Kannada NewsKarnataka News

ಕೆಓಎಫ್ ನಿರ್ದೇಶಕರಾಗಿ ಅಣ್ಣಾಸಾಹೇಬ ಜೊಲ್ಲೆ ಆಯ್ಕೆ

ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ : ಕರ್ನಾಟಕ ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರಿ ಸಂಘಗಳ ಒಕ್ಕೂಟ  ನಿ., ಹುಬ್ಬಳ್ಳಿ ಇದರ ನಿರ್ದೇಶಕ ಮಂಡಳಿ ಚುನಾವಣೆಯಲ್ಲಿ ಅವಿರೋಧವಾಗಿ ಬೆಳಗಾವಿ ಜಿಲ್ಲೆಯಿಂದ ಮಾಜಿ ಸಂಸದ ಹಾಗೂ ಜೊಲ್ಲೆ ಗ್ರೂಪ್ ನ ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜೊತೆಗೆ, ಬೆಳಗಾವಿ ಜಿಲ್ಲೆಯಿಂದ ಪ್ರಭಾಕರ ಡಬ್ಬನ್ನವರ, ದೀಪಕ ಪಾಟೀಲ, ಬಾಗಲಕೋಟ ಜಿಲ್ಲೆಯಿಂದ ಬಿ.ಟಿ.ಬೆನಕಟ್ಟಿ, ಹನುಮಂತಗೌಡ ಪಾಟೀಲ, ವಿಜಯಪುರ ಜಿಲ್ಲೆಯಿಂದ ದಯಾನಂದ ಅಲಗೌಂಡ, ಹಾವೇರಿಯಿಂದ ಜಗದೀಶ ತಂಬಾಕದ, ಧಾರವಾಡ ಜಿಲ್ಲೆಯಿಂದ ಮಲ್ಲಿಕಾರ್ಜುನ ಅಕ್ಕಿ ಸಹ ಆಯ್ಕೆಯಾದರು.

Related Articles

ಸದಸ್ಯರಾಗಿ ಆಯ್ಕೆಯಾದ ಎಲ್ಲರಿಗೂ ಅಭಿನಂದನೆಗಳು, ಚುನಾವಣೆಗೆ ಸಹಕರಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ಎಂದು ಅಣ್ಣಾಸಾಹೇಬ ಜೊಲ್ಲೆ ತಿಳಿಸಿದರು. ಹುಬ್ಬಳ್ಳಿ ತಹಶೀಲ್ದಾರರಾದ ಪ್ರಕಾಶ ನಾಶಿ ಅವರು ಚುನಾವಣೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

Home add -Advt

Related Articles

Back to top button