*400ಕೋಟಿ ರಾಬರಿ ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್: ಆಡಿಯೋ ವೈರಲ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಚೋರ್ಲಾ ಘಾಟ್ ನಲ್ಲಿ ಎರಡು ಕಂಟೇನರ್ ನಲ್ಲಿ ಸಾಗಾಟ ಮಾಡಲಾಗುತ್ತಿದ್ದ 400 ಕೋಟಿ ರೂ ದರೋಡೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
ಕರ್ನಾಟಕ ಗೋವಾ ಗಡಿಯಲ್ಲಿ 400 ಕೋಟಿ ರೂ ರಾಬರಿ ಪ್ರಕರಣದ ಆರೋಪಿಗಳಾದ ವಿರಾಟ್ ಮತ್ತು ಜಯೇಶ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಎಲ್ಲಡೆ ಹಲ್ ಚಲ್ ಸೃಷ್ಟಿಯಾಗಿದೆ.
ಹಣ ಸಾಗಾಟದ ಕುರಿತು ವಾಟ್ಸಪ್ ಕಾಲ್ ನಲ್ಲಿ ಆಶ್ರಮವೊಂದರಲ್ಲಿ ಎರಡು ಸಾವಿರ ರೂ. ನೋಟು ಬದಲಾವಣೆ ಕುರಿತು ಆಡಿಯೋದಲ್ಲಿ ಚರ್ಚೆ ಮಾಡಲಾಗಿದೆ.
ಅಹಮದಾಬಾದ್ ನ ಆಶ್ರಮವೊಂದರಲ್ಲಿ ಡೀಲ್ ಮಾಡುವ ಕುರಿತು ಮಾತುಕತೆ ನಡೆದಿದೆ. ಉದ್ಯಮಿ ಕಿಶೋರ್ ಬಳಿ ಹಣ ಇರುವ ಬಗ್ಗೆಯೋ ಆಡಿಯೋದಲ್ಲಿ ಮಾತುಕತೆ ನಡೆಸಲಾಗಿದೆ. ಸದ್ಯ ವಾಟ್ಸಪ್ ಕಾಲ್ ಸಂಭಾಷಣೆಯಿಂದ ಮಹಾರಾಷ್ಟ್ರದಲ್ಲಿ ಹಲ್ ಚಲ್ ಸೃಷ್ಟಿಯಾಗಿದೆ. ಕರ್ನಾಟಕ, ಗೋವಾ, ಮಹಾರಾಷ್ಟ್ರ ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.
ಇದರ ಜೊತೆಗೆ, ಇಡೀ ಪ್ರಕರಣ ಕಟ್ಟುಕತೆಯೇ ಎನ್ನುವ ಸಂದೇಹವೂ ಬರುತ್ತಿದೆ.


