
ಪ್ರಗತಿವಾಹಿನಿ ಸುದ್ದಿ : ಮುಡಾ ಹಗರಣಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಮತ್ತೊಂದು ಕಂಟಕ ಎದುರಾಗಿದ್ದು, ಅವರ ವಿರುದ್ಧ ಇ.ಡಿ.ಗೆ ಇದೀಗ ಮತ್ತೊಂದು ದೂರು ದಾಖಲಾಗಿದೆ.
ಇತ್ತೀಚೆಗೆ ಸಿಎಂ ಪತ್ನಿ ಅವರು ಇದೇ ಮುಡಾ ಹಗರಣ ಕುರಿತು ಸತತ 3 ಗಂಟೆಗಳ ಕಾಲ ಇ.ಡಿ. ಅಧಿಕಾರಿಗಳ ವಿಚಾರಣೆಗೆ ಒಳಪಟ್ಟಿದ್ದರು. ಇದರ ಬೆನ್ನಲ್ಲೇ 2023ರ ನವೆಂಬರ್‌ನಲ್ಲಿ ಮೈಸೂರಿನ ಇಂಡಸ್ಟ್ರಿಯಲ್ ಏರಿಯಾದಲ್ಲಿ 1.84 ಕೋಟಿ ರೂಪಾಯಿ ನೀಡಿ ಖರೀದಿಸಿರುವ 20 ಗುಂಟೆ ಜಮೀನು ಸಂಬಂಧ ಹಣದ ಮೂಲ ಪತ್ತೆ ಹಚ್ಚಬೇಕು ಎಂದು ಆರೋಪಿಸಿ ಆರ್‌ಟಿಐ ಕಾರ್ಯಕರ್ತ ಗಂಗರಾಜು ಇ.ಡಿ.ಗೆ ದೂರು ನೀಡಿದ್ದಾರೆಂದು ತಿಳಿದುಬಂದಿದೆ.
ಇನ್ನು ಈ ಮೊದಲ ಪ್ರಕರಣದಲ್ಲಿ ಕೆಸರೆ ಗ್ರಾಮ ಸರ್ವೇ ನಂ.462 & 464ರ 3.16 ಎಕರೆ ಭೂಮಿ, 14 ಮುಡಾ ನಿವೇಶನ ಸೈಟ್ ವಿಚಾರವಾಗಿ ಕೆಲ ದಾಖಲೆ ಬಿಡುಗಡೆ ಮಾಡಿದ್ದ ಗಂಗಾರಾಜು ಅವರಿಗೆ, ನಾಳೆ ವಿಚಾರಣೆಗೆ ಹಾಜರಾಗುವಂತೆ ಇ.ಡಿ. ನೋಟಿಸ್ ಸಹ ನೀಡಿದೆ.