ಪ್ರಗತಿ ವಾಹಿನಿ ಸುದ್ದಿ, ಮುಂಬೈ:
ಇತ್ತ ಕರ್ನಾಟಕದೊಂದಿಗೆ ಮಹಾರಾಷ್ಟ್ರದ ಗಡಿ ಕ್ಯಾತೆ ಉಲ್ಬಣಿಸಿರುವದರ ನಡುವೆಯೇ ಅತ್ತ ಮಹಾರಾಷ್ಟ್ರ-ಮಧ್ಯಪ್ರದೇಶದ ಗಡಿಯಲ್ಲೂ ತಂಟೆ ಶುರುವಾಗಿದೆ. ತಮ್ಮನ್ನು ಮಧ್ಯಪ್ರದೇಶಕ್ಕೆ ಸೇರಿಸುವಂತೆ ಮಹಾರಾಷ್ಟ್ರದ ಗಡಿ ಭಾಗದ 4 ಹಳ್ಳಿಗಳು ಠರಾವು ಮಾಡಿದ್ದು ಬುಲ್ಥಾನ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿವೆ.
ಮಹಾರಾಷ್ಟ್ರದ ದಕ್ಷಿಣ ಭಾಗದಲ್ಲಿರುವ ಜತ್, ಅಕ್ಕಲಕೋಟೆ, ದಕ್ಷಿಣ ಸೋಲಾಪುರ ಜಿಲ್ಲೆಗಳ ಗ್ರಾಮೀಣ ಜನ ತಮ್ಮನ್ನು ಕರ್ನಾಟಕಕ್ಕೆ ಸೇರಿಸುವಂತೆ ಆಗ್ರಹಿಸುತ್ತಿರುವುದನ್ನೇ ಮಹಾರಾಷ್ಟ್ರ ಸರಕಾರಕ್ಕೆ ನುಂಗಲಾರದ ತುತ್ತಾಗುತ್ತಿದೆ.
ಈಗ ಮಹಾರಾಷ್ಟ್ರದ ಉತ್ತರ ಭಾದಲ್ಲಿರುವ ಬುಲ್ಥಾನ ಜಿಲ್ಲೆಯ ಭಿಂಗಾರ, ಗೋಮಾಲ -1, ಗೋಮಾಲ -2, ಹಾಗೂ ಚಾಲಿಸ್ತಪರಿ ಗ್ರಾಮಗಳು ತಮ್ಮನ್ನು ಅತ್ತ ಉತ್ತರ ಭಾಗದ ಮಧ್ಯಪ್ರದೇಶ ರಾಜ್ಯಕ್ಕೆ ಸೇರಿಸುವಂತೆ ಸರಪಂಚ ರಾಜೇಶ ಮೋಹನ್ ಮತ್ತಿತರರು ಒತ್ತಾಯಿಸಿರುವುದರಿಂದ ಮಹಾರಾಷ್ಟ್ರ ರಾಜ್ಯಕ್ಕೆ ಎರಡೂ ಕಡೆ ಗಡಿ ಕ್ಯಾತೆಯ ಕಿಡಿ ಹೊತ್ತಿಕೊಂಡಂತಾಗಿದೆ.
ಮೂಲ ಸೌಕರ್ಯವಿಲ್ಲ:
ಕರ್ನಾಟಕದ ಗಡಿ ಭಾಗದ ಹಳ್ಳಿಗಳು ತಮಗೆ ಮೂಲ ಸೌಕರ್ಯ ಒದಗಿಸುತ್ತಿಲ್ಲ ಎಂದು ಆರೋಪಿಸಿದಂತೆಯೇ ಅತ್ತ ಮಹಾರಾಷ್ಟ್ರದ ಉತ್ತರ ಭಾಗದ ಗಡಿಯ ಹಳ್ಳಿಗಳು ಸಹ ಇದೇ ಆರೋಪವನ್ನು ಮುಂದಿಟ್ಟಿವೆ.
ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಮಹಾರಾಷ್ಟ್ರ ಸರಕಾರ ನಮಗೆ ರಸ್ತೆ, ವಿದ್ಯುತ್, ನೀರು ಮೊದಲಾದ ಮೂಲ ಸೌಕರ್ಯ ಒದಗಿಸುತ್ತಿಲ್ಲ. ಹಾಗಾಗಿ ನಮ್ಮನ್ನು ಮಧ್ಯಪ್ರದೇಶಕ್ಕೆ ಸೇರಿಸಿ ಎಂಬುದು ಅಲ್ಲಿನ ಗ್ರಾಮಸ್ಥರ ಆಗ್ರಹವಾಗಿದೆ.
*ಉತ್ತರ ಕನ್ನಡ ವಿಭಜನೆ ವಿಚಾರ; ಸಚಿವ ಶಿವರಾಮ್ ಹೆಬ್ಬಾರ್ ಸ್ಪಷ್ಟನೆ*
https://pragati.taskdun.com/uttara-kannadadividesirsiseparate-districtshivaram-hebbar/
https://pragati.taskdun.com/cm-basavaraj-bommaaireactionsiddaramaiahstatment/
*ಗಡಿ ವಿವಾದ: ಕೇಂದ್ರ ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಸಭೆ: ಸಿಎಂ ಬೊಮ್ಮಾಯಿ*
https://pragati.taskdun.com/karnataka-maharashtra-border-isshueamith-shahmeetingcm-basavaraj-bommai/
ಆಪ್ ಗೆ ಸೇರ್ಪಡೆಯಾದ ಕೆಲವೇ ಗಂಟೆಗಳಲ್ಲಿ ಮತ್ತೆ ಕಾಂಗ್ರೆಸ್ ಗೆ ಬೌನ್ಸ್ ಆದ ಜನನಾಯಕರು!
https://pragati.taskdun.com/within-a-few-hours-of-joining-the-app-the-leaders-bounced-back-to-congress/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ