Kannada NewsLatestNational

*ವಾಯುಪಡೆಯ ಮುಖ್ಯಸ್ಥರನ್ನಾಗಿ ಎಪಿ ಸಿಂಗ್ ನೇಮಕ*

ಪ್ರಗತಿವಾಹಿನಿ ಸುದ್ದಿ: ಏ‌ರ್ ಮಾರ್ಷಲ್ ಎಪಿ ಸಿಂಗ್ ಅವರನ್ನು ಮುಂದಿನ ವಾಯುಪಡೆಯ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

ಪ್ರಸ್ತುತ ಎಪಿ ಸಿಂಗ್ ಭಾರತೀಯ ವಾಯುಪಡೆಯ (IAF) ಉಪಾಧ್ಯಕ್ಷರಾಗಿದ್ದು, ಹಾಲಿ ಏ‌ರ್ ಚೀಫ್ ಮಾರ್ಷಲ್ ವಿಆರ್ ಧರಿ ಸೆಪ್ಟೆಂಬರ್ 30 ರಂದು ನಿವೃತ್ತರಾಗಲಿದ್ದಾರೆ. ಬಳಿಕ ಅವರ ಸ್ಥಾನವನ್ನು ಸಿಂಗ್‌ ತುಂಬಲಿದ್ದಾರೆ.

Home add -Advt

ಈ ಕುರಿತು ರಕ್ಷಣಾ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ. ಪ್ರಸ್ತುತ ವಾಯುಪಡೆಯ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಅವರನ್ನು 2024ರ ಸೆಪ್ಟೆಂಬರ್ 30ರ ಮಧ್ಯಾಹ್ನದಿಂದ ಜಾರಿಗೆ ಬರುವಂತೆ ಏ‌ರ್ ಚೀಫ್ ಮಾರ್ಷಲ್ ಶ್ರೇಣಿಯಲ್ಲಿ ಮುಂದಿನ ವಾಯುಪಡೆಯ ಮುಖ್ಯಸ್ಥರನ್ನಾಗಿ ಸರ್ಕಾರ ನೇಮಿಸಿದೆ ಎಂದು ಶನಿವಾರ ತಿಳಿಸಿದೆ.

Related Articles

Back to top button