ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಂದ ಮತ್ತೊಂದು ವಿನೂತನ ಕಾರ್ಯಕ್ರಮ; ಸಮಸ್ಯೆಗಳನ್ನು ಅರಿಯಲು ಸರಣಿ ಕಾರ್ನರ್ ಮೀಟಿಂಗ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ವಿನೂತನ ಕಾರ್ಯಕ್ರಮಗಳ ಮೂಲಕ ಜನ ಮನ ಗೆದ್ದಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಇದೀಗ ಮತ್ತೊಂದು ವಿನೂತನ ಕಾರ್ಯಕ್ರಮ ಆರಂಭಿಸಿದ್ದಾರೆ. ತಾವೇ ಖುದ್ದಾಗಿ ಗ್ರಾಮಗಳಿಗೆ ತೆರಳಿ ಅಲ್ಲಿನ ಮುಖಂಡರ ಜೊತೆ ಕುಳಿತು ಸಮಸ್ಯೆ ಮತ್ತು ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚಿಸಿ ಪರಿಹಾರ ಕಂಡು ಹಿಡಿಯುವ ವಿಶಿಷ್ಟ ಕಾರ್ಯಕ್ರಮವಿದು.

ಸೋಮವಾರ ಬೆಳಗ್ಗೆ ಹಿಂಡಲಗಾ ಗ್ರಾಮಕ್ಕೆ ತೆರಳಿದ ಸಚಿವರು, ಗ್ರಾಮದ ಲಕ್ಷ್ಮೀ ನಗರ, ವಿನಾಯಕ ನಗರ ಹಾಗೂ ಮಾಂಜ್ರೇಕರ್ ಕಾಲೋನಿಗಳಲ್ಲಿ ಸ್ಥಳೀಯ ಮುಖಂಡರನ್ನು ಸೇರಿಸಿ ಸಭೆಗಳನ್ನು ನಡೆಸಿದರು. ಸ್ಥಳೀಯ ಸಮಸ್ಯೆಗಳ ಕುರಿತು ಸಮಾಲೋಚನೆ ನಡಸಿದ ಸಚಿವರು, ಆ ಭಾಗದಲ್ಲಿ ಆಗಬೇಕಿರುವ ಅಭಿವೃದ್ಧಿ ಯೋಜನೆಗಳ ಕುರಿತು ಮಾಹಿತಿ ಪಡೆದರು.
ಲಕ್ಷ್ಮೀ ನಗರದ ಸಮರ್ಥ ಕಾಲೋನಿಯ ಮುಖಂಡರಾದ ಅರ್ಜುನ ಪಾಟೀಲ ಇವರ ಮನೆಯಲ್ಲಿ ಸಭೆ ನಡೆಸಿ, ಸ್ಥಳೀಯ ನಿವಾಸಿಗಳ ಕುಂದುಕೊರತೆಗಳನ್ನು ಆಲಿಸಿ, ಪರಿಹಾರ ಸೂಚಿಸಿದರು.
ಸಭೆಯಲ್ಲಿ ಅರ್ಜುನ ಪಾಟೀಲ, ಯುವರಾಜ ಕದಂ, ವಿಠ್ಠಲ ದೇಸಾಯಿ, ರಾಹುಲ್ ಉರನಕರ್, ಗಜಾನನ ಬಾಂಡೇಕರ್, ಪ್ರವೀಣ ಪಾಟೀಲ, ಅಶೋಕ ಕಾಂಬಳೆ, ಪ್ರೇರಣಾ ಮಿರಜಕರ್, ಅಲ್ಕಾ ಕಿತ್ತೂರ್, ಸೀಮಾ ದೇವಕರ್, ಸ್ನೇಹಾ, ಕಿರಣ ಲೋಬೊ, ಅರ್ಜುನ ಪಾಟೀಲ, ಸಂದೇಶ ಅವೊಂಡ್ಕರ್, ವಾಸಂತಿ ಹನುಮಸೇಠ್, ಅಶ್ವಿನಿ ದೇಸಾಯಿ ಉಪಸ್ಥಿತರಿದ್ದರು.

ನಂತರ ವಿನಾಯಕ ನಗರದ ಮುಖಂಡರಾದ ಶಿವಾಜಿ ಅತವಾಡ್ಕರ್ ಅವರ ಮನೆಯಲ್ಲಿ ಸಭೆ ನಡೆಸಿದರು. ಸಭೆಯಲ್ಲಿ ಶಿವಾಜಿ ಅತವಾಡ್ಕರ್, ಯುವರಾಜ ಕದಂ, ವಿಠ್ಠಲ ದೇಸಾಯಿ, ರಾಹುಲ್ ಉರನಕರ್, ಡಿ.ಬಿ.ಪಾಟೀಲ, ಶಿವಾಜಿ ಬಾಂಡಿವಾಲೆ, ಡಾ.ಗಾಂವ್ಕರ್, ಅನಿಲ ಅತವಾಡ್ಕರ್, ಜಾಧವ್ ಸರ್, ಚಿಕ್ಕೊರ್ದೆ ಸರ್, ಗಜಾನನ ಬಾಂಡೆಕರ್, ಮಧುಕರ್ ಚಾವಲೇಕರ್ ಉಪಸ್ಥಿತರಿದ್ದರು.
ಇದಾದ ನಂತರ ಮಾಂಜ್ರೆಕರ್ ಕಾಲೋನಿಯ ಮುಖಂಡರಾದ ಗಜಾನನ ಕಾಕತ್ಕರ್ ಅವರ ಮನೆಯಲ್ಲಿ ಸಭೆ ನಡೆಸಿ, ಸ್ಥಳೀಯ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಸೂಚಿಸುವ ಬಗ್ಗೆ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಗಜಾನನ ಕಾಕತ್ಕರ್, ಯುವರಾಜ ಕದಂ, ವಿಠ್ಠಲ ದೇಸಾಯಿ, ಪ್ರವೀಣ ಪಾಟೀಲ, ಅಶೋಕ ಕಾಂಬಳೆ, ಗಜಾನನ ಬಾಂಡೇಕರ್, ಕೃಷ್ಣ ಪಾವಸೆ, ರಮಾಕಾಂತ ಪಾವಸೆ, ಶ್ರೀಕಾಂತ ಜಾಧವ್, ವಿಠ್ಠಲ ಬೆಳಗುಂದಕರ್ ಉಪಸ್ಥಿತರಿದ್ದರು.
ಮನೆ ಬಾಗಿಲಿಗೆ ಆಗಮಿಸಿ ಸಮಸ್ಯೆಗಳನ್ನು ಅರಿತು, ಪರಿಹರಿಸುವ ಸಚಿವರ ವಿಶಿಷ್ಟ ಕಾರ್ಯಕ್ರಮಕ್ಕೆ ಸ್ಥಳೀಯ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಮಂತ್ರಿಗಳನ್ನು ಭೇಟಿ ಮಾಡುವುದೇ ಕಷ್ಟ ಎನ್ನುವ ಸ್ಥಿತಿ ಇರುವ ಸಂದರ್ಭದಲ್ಲಿ ಸಚಿವರೊಬ್ಬರು ಈ ರೀತಿ ಮನೆ ಬಾಗಿಲಿಗೇ ಬಂದು ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸಮಸ್ಯೆಗಳನ್ನು ನಿವಾರಿಸಲು ಮುಂದಾಗಿರುವದಕ್ಕೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ