Film & EntertainmentKannada NewsKarnataka NewsLatest
*ಕಾಂತಾರಾ ಸಿನಿಮಾದ ಮತ್ತೊಬ್ಬ ಕಲಾವಿದ ಹೃದಯಾಘಾತಕ್ಕೆ ಬಲಿ*

ಪ್ರಗತಿವಾಹಿನಿ ಸುದ್ದಿ: ಕಾಂತಾರ ಸಿನಿಮಾ ರಾಷ್ಟ್ರಮಟ್ಟದಲ್ಲಿ ಹೆಗ್ಗಳಿಕೆ ಗಳಿಸಿದೆ. ಆದರೆ, ಕಾಂತಾರ ಸಿನಿಮಾದಲ್ಲಿ ನಟಿಸಿದ ಮತ್ತೊಬ್ಬ ಕಲಾವಿದ ನಿಧನಹೊಂದಿದ್ದಾರೆ.
ಇಡೀ ಚಿತ್ರರಂಗದಲ್ಲೇ ಧೂಳೆಬ್ಬಿಸಿದ್ದ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದ ‘ಕಾಂತಾರ’ ಸಿನಿಮಾದಲ್ಲಿ ನಟಿಸಿದ್ದ ಟಿ. ಪ್ರಭಾಕರ್ ಕಲ್ಯಾಣಿ ಅವರು ನಿಧನರಾಗಿದ್ದಾರೆ.
ಕೆಲ ದಿನಗಳ ಹಿಂದೆ ಪ್ರಭಾಕರ್ ಅವರು ಮನೆಯಲ್ಲೇ ಕುಸಿದು ಬಿದ್ದಿದ್ದರು. ಅವರಿಗೆ ಹೃದಯದ ಸಮಸ್ಯೆ ಇತ್ತು. ಅವರ ಹಾರ್ಟ್‌ಗೆ ಸ್ಟಂಟ್ ಕೂಡ ಹಾಕಲಾಗಿತ್ತಂತೆ. ಪ್ರಭಾಕರ್ ಅವರಿಗೆ ಹೃದಯ ಸಂಬಂಧಿ ಕಾಯಿಲೆ ಇದ್ದಿದ್ದರಿಂದ ಹೃದಯಾಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.