ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ಆಂಧ್ರಪ್ರದೇಶದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳ ಬಗ್ಗೆ ಗೃಹ ಸಚಿವೆಯಾಗಿರುವ ತಾನೆತಿ ವನಿತಾ ನೀಡುತ್ತಿರುವ ಬೇಜವಾಬ್ದಾರಿ ಹೇಳಿಕೆಗಳಿಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ.
ಮೇ 1ರಂದು 25 ವರ್ಷದ ಗರ್ಬಿಣಿ ಮೇಲೆ ರೇಪಲ್ಲೆ ರೈಲು ನಿಲ್ದಾಣದಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಈ ಬಗ್ಗೆ ಹೇಳಿಕೆ ನೀಡಿರುವ ಗೃಹ ಸಚಿವೆ ತಾನೆತಿ ವನಿತಾ, ಅನಿರೀಕ್ಷಿತ ಸಂದರ್ಭದಲ್ಲಿ ಅತ್ಯಾಚಾರವಾಗಿದೆ ಹೊರತು ಉದ್ದೇಶಪೂರ್ವಕವಾಗಿ ನಡೆದ ಘಟನೆಯಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಈ ಬಗ್ಗೆ ವಿವರಣೆಯನ್ನೂ ನೀಡಿರುವ ಗೃಹ ಸಚಿವೆ, ಆರೋಪಿಗಳು ಅತ್ಯಾಚಾರ ಮಾಡುವ ಉದ್ದೇಶ ಹೊಂದಿರಲಿಲ್ಲ. ಮದ್ಯದ ಅಮಲಿನಲ್ಲಿದ್ದ ಗಂಡಸರು ಮಹಿಳೆಯ ಪತಿಯನ್ನು ದೋಚುವ ಉದ್ದೇಶದಿಂದ ದಾಳಿ ನಡೆಸಿದ್ದರು. ಈ ವೇಳೆ ಮಹಿಳೆ ಮಧ್ಯಪ್ರವೇಶ ಮಾಡಿದ್ದಾಳೆ. ಹೀಗಾಗಿ ಅನಿರೀಕ್ಷಿತವಾಗಿ ಆಕೆ ಮೇಲೆ ಅತ್ಯಾಚಾರ ನಡೆದಿದೆ ಎಂದಿದ್ದಾರೆ.
ಘಟನೆ ಬಗ್ಗೆ ಹೇಳಿಕೆ ನೀಡಿದ್ದ ಮಹಿಳೆ ಪತಿ, ತನ್ನ ಮೇಲೆ ದುಷ್ಕರ್ಮಿಗಳು ರೈಲು ನಿಲ್ದಾಣದಲ್ಲಿ ಹಲ್ಲೆ ನಡೆಸುತ್ತಿದ್ದರು. ಈ ವೇಳೆ ತನ್ನ ಪತ್ನಿ ತಡೆಯಲು ಯತ್ನಿಸಿದ್ದಾಳೆ. ಈ ವೇಳೆ ಕೆಲ ಘಟನೆಗಳು ನಡೆದವು. ರೈಲ್ವೆ ಪೊಲೀಸರು ಸಹಾಯಕ್ಕೆ ಸಿಗಲಿಲ್ಲ ಎಂದು ಹೇಳಿದ್ದರು. ಮಹಿಳೆಯ ಪತಿಯ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವೆ, ರೈಲ್ವೆ ಪೊಲೀಸರು ಲಭ್ಯವಾಗದಿರುವುದನ್ನು ದೂಷಿಸಲಾಗದು. ರೈಲ್ವೆ ನಿಲ್ದಾಣಗಳಲ್ಲಿ ಹೆಚ್ಚಿನ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುವುದು ಎಂದು ಹೇಳಿದ್ದಾರೆ.
ಈ ಹಿಂದೆ ವೈಜಾಗ್ ನಲ್ಲಿ ಬಾಲಕಿ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಹೇಳಿಕೆ ನೀಡಿದ್ದ ಸಚಿವೆ ವನಿತಾ ಮಗುವಿನ ಸುರಕ್ಷತೆಯ ಜವಾಬ್ದಾರಿ ಆಕೆಯ ತಾಯಿಯದ್ದು ಎಂದಿದ್ದರಲ್ಲದೇ ಅತ್ಯಾಚಾರ ಘಟನೆಗೆ ಅವರ ಮಾನಸಿಕ ಪರಿಸ್ಥಿತಿ ಹಾಗೂ ಬಡತನ ಕಾರಣ ಎಂದು ಹೇಳಿದ್ದರು. ಗೃಹಸಚಿವರಾಗಿರುವ ತಾನೆತಿ ವನಿತಾ ಅವರ ಹೇಳಿಕೆಗಳು ವಿವದಕ್ಕೆ ಕಾರಣವಾಗಿವೆ.
ಬೆಳಗಾವಿ ಡಿಸಿ ಎಂ.ಜಿ.ಹಿರೇಮಠ ಸೇರಿದಂತೆ 17 ಐಎ ಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ