
ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಚಿಕ್ಕೋಡಿ ಲೋಕಸಭಾ ಸದಸ್ಯರ ಕಾರ್ಯಾಲಯದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಧ್ವಜಾರೋಹಣ ನೆರವೇರಿಸಿದರು.
ಸ್ವ್ವಾತಂತ್ರ ಹೋರಾಟಗಾರ ಸಂಗೋಳಿ ರಾಯಣ್ಣರ ಜನ್ಮದಿನದ ಅಂಗವಾಗಿ ಪ್ರತಿಮೆಗೆ ಪೂಜೆಮಾಡಿ ಬಳಿಕ ದ್ವಜಾರೋಹಣ ನೇರವೇರಿಸಿ ಮಾತನಾಡಿದ ಚಿಕ್ಕೋಡಿ ಅಣ್ಣಾಸಾಹೇಬ ಜೊಲ್ಲೆ, ದೇಶಕ್ಕಾಗಿ ಮಡಿದ ವೀರರ ಜೀವನಾದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಹೋರಾಟಗಾರರು ನೀಡಿರುವ ಈ ಸ್ವಾತಂತ್ರ್ಯಯದಲ್ಲಿ ನಾವೆಲ್ಲರೂ ಕಾಪಾಡಿಕೊಂಡು ಹೋಗಬೇಕು ದೇಶದ ಏಕತೆ ಅಖಂಡತೆ ಕಾಪಾಡುವುದರ ಮೂಲಕ ಸ್ವಾತಂತ್ರ್ಯ ದಿನಾಚಾರಣೆಯನ್ನು ಆಚರಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಸವಜ್ಯೋತಿ ಯೂಥ್ ಫೌಂಡೇಶನದ ಅಧ್ಯಕ್ಷರಾದ ಬಸವಪ್ರಸಾದ ಜೊಲ್ಲೆ ಪುರಸಭೆ ಸದ್ಯಸರಾದ ಸಂತೋಷ ಜುಗೂಳೆ, ಶಾಂಭವಿ ಅಶ್ವತಪೂರ, ಶಂಕುತಲಾ ಡೋನವಾಡೆ ಮತ್ತು ಬ್ಯಾಂಕಿನ ನಿರ್ದೇಶಕರಾದ ಸದಾಸಿವ ಮಾಳಿ, ಮಹಾದೇವ ಹುದ್ದಾರ, ಎಂ.ಎಸ್.ಪಾಟೀಲ, ಜಗದೇಶ ಹಿಂಗ್ಲೇಜೆ ಹಾಗೂ ರಾಜು ಡೊಂಗರೆ, ಅಶೋಕ ಲೋಕುರ ಮತ್ತು ಸಿಬಂದ್ಧಿಗಳು ಉಪಸ್ಥಿತರಿದ್ದರು.
ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಸಚಿವ ಶಿವರಾಮ ಹೆಬ್ಬಾರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ