ಪ್ರಗತಿವಾಹಿನಿ ಸುದ್ದಿ; ಮುಂಬೈ: ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ವಿರುದ್ಧದ ತನಿಖೆಗೆ ಸಂಬಂಧಿಸಿದಂತೆ ಇದೀಗ ಮುಂಬೈ ಮೂಲದ ವಕೀಲ ಆನಂದ್ ದಾಗಾ ಅವರನ್ನು ಸಿಬಿಐ ಬಂಧಿಸಿದೆ.
ಸಿಬಿಐ ತನಿಖೆ ಮೇಲೆ ಪ್ರಭಾವ ಬೀರುತ್ತಿರುವ ಆರೋಪದ ಮೇಲೆ ದಾಗಾ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ವಿಚಾರಣೆ ಬಳಿಕ ವಕೀಲ ಆನಂದ್ ದಾಗಾ ಹಾಗೂ ಮತ್ತೋರ್ವ ವಕೀಲರನ್ನು ಬಂಧಿಸಲಾಗಿದೆ.
ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಅವರು ಮುಂಬೈನ ಬಾರ್ ಮತ್ತು ರೆಸ್ಟೋರೆಂಟ್‌ಗಳಿಂದ ತನ್ನ ಪರವಾಗಿ ಲಂಚವನ್ನು ಸಂಗ್ರಹಿಸುವಂತೆ ಆಗಿನ ಸಚಿವ ಅನಿಲ್ ದೇಶ್ ಮುಖ್ ಪೊಲೀಸರನ್ನು ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಅನಿಲ್ ದೇಶ್ ಮುಖ್ ವಿರುದ್ಧ ಸಿಬಿಐ ತನಿಖೆ ನಡೆಯುತ್ತಿದ್ದು, ಈ ಮಧ್ಯೆ ಪೊಲೀಸರ ಆರೋಪಗಳ ತನಿಖೆಯ ಅಧಿಕೃತ ವರದಿ ಸೋರಿಕೆ ಮಾಡಲಾಗಿದೆ ಹಾಗೂ ತನಿಖೆ ಮೇಲೆ ಪ್ರಹಾವ ಬೀರಲಾಗುತ್ತಿದೆ ಎಂಬ ಕಾರಣಕ್ಕೆ ದೇಶ್ ಮುಖ್ ಪರ ವಕೀಲರನ್ನು ಸಿಬಿಐ ಬಂಧಿಸಿದೆ.
ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ; ಪಿಎಸ್ ಐ ಬಂಧನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ