Latest

ಅಪ್ರಾಪ್ತ ಬಾಲಕಿಗೆ ಲವ್ ಲೆಟರ್ ಕೊಟ್ಟ ಪಕ್ಕದ ಮನೆ ತಾತ

ಪ್ರಗತಿವಾಹಿನಿ ಸುದ್ದಿ; ಕೊಯಮತ್ತೂರು: ಅಪ್ರಾಪ್ತ ಬಾಲಕಿಗೆ ಲವ್ ಲೆಟರ್ ಕೊಟ್ಟ ಪಕ್ಕದ ಮನೆಯ ತಾತನನ್ನು ಪೊಲೀಸರು ಬಂಧಿಸಿರುವ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.

ಈಗ ಪೊಲೀಸರ ಅತಿಥಿಯಾಗಿದ್ದಾರೆ. ತಾತನ ವಯಸ್ಸಿನವರು ಎಂಬ ಸಲುಗೆಯಿಂದ ಆಗಾಗ ಮಾತನಾಡುತ್ತಿದ್ದ ಯುವತಿ ಕೈಯಲ್ಲಿ ಲೆಟರ್ ಕೊಟ್ಟ ಆ ವ್ಯಕ್ತಿ ‘ಐ ಲೈಕ್ ಯೂ.. ನಿನಗೂ ನಾನು ಅಂದ್ರೆ ಇಷ್ಟಾನಾ?’ ಎಂದು ಕೇಳಿದ್ದಾರೆ.

Home add -Advt

ಕೊಯಮತ್ತೂರಿನಲ್ಲಿ 16 ವರ್ಷದ ಅಪ್ರಾಪ್ತ ಬಾಲಕಿಗೆ 67 ವರ್ಷದ ವೃದ್ಧ ಲವ್ ಲೆಟರ್ ನೀಡಿದ್ದಾನೆ. ಆ ಲವ್ ಲೆಟರ್​ ಅನ್ನು ಆಕೆ ತನ್ನ ಅಪ್ಪ-ಅಮ್ಮನಿಗೆ ತೋರಿಸಿದ್ದಾಳೆ. ನೀನಂದ್ರೆ ನನಗಿಷ್ಟ. ನಿನಗೂ ನಾನಂದ್ರೆ ಇಷ್ಟಾನಾ? ಎಂದು ಲವ್ ಲೆಟರ್​ನಲ್ಲಿ ಬರೆದಿದ್ದನ್ನು ಕಂಡು ದಂಗಾದ ಬಾಲಕಿಯ ಅಪ್ಪ-ಅಮ್ಮ ಆ ಲೆಟರ್ ಅನ್ನು ಹಿಡಿದುಕೊಂಡು ಆತನ ಮನೆಗೆ ಹೋಗಿ ಗಲಾಟೆ ಮಾಡಿದ್ದಾರೆ. ಆ ವೃದ್ಧನ ಮನೆಯವರು ಕ್ಷಮೆ ಕೇಳಿ ಈ ವಿಷಯವನ್ನು ಮರೆತುಬಿಡುವಂತೆ ಕೇಳಿಕೊಂಡಿದ್ದಾರೆ.

ಇದರಿಂದ ಕೊಂಚ ತಣ್ಣಗಾದ ಪೋಷಕರಿಗೆ ಕೆಲದಿನಗಳಲ್ಲಿ ತಾತನ ಹಳೇ ಚಾಳಿ ಕಣ್ಣಿಗೆ ಬಿದ್ದಿದೆ. ಬಾಲಕಿಯನ್ನು ರಸ್ತೆಯಲ್ಲಿ ನಿಲ್ಲಿಸಿಕೊಂಡು ಮತ್ತೆ ತನ್ನ ಪ್ರೀತಿಯನ್ನು ವೃದ್ಧ ಹೇಳಿಕೊಂಡಿದ್ದಾನೆ. ಇದರಿಂದ ಹುಡುಗಿ ಮನೆಯಿಂದ ಹೊರಗೆ ಬರಲು ಹೆದರಿ ಕೆಲವು ದಿನಗಳ ಕಾಲ ಮನೆಯೊಳಗೇ ಕುಳಿತಿದ್ದಾಳೆ. ವೃದ್ಧನ ಕಾಟದಿಂದ ಮಗಳ ಸ್ಥಿತಿ ಕಂಡು ಮರುಗಿದ ಅಪ್ಪ-ಅಮ್ಮ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನನ್ವಯ ವೃದ್ಧನನ್ನು ಪೊಲೀಸರು ಬಂಧಿಸಿದ್ದಾರೆ. 67 ವರ್ಷದ ಮೊಹಮ್ಮದ್ ಬಹೀರ್ ಬಾಷಾ ಬಂಧಿತ ಆರೋಪಿ.

Related Articles

Back to top button