ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ಸಾರ್ವಜನಿಕ ವಾಚನಾಲಯ ಕೊರೋನಾ ಸಂಕಷ್ಟಕ್ಕಾಗಿ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 51 ಸಾವಿರ ರೂ. ದೇಣಿಗೆ ನೀಡಿದೆ.
ಚಂದಗಡ ಶಾಸಕ ರಾಜೇಶ ಪಾಟೀಲ ಅವರಿಗೆ ಅಧ್ಯಕ್ಷ ಗೋವಿಂದ ರಾವ್ ರಾವುತ್ ಚೆಕ್ ಹಸ್ತಾಂತರಿಸಿದರು. ನೇತಾಜಿ ಜಾಧವ, ಈಶ್ವರ ಮುಚ್ಚಂಡಿ, ಅನಂತ ಲಾಡ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕರ್ನಾಟಕದ ನೆಲದಲ್ಲಿರುವ ಸಾರ್ವಜನಿಕ ವಾಚನಾಲಯ ಕರ್ನಾಟಕದ ಸರಕಾರಕ್ಕೆ ದೇಣಿಗೆ ನೀಡುವ ಬದಲು ಮಹಾರಾಷ್ಟ್ರ ಸರಕಾರಕ್ಕೆ ನೀಡಿರುವುದು ಸಾರ್ವಜನಿಕರಿಂದ ವ್ಯಾಪಕ ಟೀಕೆಗೆ ಕಾರಣವಾಗಿದೆ.
ಸುಮಾರು 150 ವರ್ಷಗಳಷ್ಟು ಹಳೆಯದಾಗಿರುವ ಸಾರ್ವಜನಿಕ ವಾಚನಾಲಯ ಮೊದಲಿನಿಂದಲೂ ಮಹಾರಾಷ್ಟ್ರ ಪರವಾದ ನಿಲುವನ್ನು ತಾಳಿಕೊಂಡು ಬಂದಿದೆ. 2000ನೇ ಇಸ್ವಿಯಲ್ಲಿ ಬೆಳಗಾವಿಯಲ್ಲಿ ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನ ಆಯೋಜಿಸಿ, ಗಡಿ ವಿಷಯದಲ್ಲಿ ಮಹಾರಾಷ್ಟ್ರ ಪರವಾದ ನಿರ್ಣಯವನ್ನು ಅಂಗೀಕರಿಸಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ