Latest

ಸಂಸದ ಅಣ್ಣಾ ಸಾಹೆಬ್ ಜೊಲ್ಲೆ ಪ್ರಶ್ನೆಗೆ ಅಮಿತ್ ಶಾ ಉತ್ತರ

ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಸಹಕಾರ ವಲಯದ ಮಾರ್ಗಸೂಚಿಗಳ ಬಗ್ಗೆ ನವದೆಹಲಿಯಲ್ಲಿ ನಡೆಯುತ್ತಿರುವ ಸಂಸತ ಅಧಿವೇಶನದಲ್ಲಿ ಚಿಕ್ಕೋಡಿ ಲೋಕಸಭಾ ಸದಸ್ಯ ಅಣ್ಣಾಸಾಹೇಬ ಜೊಲ್ಲೆ  ಪ್ರಶ್ನೆಗೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ ಶಾ ಉತ್ತರಿಸಿದ್ದಾರೆ.

ಸಹಕಾರಿ ವಲಯಕ್ಕೆ ಪ್ರತ್ಯೇಕ ಆಡಳಿತಾತ್ಮಕ ವ್ಯವಸ್ಥೆ ಒದಗಿಸಲು ಮತ್ತು ‘ಸಹಕಾರದಿಂದ ಏಳಿಗೆಗೆ’ ದೃಷ್ಟಿಕೋನವನ್ನು ಸಾಧಿಸಲು ಹೊಸ ‘ಸಹಕಾರ’ ಸಚಿವಾಲಯವನ್ನು ರಚಿಸಲಾಗಿದೆ. ಈಗಿರುವ ಕಾರ್ಯಕ್ರಮಗಳನ್ನು ಹೊರತುಪಡಿಸಿ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಕ್ಷೇತ್ರದ ಅಗತ್ಯಕ್ಕೆ ತಕ್ಕಂತೆ ಸೂಕ್ತ ಸಮಯದಲ್ಲಿ ಅನುಷ್ಠಾನಗೊಳಿಸಲಾಗುವುದು.
ಎಲ್ಲಾ ವಲಯಗಳಲ್ಲಿ ಸಹಕಾರಿ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುವ ನಿರ್ದಿಷ್ಟ ಯೋಜನೆಗಳು ಸಹಕಾರಿ ಚಳುವಳಿಯನ್ನು ಹೊಂದಿದ್ದು, ಆರ್ಥಿಕತೆಯನ್ನು ಉತ್ತೇಜಿಸಲು ಮತ್ತು ‘ಸಹಕಾರದ ಮೂಲಕ ಸಮೃದ್ಧಿ’ ದೃಷ್ಟಿಕೋನವನ್ನು ಪೂರೈಸಲು ಕ್ಷೇತ್ರದ ಅಗತ್ಯಕ್ಕೆ ಅನುಗುಣವಾಗಿ ಹೊರಹೊಮ್ಮುತ್ತಿದೆ. ದೇಶದಲ್ಲಿ ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರಗಳೊಂದಿಗೆ ಸಮನ್ವಯವು ಸಹಕಾರ ಸಚಿವಾಲಯದ ಆದೇಶದ ಅವಿಭಾಜ್ಯ ಅಂಗವಾಗಿದೆ ಎಂದು ತಿಳಿಸಿದ್ದಾರೆ.

 

ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ (ಎನ್‌ಸಿಡಿಸಿ) ದ ಗುರಿ ಮತ್ತು ಉದ್ದೇಶಗಳ ಮತ್ತು ಸಹಕಾರ ವಲಯಕ್ಕೆ ಅಭಿವೃದ್ದಿ ಕೆಲಸದ ಬಗ್ಗೆ ನವದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ ಅಧಿವೇಶನದಲ್ಲಿ ಚಿಕ್ಕೋಡಿ ಲೋಕಸಭಾ ಸದಸ್ಯ ಅಣ್ಣಾಸಾಹೇಬ ಜೊಲ್ಲೆ ಯವರ ಪ್ರಶ್ನೆಗೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಉತ್ತರಿಸಿದ್ದಾರೆ.

ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ ಕಾಯ್ದೆ 1962 ಅಡಿಯಲ್ಲಿ ಸಹಕಾರ ವಲಯದ ಉತ್ಪಾದನೆ, ಸಂಸ್ಕರಣೆ, ಮಾರುಕಟ್ಟೆ ಸಂಗ್ರಹಣೆ, ರಪ್ತು ಮತ್ತು ಕೃಷಿ ಉತ್ಪನ್ನಗಳ ಆಮದು, ಆಹಾರ ಪದಾರ್ಥಗಳು, ಕೈಗಾರಿಕಾ ಸರಕುಗಳು, ಜಾನುವಾರುಗಳು, ಕೆಲವು ಇತರ ಸರಕುಗಳು ಮತ್ತು ಸೇವೆಗಳ ಸಹಕಾರದ ತತ್ವಗಳು ಮತ್ತು ವಿಷಯಗಳಿಗಾಗಿ ಕಾರ್ಯಕ್ರಮಗಳನ್ನು ಯೋಜಿಸಲು ಮತ್ತು ಉತ್ತೇಜಿಸಲು ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮವು ಸಹಕಾರ ವಲಯದ ಅಭಿವೃದ್ದಿ ಕೆಲಸಗಳನ್ನು ಮಾಡುತ್ತಿದೆ. ನಿಗಮದ ಚಟುವಟಿಕೆಗಳು ಸಹಕಾರಿ ಸಂಘಗಳಲ್ಲಿ ಸದಸ್ಯರಾಗಿರುವ ರೈತರಿಗೆ ಸಹಾಯ ಮಾಡುತ್ತಿದೆ.

೩೦.೦೬.೨೦೨೧ ರಂತೆ ನಿಗಮವು ಸಹಕಾರಿ ಸಂಘಗಳಿಗೆ ಸಂಚಿತ ಆರ್ಥಿಕ ಸಹಾಯವನ್ನು ರೂ.೧.೮೬ ಲಕ್ಷ ಕೋಟಿಗೆ ವಿಸ್ತರಿಸಿದೆ. ಈ ಪೈಕಿ ಕಳೆದ ೭ ವರ್ಷಗಳಲ್ಲಿ ರೂ.೧.೩೧ ಲಕ್ಷ ಕೋಟಿಗಳನ್ನು ವಿತರಿಸಲಾಗಿದೆ ೨೦೧೪-೧೫ ರಿಂದ ೨೮೬% ಹೆಚ್ಚಳವನ್ನು ಸೂಚಿಸುತ್ತದೆ ೧೯೬೩-೨೦೧೪ ರ ಸಾಲಿಗೆ ಹೊಲಿಸಿದರೆ ಎನ್‌ಸಿಡಿಸಿ ಯ ಹಣಕಾಸು ಯೋಜನೆಗಳನ್ನು ಕೃಷಿ ಸಂಸ್ಕರಣೆ, ಸಾಲ, ಒಳಹರಿವು, ಕಂಪ್ಯೂಟರೀಕರಣ, ಸಂಗ್ರಣೆ ಶೀತ ಸರಪಳಿ, ಜವಳಿ, ಕೈಮಗ್ಗ, ಸಕ್ಕರೆ, ಎಥೆನಾಲ್, ಡೈರಿ, ಮೀನುಗಾರಿಕೆ, ಜಾನುವಾರು, ಹಂದಿ, ಕೋಳಿ ಸಾಗಾಣಿಕೆ, ಎಸ್‌ಸಿಎಸ್‌ಟಿ ಜನಾಂಗ ಮತ್ತು ಮಹಿಳಾ ಸಹಕಾರಿ ವಲಯಗಳಿಗೆ ಹಣಕಾಸಿನ ಯೋಜನೆಗಳನ್ನು ನೀಡುತ್ತಿದೆ.

ಸಹಕಾರ-೨೨ ಅಡಿಯಲ್ಲಿ ಎನ್‌ಸಿಡಿಸಿ ಯು ಕಳೆದ ೨ ವರ್ಷಗಳಲ್ಲಿ ೧೦೦೦೦ ಪ್ರಾಥಮಿಕ ಮಟ್ಟದ ಸಹಕಾರ ಸಂಘಗಳಿಗೆ ತಲುಪಿದೆ ಮತ್ತು ವಿದ್ಯಾರ್ಥಿಗಳಿಗೆ ಇಂಟರ್ನ್ ಶಿಪ್ ಅವಕಾಶಗಳನ್ನು ನೀಡುತ್ತಿದೆ.

ಕೇಂದ್ರ ಸರ್ಕಾರದ ಯೋಜನೆಗಳಾದ ೧೦೦೦೦ ರೈತ ಉತ್ಪಾದಕರ ಸಂಘಟನೆಗಳ (ಎಫ್‌ಪಿಒ) ಮತ್ತು ಪ್ರಧಾನ ಮಂತ್ರಿ ಸಂಪದ ಯೋಜನೆ ಅಡಿಯಲ್ಲಿ ಮೀನು ರೈತರ ಉತ್ಪಾದಕರ ಸಂಘಟನೆಗಳ ರಚನೆ ಮತ್ತು ಉತ್ತೇಜನೆಗೆ ಹೊಸ ಸಹಕಾರಗಳ ನೊಂದಣಿ ಮತ್ತು ಬೆಂಬಲವನ್ನು ಒದಗಿಸುತ್ತಿದೆ.

ಕೃಷಿ ಸಹಕಾರದ ಕೇಂದ್ರ ವಲಯ ಸಮಗ್ರ ಯೋಜನೆ (ಸಿಎಸ್‌ಐಎಸ್‌ಎಸಿ) ಸಹಕಾರಿ ಸಂಘಗಳ ಅಭಿವೃದ್ಧಿಗಾಗಿ ಎನ್‌ಸಿಡಿಸಿ ಕಾರ್ಯಕ್ರಮಗಳಿಗೆ ನೆರವು ನೀಡುವ ಕೇಂದ್ರ ವಲಯ ಯೋಜನೆಯಾಗಿದೆ ಎಂದು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button