
ಪ್ರಗತಿವಾಹಿನಿ ಸುದ್ದಿ : ಮಹಾಕುಂಭಮೇಳಕ್ಕೆ ತೆರಳುತ್ತಿದ್ದ ಟ್ರಕ್ ಹಾಗೂ SUV ಕಾರಿನ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ 3 ಮಂದಿ ಸಾವನ್ನಪ್ಪಿದ್ದಾರೆ.
ಸಾತ್ನಾ ಹಾಗೂ ಚಿತ್ರಕೂಟದ ಹೈವೆಯಲ್ಲಿ ಘಟನೆ ನಡೆದಿದೆ. ಅಪಘಾತದ ತೀವ್ರತೆಗೆ ಕಾರು ನಜ್ಜುಗುಜ್ಜಾಗಿದೆ. ಜಬಲ್ಪುರದಿಂದ ಎಲ್ಲರೂ ಪ್ರಯಾಗ್ ರಾಜ್ ಗೆ ತೆರಳುತ್ತಿದ್ದರು ಎನ್ನಲಾಗಿದೆ.
ಮಹೇಂದ್ರ ಪಟೇಲ್, ಮನಿಷಾ ಪಟೇಲ್ ಹಾಗೂ ಜಿತೇಂದ್ರ ಪಟೇಲ್ ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಸ್ಥಳೀಯ ಪೊಲೀಸರು ಸ್ಥಳಕ್ಕೆ ದೌಡಯಿಸಿ ಮಹಜರು ಮಾಡಿದ್ದಾರೆ. ಮೃತದೇಹಗಳನ್ನು ಶವಪರೀಕ್ಷೆಗೆ ಕಳುಹಿಸಲಾಗಿದೆ.