
ಪ್ರಗತಿವಾಹಿನಿ ಸುದ್ದಿ; ಹಿರಿಯ ನಾಗರಿಕರಿಗಾಗಿ, ಯಾರೂ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಂದು ಮಹತ್ವದ ಯೋಜನೆ ಘೋಷಿಸಿದ್ದಾರೆ.
ವೃದ್ಧರನ್ನು ಗಮನದಲ್ಲಿಟ್ಟುಕೊಂಡು ವೃದ್ಧರು ಇರುವ ಮನೆಗಳಿಗೆ ಅನ್ನ ಸುವಿಧಾ ಯೋಜನೆ ಘೋಷಣೆ ಮಾಡಿದ್ದಾರೆ. 80 ವರ್ಷ ಮೇಲ್ಪಟ್ಟ ವೃದ್ಧರು ಅಥವಾ ವೃದ್ಧೆಯರು ಮಾತ್ರ ಇದ್ದರೆ ಅಂತಹ ಮನೆಗಳಿಗೆ ಅನ್ನ ಸುವಿಧಾ ಯೋಜನೆ ಮೂಲಕ ಆಹಾರ ಧಾನ್ಯ ಪೂರೈಸಲಾಗುವುದು.
ಹಸುವು ಮುಕ್ತ ಕರ್ನಾಟಕ, ಸಾಮಾಜಿಕ ಕಳಕಳಿಯಿಂದ ಈ ಮಹತ್ವದ ಯೋಜನೆ ಜಾರಿಗೆ ತರಲಾಗುತ್ತಿದ್ದು, ಹೋಮ್ ಡೆಲಿವರಿ ಆಪ್ ಮೂಲಕ ಹಿರಿಯರ ಮನೆ ಬಾಗಿಲಿಗೆ ಆಹಾರ ಧಾನ್ಯ ವಿತರಿಸಲಾಗುವುದು ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ