Kannada NewsLatest

ಮತ್ತೊಬ್ಬ ಭಯೋತ್ಪಾದಕ ಅಪರಿಚಿತರ ಗುಂಡಿನ ದಾಳಿಗೆ ಬಲಿ

ಪ್ರಗತಿವಾಹಿನಿ ಸುದ್ದಿ ಇಸ್ಲಾಮಾಬಾದ್‌: ಪಾಕಿಸ್ತಾನ ಮೂಲದ ಲಷ್ಕರ್ ಎ ತೊಯ್ಬಾ ಸಂಘಟನೆಯ ಮುಖಂಡ ಅಕ್ರಂ ಖಾನ್ ಅಲಿಯಾಸ್ ಅಕ್ರಂ ಘಾಜಿ ಅಪರಿಚಿತರು ನಡೆಸಿದ ಗುಂಡಿನ ದಾಳಿಗೆ ಬಲಿಯಾಗಿದ್ದಾನೆ. 

ಆಫ್ಘಾನಿಸ್ತಾನಕ್ಕೆ ಹೊಂದಿಕೊಂಡಿರುವ ಬಜೆರ್‌ನಲ್ಲಿ ಗುರುವಾರ ಗುಂಪೊಂದು ಗುಂಡಿನ ದಾಳಿ ನಡೆಸಿ ಆತನ ಹತ್ಯೆಗೈದಿದೆ.

ಈತ ಲಷ್ಕ‌ರ್‌ ಸಂಘಟನೆ ಪ್ರಮುಖ ನಾಯಕರಲ್ಲಿ ಒಬ್ಬನಾಗಿದ್ದು, 2018-2020 ಅವಧಿಯಲ್ಲಿ ಸಂಘಟನೆಗೆ ಹೊಸ ಉಗ್ರರನ್ನು ನೇಮಿಸಿಕೊಳ್ಳುವ ಕೆಲಸ ನಿರ್ವಹಿಸುತ್ತಿದ್ದ. ಭಾರತ ಮತ್ತು ಹಿಂದೂ ವಿರೋಧಿ ಭಾಷಣಗಳ ಮೂಲಕ ಯುವಜನರನ್ನು ಭಾರತದ ವಿರುದ್ಧದ ಭಯೋತ್ಪಾದನೆಗೆ ಸೆಳೆಯುತ್ತಿದ್ದ.

ಕಳೆದ ಒಂದುವರೆ ವರ್ಷದಲ್ಲಿ ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ ಪ್ರಮುಖ 18 ಭಯೋತ್ಪಾದಕರು ಹತ್ಯೆಯಾಗಿದ್ದು ಅಕ್ರಂ ಖಾನ್ 19ನೆಯವನಾಗಿದ್ದಾನೆ.

Home add -Advt

Related Articles

Back to top button