Belagavi NewsBelgaum News

*ಮಾಜಿ ಸೈನಿಕರಿಂದ ವಾರ್ಷಿಕ ಸಭೆ*

ಪ್ರಗತಿವಾಹಿನಿ ಸುದ್ದಿ: 45-ಕೇವ್ಲರಿ ಕರ್ನಾಟಕ ಮಾಜಿ ಸೈನಿಕರ ಸಂಘದಿಂದ ಬೆಳಗಾವಿ ನಗರದಲ್ಲಿ 2024-ವಾರ್ಷಿಕ ಸಭೆ ಆಯೋಜನೆ ಮಾಡಲಾಗಿತ್ತು. 

ಇಂದು ನಗರದ ಖಾಸಗಿ ಹೋಟೆಲ್ ನಲ್ಲಿ ಆಯೋಜನೆ ಮಾಡಲಾಗಿದ್ದ ಈ ಕಾರ್ಯಕ್ರಮವನ್ನು ಪ್ರಾರ್ಥನೆಯೊಂದಿಗೆ ಚಾಲನೆ ನೀಡಲಾಯಿತು.‌ ಕಾರ್ಯಕ್ರಮದ ಆರಂಭದಲ್ಲಿ ವೀರ ಯೋಧರಿಗೆ ಪುಷ್ಪಾರ್ಚನೆ ಮಾಡಲಾಯಿತು ಹಾಗೂ ವೀರ ನಾರಿಯರಿಗೆ ಸನ್ಮಾನಿಸಲಾಯಿತು.‌

ಬಳಿಕ ಇತ್ತಿಚಿಗೆ ನಿವೃತ್ತಿ ಹೊಂದಿದ ಸೈನಿಕರಾದ ಕೃಷ್ಣ ರಾನಡೆ, ಸಂತೋಷ ಪೂಜಾರ, ನಂದೇಶ ಕಾಡಗಿ, ಸಂಜಯ ಪಂಡಾರೆ, ಫಕಿರಪ್ಪ ಕುರಿ, ರಂಗಪ್ಪ ಮಂದರಿ, ನಿಂಗಪ್ಪ ಮಾಲಾಪುರ, ರಾಜೇಂದ್ರ ಗೌಸ್ ಅವರಗೆ ವೇದಿಕೆ ಪರವಾಗಿ ಸನ್ಮಾನಿಸಲಾಯಿತು.‌

ಈ ವೇಳೆ 45-ಕೇವ್ಲರಿ ಕರ್ನಾಟಕ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕೆ ಎ ಕುಶಾಲಪ್ಪ, ಮುಖ್ಯ ಅತಿಥಿಗಳಾಗಿ ಎಸ್ ಆರ್ ಪಾಟೀಲ್, ಜಗದೀಶ್ ಪಾಟೀಲ್, ಅಶ್ವತ ನಾರಾಯಣ, ಪ್ರಕಾಶ ಕಟ್ಟಿ, ಬಾಬು ಶಿಂಗೆ, ವಿ. ಡಿ ವಿತ್ರಾ, ಕಾರ್ಯಕ್ರಮದ ಮುಖ್ಯ ಸಂಚಾಲಕರು ಸುನೀಲ ದರಬಾರ, ಸಹ ಸಂಚಾಲಕರಾದ ಜ್ಯೋತಿವಾ ಕೇದಾರಿ, ನಾಗಪ್ಪ ಸಿ ಕೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button