Election NewsKannada NewsKarnataka NewsNationalPolitics

*ತಂದೆ ವಿರುದ್ಧ ಮತ್ತೊಂದು ವಿಡಿಯೋ: ಬೇಸರ ವ್ಯಕ್ತಪಡಿಸಿದ ನಿಶಾ ಯೋಗೇಶ್ವರ*

ಪ್ರಗತಿವಾಹಿನಿ ಸುದ್ದಿ: ಸಿಪಿ ಯೋಗೇಶ್ವರ್ ಮಗಳು ನಿಶಾ ಯೋಗೇಶ್ವ‌ರ್ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ಮೇಲೆ ಕೋರ್ಟ್ ನಿಂದ ಇಂಜೆಕ್ಷನ್ ಆರ್ಡರ್ ತಂದು ಮಾತಾಡದಂತೆ ಬಾಯಿ ಕಟ್ಟಾಕಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮೊದಲು ನಾನು ಸಿಪಿ ಯೋಗೇಶ್ವರ್ ಬಗ್ಗೆ ಮಾತಾಡದಂತೆ ನೋಟಿಸ್‌ ಜಾರಿ ಮಾಡಲಾಯ್ತು. ಈಗ ಮಾಧ್ಯಮಗಳಲ್ಲಿ ನನ್ನ ವಿಡಿಯೋ ಪ್ರಸಾರ ಮಾಡದಂತೆ ಆರ್ಡರ್ ತರಲಾಗಿದೆ. ಈ ಮೂಲಕ ನನ್ನನ್ನ ಸಂಪೂರ್ಣ ಸೈಡ್ ಲೈನ್ ಮಾಡೋಕೆ ವ್ಯವಸ್ಥಿತ ಷಡ್ಯಂತ್ರವಾಗಿದೆ ಎಂದಿದ್ದಾರೆ. ಅಲ್ಲದೆ, ನಾನು ನಮ್ಮ ತಂದೆ ಸಿಪಿ ಯೋಗೇಶ್ವರ್ ರನ್ನ ಅಪ್ಪ ಎಂದು ಕರೆಯುವುದರಲ್ಲಿ ತಪ್ಪೇನಿದೆ. ನನ್ನ ವಾಕ್ ಸ್ವಾತಂತ್ರ್ಯವನ್ನೇ ಕಿತ್ತುಕೊಳ್ಳಲಾಗಿದೆ. ದಿನಕ್ಕೊಂದು ಕೇಸುಗಳನ್ನು ಹಾಕಿ ತಮ್ಮ ಬಾಯಿ ಮುಚ್ಚಿಸಿದ್ದಾರೆ ಎಂದು ನಿಶಾ ಯೋಗೇಶ್ವರ್ ಸೋಷಿಯಲ್‌ ಮೀಡಿಯಾದಲ್ಲಿ ಅಳಲು ತೋಡಿಕೊಂಡಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button