ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿ ಮಸೂದೆಯನ್ನು ಸಿಎಂ ಜಗನ್ ಮೋಹನ್ ರೆಡ್ದಿ ನೇತೃತ್ವದ ಸರ್ಕಾರ ವಾಪಸ್ ಪಡೆದಿದೆ.
ಆಂಧ್ರಕ್ಕೆ ಮೂರು ರಾಜಧಾನಿ ಎಂಬ ವಿವಾದಿತ ಮಸೂದೆ ವಾಪಸ್ ಪಡೆಯಲಾಗಿದ್ದು, ಇನ್ಮುಂದೆ ಅಮರಾವತಿ ಮಾತ್ರ ರಾಜಧಾನಿಯಾಗಿರಲಿದೆ ಎಂದು ಸಿಎಂ ಜಗನ್ ರೆಡ್ಡಿ ಘೋಷಿಸಿದ್ದಾರೆ.
ರಾಜ್ಯ ಸರ್ಕಾರದ ನಿರ್ಧಾರವನ್ನು ಎಜಿ ಹೈಕೋರ್ಟ್ ಗೆ ತಿಳಿಸಿದ್ದು, ಅಮರಾವತಿಯೊಂದೇ ರಾಜಧಾನಿ ಎಂದು ಸಿಎಂ ನಿರ್ಧಾರಿಸಿದ್ದಾಗಿ ಹಾಗೂ ಈ ನಿಟ್ಟಿನಲ್ಲಿ ರಾಜ್ಯ ಸಚಿವ ಸಂಪುಟ ಸಭೆಯಲ್ಲಿಯೂ ತೀರ್ಮಾನ ಕೈಗೊಂಡಿರುವುದಾಗಿ ವಿವರಿಸಿದ್ದಾರೆ ಎಂದು ತಿಳಿದುಬಂದಿದೆ.
ಅನ್ನದಾನೇಶ್ವರ ಮಠದ ಡಾ.ಸಂಗನಬಸವ ಸ್ವಾಮೀಜಿಗಳು ಲಿಂಗೈಕ್ಯ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ