ಪ್ರಗತಿವಾಹಿನಿ ಸುದ್ದಿ: ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಸಂಸ್ಕೃತ ಅಧ್ಯಯನ ಪೀಠಕ್ಕೆ ಸಲ್ಲಿಸಿದ ದಶೋಪನಿಶತ್ ಮತ್ತು ದಶ ಶರಣರ ದೃಷ್ಟಿಯಲ್ಲಿ ಈಶ್ವರ ಸ್ವರೂಪ ಎಂಬ ಪ್ರಬಂಧವನ್ನು ಮಂಡಿಸಿದ ಕುಂದರಗಿ ಅಂಕಲಗಿ ಅಡವಿಸಿದ್ದೇಶ್ವರ ಸಂಸ್ಥಾನ ಮಠದ ಶ್ರೀ ಅಮರಸಿದ್ದೇಶ್ವರ ಸ್ವಾಮೀಜಿಗೆ ಡಾಕ್ಟರೇಟ್ ಪದವಿ ಲಭಿಸಿದೆ. ಈ ಸಂದರ್ಭದಲ್ಲಿ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಡಾ. ಅಮರ ಸಿದ್ದೇಶ್ವರ ಸ್ವಾಮೀಜಿಗೆ ಹುಕ್ಕೇರಿ ಹಿರೇಮಠದ ಗೌರವವನ್ನು ನೀಡಿ ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು, ಅಮರ ಸಿದ್ದೇಶ್ವರ ಸ್ವಾಮೀಜಿ ಅವರು ಅದ್ಬುತವಾದ ಪಿಎಚ್ ಡಿ ಪ್ರಬಂಧವನ್ನು ಮಂಡಿಸಿ ಇಂದು ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ. ಶ್ರೀಗಳು ಉತ್ತಮ ಪ್ರವಚನಕಾರರು, ಸಂಘಟನಾಕಾರರು, ಎಂ.ಎ ಪದವೀಧರರು ಅಷ್ಟೇ ಅಲ್ಲದೆ ನಮ್ಮ ಸ್ವಾಮೀಜಿಯಲ್ಲಿ ಎಲ್ ಎಲ್ ಬಿ ಮಾಡಿರುವ ಪೂಜ್ಯರಿಗೆ ಇವತ್ತ ಅವರು ಸಲ್ಲಿಸಿದ ಪ್ರಬಂಧಕ್ಕೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿರುವುದು ನಮಗೆ ಸಂತೋಷ ತಂದಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಅಮರ ಸಿದ್ದೇಶ್ವರ ಸ್ವಾಮೀಜಿ ಅವರು, ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯರು ಸಮನ್ವಯವಾಧಿಗಳು ಅಷ್ಟೆ ಅಲ್ಲದೆ, ಯಾರೇ ಪ್ರತಿಭಾನ್ವಿತರು ಇದ್ದರೆ ಅವರಿಗೆ ಗೌರವಿಸುವ ಮಾತೃ ಗುಣ ಇದೆ. ಚಿಕ್ಕ ವಯಸ್ಸಿನಿಂದ ಶ್ರೀಗಳನ್ನು ನೋಡುತ್ತ ಬಂದಿದ್ದೇವೆ. ಇವತ್ತು ನಮಗೆ ಡಾಕ್ಟರೇಟ್ ಬಂದ ಸಂದರ್ಭದಲ್ಲಿ ಬೆಳಗಾವಿ ಹುಕ್ಕೇರಿ ಹಿರೇಮಠದ ಗೌರವ ನೀಡಿ ಸನ್ಮಾನಿಸಿದ್ದು ಸಂತೋಷ ತಂದಿದೆ. ಸಮಾಜಕ್ಕಾಗಿ ಹಾನಗಲ್ ಕುಮಾರಸ್ವಾಮಿಗಳವರ ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುತ್ತೇವೆ ಎಂದರು.
ಈ ಸಂದರ್ಭದಲ್ಲಿ ಶ್ರೀ ಗುರುದೇವ ಸ್ವಾಮೀಜಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ