
ಪ್ರಗತಿವಾಹಿನಿ ಸುದ್ದಿ: ಉಪಮುಖ್ಯಮಂತ್ರಿ ಕಚೇರಿ ಎದುರಿನ ಕಟ್ಟಡದಿಂದ ಜಿಗಿದು ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಕಚೇರಿ ಎದುರಿನ ಬೃಹತ್ ಕಟ್ಟಡದಿಂದ ಜಿಗಿದು ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದು, ತಕ್ಷಣ ಪೊಲೀಸರು ಮಹಿಳೆಯನ್ನು ರಕ್ಷಿಸಿದ್ದಾರೆ.
ವೈ ಎಸ್ ಆರ್ ಕಾಂಗ್ರೆಸ್ ಶ್ರೀಕಾಕುಳಂ ನಲ್ಲಿ ತಮ್ಮ ಭೂಮಿಯನ್ನು ಕಬಳಿಸಿದೆ. ಹಲವು ಬಾರಿ ಮನವಿ ಮಾಡಿಕೊಂಡರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಮಹಿಳೆ ಕಣ್ಣೀರಿದ್ದಾರೆ.
ಮಹಿಳೆಯನ್ನು ಶ್ರೀಕಾಕುಳಂ ಜಿಲ್ಲೆಯ ನಿವಾಸಿ ದುರ್ಗಾದೇವಿ ಎಂದು ಗುರುತಿಸಲಾಗಿದೆ. ಡಿಸಿಎಂ ಕಚೇರಿಯ ಕ್ಯಾಂಪ್ ಆಫೀಸ್ ಬಳಿಯ ಕಟ್ಟಡವನ್ನು ಏರಿ ಕಟ್ಟಡದಿಂದ ಜಿಗಿಯಲು ಮುಂದಾಗಿದ್ದರು. ಸದ್ಯ ಮಹಿಳೆಯನ್ನು ರಕ್ಷಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ