Kannada NewsKarnataka News

ಬೆಳಗಾವಿಯಲ್ಲಿ ಮತ್ತೊಂದು ಮೃತದೇಹ ಪತ್ತೆ ; ಇನ್ನೊಬ್ಬ ವ್ಯಕ್ತಿ ನಾಪತ್ತೆ

ಅಪರಿಚಿತ ವ್ಯಕ್ತಿ ಮೃತದೇಹ ಪತ್ತೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ  : ಬೆಳಗಾವಿ ರೇಲ್ವೆ ಪೊಲೀಸ್ ಠಾಣೆಯ ಚಿಕ್ಕೋಡಿ ರೋಡ್ ರೇಲ್ವೆ ನಿಲ್ದಾಣದ ಹಳಿಗಳ ಮೇಲೆ ಅಪರಿಚಿತ ವ್ಯಕ್ತಿ(೫೫) ಜೂ.೨೯ ೨೦೨೧ ರಂದು ಚಲಿಸುವ ರೈಲು ಗಾಡಿಗೆ ಸಿಕ್ಕು ಮೃತಪಟ್ಟಿರುತ್ತಾನೆ.  ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮೃತನ ಚಹರೆ ಪಟ್ಟಿಯ ವಿವರ:
ಎತ್ತರ ೫.೪ ಪುಟ್, ಗೋಧಿ ಮೈ ಬಣ್ಣ, ದುಂಡು ಮುಖ, ನೀಟಾದ ಮೂಗು, ಮತ್ತು ಸಾಧಾರಣ ಶರೀರ, ಸಣ್ಣ ಕಪ್ಪು ಬಿಳೀ ಕೂದಲು ಹೊಂದಿರುತ್ತಾನೆ. ಹಾಗೂ ಬಿಳಿ ಬಣ್ಣದ ಫುಲ್ ಶರ್ಟ, ಕಪ್ಪು ಬಣ್ಣದ ಪ್ಲಾಸ್ಟಿಕ್ ಬೂಟ ಧರಿಸಿರುತ್ತಾನೆ.

ಈ ರೀತಿ ಚಹರೆಯುಳ್ಳ ಅಪರಿಚಿತ ವ್ಯಕ್ತಿಯ ವಾರಸುದಾರರು ಇದ್ದಲ್ಲಿ ಬೆಳಗಾವಿ ರೈಲ್ವೆ ಪೋಲಿಸ್ ಠಾಣೆ ದೂರವಾಣಿ ಸಂಖ್ಯೆ: (೦೮೩೧) ೨೪೦೫೨೭೩ ಪಿ.ಎಸ್.ಐ ಮೊಬೈಲ ನಂ :೯೪೮೦೮೦೨೧೨೭ ಅಥವಾ ರೈಲ್ವೆ ಪೊಲೀಸ್ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ. (೦೮೦) ೨೨೮೭೧೨೯೧ ಗೆ ಸಂಪರ್ಕಿಸಬಹುದು ಎಂದು ಬೆಳಗಾವಿ ರೈಲ್ವೆ ಪೋಲಿಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವ್ಯಕ್ತಿ ನಾಪತ್ತೆ

ರಾಜಸ್ಥಾನದ ಜೈಪೂರ ಜಿಲ್ಲೆಯ ಅಮೇರ ತಾಲೂಕಿನ ಅಚ್ರೋಲ್ ಗ್ರಾಮದ ನಿವಾಸಿಯಾದ ಗಿರಿಧಾರಿಲಾಲ್ ನಂದಾರಾಮ ಮೀನಾ(೪೪) ಇವನು ಜು.೨೧ ೨೦೨೨ ರಂದು ಮದ್ಯಾಹ್ನ ೨.೩೦ ಗಂಟೆಗೆ ಬೇಟಗೇರಿ ಗ್ರಾಮದ ಪೂಜಾ ಬೇಕರಿಯಿಂದ ಬಟ್ಟೆಯನ್ನು ತರುತ್ತೇನೆ ಎಂದು ಹೇಳಿ ಮರಳಿ ಬರದೇ ಕಾಣೆಯಾಗಿದ್ದಾರೆ ಎಂದು ಇವರ ಅಣ್ಣ ಹರಪೂಲ ನಂದಾರಾಮ ಮೀನಾ ಇವರು ಕುಲಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಾಣೆಯಾದ ವ್ಯಕ್ತಿಯ ವಿವರ:

೫.೩ ಫುಟ್ ಎತ್ತರ, ಸಾದಾ ಗೋಧಿ ಕೆಂಪು ಮೈಬಣ್ಣ, ಕಪ್ಪು ಕೂದಲು ಇದ್ದು ಸದೃಢ ಮೈಕಟ್ಟು ಹೊಂದಿದ್ದಾನೆ. ರಾಜಸ್ಥಾನಿ ಬಾಷೆ ಮಾತನಾಡುತ್ತಾನೆ. ಹಾಗೂ ನೀಲಿ ಕಲರ ಟೀ ಶರ್ಟ ಹಾಗೂ ಬಿಳಿ ಪೈಜಾಮಾ ಧರಿಸಿದ್ದಾನೆ.
ಈ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆಕಿದಲ್ಲಿ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ ೦೮೩೩೪-೨೨೨೨೩೩ ಅಥವಾ ಇ-ಮೇಲ್ ಐಡಿ [email protected] ಗೆ ಸಂಪರ್ಕಿಸಬಹುದು ಎಂದು ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

*ನಗ್ನ ಚಿತ್ರಗಳ ಬಗ್ಗೆ ಮಾತಾಡ್ತಾರಾ?; ರೋಹಿಣಿ ವಿರುದ್ಧ ಮತ್ತೊಂದು ಬಾಂಬ್ ಸಿಡಿಸಿದ ಡಿ.ರೂಪಾ*

https://pragati.taskdun.com/d-roopashareddelet-messagesrohini-sinduri/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button