
ಪ್ರಗತಿವಾಹಿನಿ ಸುದ್ದಿ, ನವದೆಹಲಿ: ಕೇಂದ್ರ ಆದಾಯ ತೆರಿಗೆ ಇಲಾಖೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಲೋಕಸಭಾ ಚುನಾವಣೆ ಹೊತ್ತಿನಲ್ಲೇ ಮತ್ತೊಂದು ಬಿಗ್ ನೀಡಿದೆ. 1,823 ಕೋಟಿ ರೂ. ತೆರಿಗೆ ನೀಡುವಂತೆ ಆದಾಯ ತೆರಿಗೆ ಇಲಾಖೆ ನೋಟೀಸ್ ಜಾರಿ ಮಾಡಿದೆ.
ಇತ್ತೀಚೆಗಷ್ಟೆ 4 ಬ್ಯಾಂಕ್ ಗಳಲ್ಲಿರುವ ಕಾಂಗ್ರೆಸ್ ನ 11 ಖಾತೆಗಳನ್ನು ಫ್ರೀಜ್ ಮಾಡಿ ಶಾಕ್ ನೀಡಿದ್ದ ಆದಾಯ ತೆರಿಗೆ ಇಲಾಖೆ, ಇದೀಗ 1994 -95 ನೇ ಸಾಲಿನ ಮತ್ತು 2016 -17ನೇ ಸಾಲಿನಿಂದ ಈವರೆಗಿನ ಒಟ್ಟೂ 1,823 ಕೋಟಿ ರೂ. ತುಂಬುವಂತೆ ನೋಟೀಸ್ ನೀಡಲಾಗಿದೆ.
ಆದಾಯ ತೆರಿಗೆ ಪಾವತಿಗೆ ರಾಜಕೀಯ ಪಕ್ಷಗಳಿಗೆ ವಿನಾಯಿತಿ ಇದೆ, ಆದರೆ ಅದನ್ನು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ನೀಡಲಾಗುತ್ತಿಲ್ಲ. ಇದೇ ರೀತಿ ಬಿಜೆಪಿಗೆ ನೋಟೀಸ್ ನೀಡುವದಾದರೆ 4 ಸಾವಿರ ಕೋಟಿ ರೂ.ಗಳಿಗಿಂತ ಹೆಚ್ಚು ದಂಡ ವಿಧಿಸಬೇಕಿತ್ತು. ಆದರೆ ಅವರಿಗೆ ಯಾವುದೇ ನೋಟೀಸ್ ನೀಡಲಾಗಿಲ್ಲ. ಕೇಂದ್ರ ಸರಕಾರ ಐಟಿ, ಇಡಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಹಿಂದೆ ಬ್ಯಾಂಕ್ ಅಕೌಂಟ್ ಗಳನ್ನು ಫ್ರೀಜ್ ಮಾಡಿದ್ದರಿಂದ ನಮಗೆ ಚಹಾ ಕುಡಿಯಲು ಸಹ ಹಣವಿಲ್ಲ ಎಂದು ಕಾಂಗ್ರೆಸ್ ಹೇಳಿತ್ತು. ಇದೀಗ ಮತ್ತೊಂದು ಆಘಾತ ನೀಡಿದೆ. ಇದರಿಂದ ಕಾಂಗ್ರೆಸ್ ಕೆಂಡಾಮಂಡಲವಾಗಿದೆ.
ಕೇಂದ್ರದಲ್ಲಿ ಆಡಳಿತದಲ್ಲಿರುವ ಸರಕಾರಗಳು ತನ್ನ ಅಧೀನದ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತವೆ ಎನ್ನುವ ಆರೋಪ ಹಳೆಯದು. ವಿರೋಧ ಪಕ್ಷಗಳು ಹಿಂದಿನಿಂದಲೂ ಇಂತಹ ಆರೋಪಗಳನ್ನು ಮಾಡುತ್ತ ಬಂದಿವೆ. ಈಗ ಮತ್ತೊಮ್ಮೆ ಅಂತಹುದೇ ಆರೋಪ ಕೇಳಿಬಂದಿದೆ. ಲೋಕಸಭಾ ಚುನಾವಣೆ ನಡೆಯುತ್ತಿರುವುದರಿಂದ ವಿವಾದ ವಿಕೋಪಕ್ಕೆ ಹೋಗಿ ಪರಸ್ಪರ ಆರೋಪ, ಪ್ರತ್ಯಾರೋಪಕ್ಕೆ ಕಾರಣವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ