ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ನಗರ ಬಸ್ ನಿಲ್ದಾಣ ಕಾಮಗಾರಿ ನಡೆಯುತ್ತಿದೆ. ಕಳೆದ ಹಲವು ತಿಂಗಳಿನಿಂದ ಕಾಮಗಾರಿ ನಡೆಯುತ್ತಿದ್ದು, ಲಾಕ್ ಡೌನ್ ನಿಂದಾಗಿ ಕೆಲವು ದಿನ ಕಾಮಗಾರಿ ನಿಲ್ಲಿಸಲಾಗಿತ್ತು.
ಇದೀಗ ಪುನಃ ಕೆಲಸ ಶುರುವಾಗಿದೆ. ಮಂಗಳವಾರ ಕಾಮಗಾರಿ ನಡೆಸುವಾಗ ಅಗೆದ ಸ್ಥಳದಲ್ಲಿ ಪ್ರಾಚೀನ ಶಿಲಾ ಶಾಸನವೊಂದು ಪತ್ತೆಯಾಗಿದೆ. ಒಂದು ಗೋವಿನ ಚಿತ್ರದ ರೀತಿಯಲ್ಲಿದ್ದರೆ ಇನ್ನೊಂದು ಮನುಷ್ಯನನ್ನು ಹೋಲುವ ಕೆತ್ತನೆ ಇದೆ. ಇನ್ನೂ ಕೆಲವು ಕೆತ್ತನೆಗಳು ಅದರಲ್ಲಿವೆ.
ಶಿಲಾ ಶಾಸನ ಪತ್ತೆಯಾದ ತಕ್ಷಣಕೆಲಸಗಾರರು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶ ಶಶಿಧರ ಕುರೇರ ಅವರಿಗೆ ಮಾಹಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಕುರೇರ ಅದನ್ನು ಪರಿಶೀಲಿಸಿ, ಧಾರವಾಡದ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಪತ್ರ ಬರೆದಿದ್ದಾರೆ.
ಸ್ಥಳ ಪರಿಶೀಲಿಸಿ, ಶಿಲಾ ಶಾಸನವನ್ನು ತಮ್ಮ ಸುಪರ್ಧಿಗೆ ಪಡೆಯುವ ಜೊತೆಗೆ ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುವಂತೆ ಕೋರಿದ್ದಾರೆ. ಶಿಲಾ ಶಾಸನದ ಫೋಟೋವನ್ನೂ ಜೊತಗೆ ಕಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ