Kannada NewsLatest

ಅಂಧ ಮಕ್ಕಳ ಕಾಲೇಜು ಶಿಕ್ಷಣಕ್ಕೆ ನೆರವಾಗಿ; ಅಂಧರ ಬಾಳಿಗೆ ಬೆಳಕಾಗಿ

ಪ್ರಗತಿವಾಹಿನಿ ಸುದ್ದಿ; ಹಾವೇರಿ: ಅಂಧರ ಜೀವನ ಬೆಳಕು ಸಂಸ್ಥೆಯ ವಿದ್ಯಾರ್ಥಿಗಳ ಕಾಲೇಜು ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ನೆರವು ನೀಡುವಂತೆ ಸಂಸ್ಥೆಯ ಅಧ್ಯಕ್ಷ ನಾಗನಗೌಡ ಡಿ.ಬೆಳ್ಳೂಳ್ಳಿ ಮನವಿ ಮಾಡಿದ್ದಾರೆ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಪಟ್ಟಣದಲ್ಲಿ 5 ವರ್ಷದ ಹಿಂದೆ ಆರಂಭವಾಗಿರುವ ಅಂಧರ ಜೀವನಬೆಳಕು ಸಂಸ್ಥೆ ಅಂಧಮಕ್ಕಳಿಗೆ ಊಟ, ವಸತಿ, ಶಿಕ್ಷಣ, ಸಾರಿಗೆ ಸಂಪರ್ಕ, ಕಂಪ್ಯೂಟರ್ ಶಿಕ್ಷಣ, ಆಂಗ್ಲ ಭಾಷೆ ಕಲಿಕೆ, ಕ್ರೀಡೆ, ಮನರಂಜನೆ, ಸಂಗೀತ, ನಾಟಕ ಮತ್ತು ಜೀವನ ಕೌಶಲ್ಯತೆ ಕಲಿಸಿಕೊಡುತ್ತಿದೆ. ಈ ತರಬೇತಿಗಳು ಪೂರ್ಣಗೊಂಡ ನಂತರ ಸರ್ಕಾರ, ಸರ್ಕಾರೇತರ ಉದ್ಯೋಗಗಳನ್ನು ಪಡೆದುಕೊಳ್ಳಲು ಅಂಧ ವಿದ್ಯಾರ್ಥಿಗಳಿಗೆ ನೆರವು ಮಾಡಿಕೊಡುತ್ತಿದೆ.

ಈ ಎಲ್ಲಾ ಸೌಲಭ್ಯಗಳಿಂದ ವಿಶೇಷಚೇತನರು ಸಮಾಜದಲ್ಲಿ ಗೌರವದಿಂದ ಸಾಮಾಜಿಕ ಹಾಗೂ ಆರ್ಥಿಕವಾಗಿ ಸ್ವಾವಲಂಬನೆ ಬದುಕು ನಡೆಸಲು ಸಹಕಾರಿ ಆಗುತ್ತದೆ.

ಈ ಸಂಸ್ಥೆಯ ಅಧ್ಯಕ್ಷ  ನಾಗನಗೌಡ ಡಿ. ಬೆಳ್ಳೂಳ್ಳಿ ಇವರು ಸಹ ಸಂಪೂರ್ಣ ಅಂಧರು.  ಈ ಸಂಸ್ಥೆಯನ್ನು 2018 ಜುಲೈ, 1 ರಂದು ಪ್ರಾರಂಭಿಸುವುದರ ಮೂಲಕ ಅನೇಕ ಬಡ ಅಂಧಮಕ್ಕಳಿಗೆ ಶಿಕ್ಷಣ ಕಲ್ಪಿಸಿ ಅಂಧಮಕ್ಕಳ ಬಾಳಿಗೆ ಭರವಸೆಯ ಬೆಳಕನ್ನು ಮೂಡಿಸುವ ನಿಸ್ವಾರ್ಥ ಸೇವೆಯನ್ನು  ನಾಗನಗೌಡ ಡಿ. ಬೆಳ್ಳೂಳ್ಳಿ  ಮಾಡುತ್ತಿದ್ದಾರೆ.

ಈಗಿನ ಕಾಲದಲ್ಲಿ ಒಂದು ಕುಟುಂಬವನ್ನು ನಡೆಸಲು ಹರಸಾಹಸ ಪಡುವ ಈ ಕಾಲದಲ್ಲಿ ಎದೆಗುಂದದೆ ತಮ್ಮ ಅಂಧತ್ವವನ್ನು ಮೆಟ್ಟಿನಿಂತು ತನ್ನಂತೆಯೇ ಇರುವ ದೃಷ್ಟಿ ವಿಕಲಚೇತನರಿಗಾಗಿ ಶ್ರಮಿಸುತ್ತಿರುವ ಇವರ ಕೆಲಸವನ್ನು ಮೆಚ್ಚತಕ್ಕದ್ದು.

2022-23 ನೇ ಸಾಲಿನ ಪದವಿ ಮತ್ತು ಪದವಿ ಪದವಿಪೂರ್ವ ಸ್ನಾತಕೋತ್ತರ ಕಾಲೇಜು ಪ್ರವೇಶ ಪಡೆಯಲು ಕಾಲೇಜು ಪ್ರವೇಶ ಶುಲ್ಕ ಕಟ್ಟಲು ನಾಗನಗೌಡ ಡಿ. ಬೆಳ್ಳೂಳ್ಳಿ ಇವರಿಗೆ ತೊಂದರೆ ಆಗುತ್ತಿದೆ. ಹೀಗಾಗಿ ಸಾರ್ವಜನಿಕರು ಸಹಾಯ ಮಾಡಿ ನಮ್ಮ ಅಂಧ ಮಕ್ಕಳ ಬಾಳಿಗೆ ಬೆಳಕಾಗಿ ಎಂದು ಮನವಿ ಮಾಡಿದ್ದಾರೆ.
ಸಹಾಯ ಮಾಡುವ ದಾನಿಗಳು ನೇರವಾಗಿ ಸಂಸ್ಥೆಯ ಖಾತೆಗೆ ಜಮೆ ಮಾಡಬಹುದು.

ಬ್ಯಾಂಕಿನ ಹೆಸರು ಕೆನರಾ ಬ್ಯಾಂಕ್ ರಾಣಿಬೆನ್ನೂರ್, ಖಾತೆ ಸಂಖ್ಯೆ 0568101043349, IFSC cnrb0000568.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂಬರ್ 9535951112

ಬೆಳಗಾವಿ: ಕೆಲಸಕ್ಕೆಂದು ಹೋದ ಯುವತಿ ನಾಪತ್ತೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button