Kannada NewsLatest

ಕಿತ್ತೂರಿಗೆ ಔಷಧ ಕಳುಹಿಸಿಕೊಟ್ಟ ಆನಂದ ಮಾಮನಿ

https://youtu.be/PpfGR55-tcw

 ಪ್ರಗತಿವಾಹಿನಿ ಸುದ್ದಿ, ಚನ್ನಮ್ಮ ಕಿತ್ತೂರು  – ರೋಗಿಗೆ ಮಾತ್ರೆಗಳು ಸಿಗದೆ ಪರದಾಡುವ ಸ್ಥಿತಿಯಲ್ಲಿ ಒಂದು ಪೋನ್ ಕರೆಗೆ ಸ್ಪಂದಿಸಿ ವಿಧಾನ ಸಭೆಯ ಉಪಸಭಾಪತಿ ಆನಂದ ಮಾಮನಿ ಎರಡು ತಿಂಗಳ ಮಾತ್ರೆಗಳನ್ನು ಪೂರೈಸಿದ್ದಾರೆ.
ಕೊರೋನಾ ವೈರಸ್ ಸೊಂಕಿನಿಂದ ಇಡೀ ದೇಶವೇ ಲಾಕ್ ಡೌನ್ ಆಗಿ ಸಾಮಾನ್ಯ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ರೋಗಿಗಳಿಗೆ ಅವಶ್ಯವಿರುವ ಮಾತ್ರೆಗಳು ದೊರೆಯದೆ ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಮಾನವಿತೆಯ ಮೆರೆದ ಘಟನೆಗಳು ಸಹ ನಡೆಯುತ್ತಿವೆ ಇದಕ್ಕೆ ಉದಾಹರಣೆ ಎಂದರೆ  ಕಿತ್ತೂರು ತಾಲೂಕಿನ ಕತ್ರಿದಡ್ಡಿ ಗ್ರಾಮದಲ್ಲಿ ನಡೆದಿದೆ.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಹನುಮಂತ ಕೊಟಬಾಗಿಯವರು ಬಡವರಿಗೆ ಆಹಾರ ದಾನ್ಯದ ಕಿಟ್ ಜೊತೆಗೆ ಧನಸಹಾಯವನ್ನು ಪ್ರತಿ ಗ್ರಾಮದಲ್ಲಿ ಮಾಡುತ್ತಿದ್ದಾರೆ. ಇದೇ ರೀತಿ ಕಿತ್ತೂರು ತಾಲೂಕಿನ ಕತ್ರಿದಡ್ಡಿ ಗ್ರಾಮದಲ್ಲಿ ಆಹಾರ ದಾನ್ಯದ ಕಿಟ್ ನೀಡುತ್ತಿದ್ದಾಗ ಗೀತಾ ಬಡಿಗೇರ ಅವರು ನನಗೆ ಆಹಾರ ಬೇಡ ನನಗೆ ಮೂರ್ಚೆ ರೋಗವಿದ್ದು ಆದ ಕಾರಣ ಮಾತ್ರೆಗಳು ದೊರೆಯುತ್ತಿಲ್ಲ ಮಾತ್ರೆಗಳ ಅವಶ್ಯವಿದೆ. ಇಲ್ಲವಾದರೆ ಆರೋಗ್ಯದಲ್ಲಿ ತೊಂದರೆ ಉಂಟಾಗುತ್ತದೆ ಎಂದು ಬೇಡಿಕೊಂಡು ಈ ಕೂಡಲೇ ಮಾತ್ರೆಗಳನ್ನು ಪೂರೈಸಲು ಮನವಿ ಮಾಡಿಕೊಂಡಳು.
ಇದಕ್ಕೆ ಸ್ಪಂದಿಸಿದ ಹನುಮಂತ ಕೊಟಬಾಗಿ  ಬೇರೆ ಬೇರೆ ಕಡೆ ಮಾತ್ರೆಗಳಿಗೆ ವಿಚಾರಿಸಿದರು. ಕೊನೆಗೆ ಸವದತ್ತಿ ಕ್ಷೇತ್ರದ ಶಾಸಕ ಮತ್ತು ವಿಧಾನಸಭೆಯ ಉಪಸಭಾಪತಿ ಆನಂದ ಮಾಮನಿಯವರ ಗಮನಕ್ಕೆ ತಂದರು.
ಇದಕ್ಕೆ ಸ್ಪಂಧಿಸಿದ ಅವರು, ಎರಡು ತಿಂಗಳಿಗೆ ಅವಶ್ಯವಿರುವ ಮಾತ್ರೆಗಳ ಜೊತೆಗೆ ಹಣ್ಣು ಮತ್ತು ಎಳನೀರು ಕಾಯಿಗಳನ್ನು ತಮ್ಮ ವಾಹನದಲ್ಲಿ ಸವದತ್ತಿ ಪಟ್ಟಣದಿಂದ 50.ಕಿ.ಮಿ ದೂರದ ಕಿತ್ತೂರು ಪಟ್ಟಣಕ್ಕೆ ಕಳುಹಿಸಿ ಕಿತ್ತೂರಿನ ಪಿಎಸೈ ಕುಮಾರ ಹಿತ್ತಲಮನಿ, ಹನುಮಂತ ಕೊಟಬಾಗಿ ಅವರಿಗೆ ಹಸ್ತಾಂತರಿಸಿ ಆ ಮಾತ್ರೆಗಳನ್ನು ಕತ್ರಿದಡ್ಡಿ ಗ್ರಾಮದ ಮಹಿಳೆಗೆ ತಲುಪಿಸಿದರು.
ಕತ್ರಿದಡ್ಡಿ ಗ್ರಾಮದ ಗೀತಾ ಬಡಿಗೇರ ಮಾತನಾಡಿ, ಮಾತ್ರೆಗಳು ದೊರೆಯದೆ ನನ್ನ ಜೀವಕ್ಕೆ ತೊಂದರೆಯಾಗುವ ಸ್ಥಿತಿ ಇತ್ತು. ಇಂತಹ ಸಂದರ್ಭದಲ್ಲಿ ಹನುಮಂತ ಕೊಟಬಾಗಿಯವರು ಬಂದು ಆಹಾರ ದಾನ್ಯದ ಕಿಟ್ ನೀಡಿದರು. ಆಗ ನನ್ನ ಸಮಸ್ಯೆಯನ್ನು ಅವರ ಗಮನಕ್ಕೆ ತಂದಾಗ ಅವರು ಸವದತ್ತಿ ಶಾಸಕರ ಗಮನಕ್ಕೆ ತಂದಿದ್ದಾರೆ. ಶಾಸಕರು ಕೂಡಲೇ ಎರಡು ತಿಂಗಳಿಗೆ ಆಗುವಷ್ಟು ಮಾತ್ರೆಗಳನ್ನು ಪೂರೈಸಿ ಸಹಾಯ ಮಾಡಿದ್ದಾರೆ. ಮಾತ್ರೆಗಳನ್ನು ಪೂರೈಸಲು ಸಹಕರಿಸಿದ ಎಲ್ಲರಿಗೂ ಚಿರಋಣಿಯಾಗಿದ್ದೇನೆ ಎಂದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಹನುಮಂತ ಕೊಟಬಾಗಿ, ಕಿತ್ತೂರು ಪಿ.ಎಸ್.ಐ ಕುಮಾರ ಹಿತ್ತಲಮನಿ, ಡಾ. ಸುದನ್ವ ಕೊಟಬಾಗಿ, ಮಾಜಿ ತಾಪಂ ಸದಸ್ಯೆ ಸರಸ್ವತಿ ಹೈಬತ್ತಿ,  ಆಶಾ ಕಾರ್ಯಕರ್ತೆ ಯಮುನಾ ಚಿಂಗಳೆ ಸೇರಿದಂತೆ ಇತರರು ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button