ನೀರಿಕ್ಷಕ ಪ್ರವೀಣ ಕೊಟಗಿ,ಚಿನ್ನಪ್ಪ ಹುಂಬಿ, ದುಂಡಪ್ಪ ಬುದಿಹಾಳ, ಈರಪ್ಪ ಹುಂಬಿ, ಎಸ್‌ಎನ್ ಬುಡಶೆಟ್ಟಿ,ಈಶ್ವರಚಂದ್ರ ಇಂಗಳಗಿ, ಎಸ್‌ಕೆ.ಮೆಳ್ಳಿಕೇರಿ, ಶಂಕರ ಸೊಗಲ, ಎಸ್.ಡಿ.ಬೂದಿಹಾಳ, ಎಸ್.ವಿ.ಇಂಗಳಗಿ, ರವಿ ಮೂಗಬಸವ, ಈರಣ್ಣ ಬೆಂಡಿಗೇರಿ ವೇದಿಕೆಯ ಮೇಲಿದ್ದರು. ಈರಪ್ಪ ಹುರಳಿ, ಶಿವರಾಜ ಮಾಕಿ, ಸಿದ್ದಪ್ಪ ಗುಮ್ಮಗೋಳ, ಶಿವಪ್ಪ ಹಿರುಣ್ಣವರ, ದೇಮಪ್ಪ ಮೂಗಬಸವ, ನಾಗಪ್ಪ ತಳವಾರ, ಶ್ರೀಶೈಲ ಮತ್ತಿಕೊಪ್ಪ, ಮಾಜಿ ಸಿಇಓ ರುದ್ರಪ್ಪ ಹುಲಿಕಟ್ಟಿ, ಬೈಲಪ್ಪ ಹುಂಬಿ, ಮಲ್ಲಪ್ಪ ಮದಲಭಾಂವಿ, ಸೋಮಪ್ಪ ಯರಡಾಲ, ಸಂಜು ಪಾಟೀಲ, ಬಸವರಾಜ ದುಗ್ಗಾಣಿ, ಪ್ರಶಾಂತ ಹುಂಬಿ, ಶೇಖರ ಇಳಿಗೇರ ಇತರರು ಇದ್ದರು.

ಸಂಸ್ಥೆಯ ಗುಮಾಸ್ತ ಪ್ರಸಾದ ಹುಂಬಿ ಸ್ವಾಗತಿಸಿದರು, ಮುಖ್ಯಕಾರ್ಯನಿರ್ವಾಹಕ ಕಲ್ಲಪ್ಪ ಚಳಕೊಪ್ಪ ಕಾರ್ಯಕ್ರಮ ನಿರೂಪಿಸಿದರು, ಶಂಕರ ಮಲ್ಲಣ್ಣವರ ವಂದಿಸಿದರು.
ನೆರೆಯಿಂದಾಗಿ ಹಾನಿಗೊಳಗಾದ ಮನೆಗಳಿಗೆ ಶೀಘ್ರ ಪರಿಹಾರ ಸಚಿವೆ ಶಶಿಕಲಾ ಜೊಲ್ಲೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button