Karnataka NewsLatest

*ಮನೆಗೆ ನುಗ್ಗಿ ಉದ್ಯಮಿಯನ್ನು ಬರ್ಬರವಾಗಿ ಹತ್ಯೆಗೈದ ದುಷ್ಕರ್ಮಿಗಳು*

ಪತ್ನಿ ಸ್ಥಿತಿ ಗಂಭೀರ

ಪ್ರಗತಿವಾಹಿನಿ ಸುದ್ದಿ: ಬೆಳ್ಳಂ ಬೆಳಿಗ್ಗೆ ಮನೆಗೆ ನುಗ್ಗಿದ ದುಷ್ಕರ್ಮಿಗಳು ಉದ್ಯಮಿಯೊಬ್ಬರನ್ನು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಣಕೊಣ ಗ್ರಾಮದಲ್ಲಿ ನಡೆದಿದೆ.

Home add -Advt

ಮಹಾರಾಷ್ಟ್ರದ ಪುಣೆಯಲ್ಲಿ ಉದ್ಯಮಿಯಾಗಿದ್ದ ವಿನಾಯಕ ನಾಯ್ಕ್ (52) ಕೊಲೆಯಾಗಿರುವ ದುರ್ದೈವಿ. ಪುಣೆಯಿಂದ ಕೆಲ ದಿನಗಳ ಹಿಂದೆ ಕಾರವಾರದ ತಮ್ಮ ಊರಿಗೆ ವಿನಾಯಕ ದಂಪತಿ ಬಂದಿದ್ದರು. ಇಂದು ಪುಣೆಗೆ ವಾಪಾಸ್ ತೆರಳುವವರಿದ್ದರು. ಆದರೆ ಅಷ್ಟರಲ್ಲಿ ದುಷ್ಕರ್ಮಿಗಳು ಮನೆಯಲ್ಲಿಯೇ ಕೊಲೆ ಮಾಡಿದ್ದಾರೆ.

ಇಂದು ಮುಂಜಾನೆ ಮನೆಗೆ ನುಗ್ಗಿರುವ ದುಷ್ಕರ್ಮಿಗಳು ವಿನಾಯಕ ನಾಯ್ಕ್ ಹಾಗೂ ಅವರ ಪತ್ನಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ವಿನಾಯಕ ಅವರ ಕೈ ಕತ್ತರಿಸಿದ್ದು, ತಲೆಯ ಮೇಲೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಇದೇ ವೇಳೆ ವಿನಾಯಕ ಅವರ ಪತ್ನಿಯ ತಲೆಗೂ ಹೊಡೆದಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಉದ್ಯಮಿ ವಿನಾಯಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊಲೆ ಯಾವ ಕಾರಣಕ್ಕೆ ಯಾರು ಮಾಡಿದ್ದು ಎಂಬುದು ತಿಳಿದುಬಂದಿಲ್ಲ. ಚಿತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Related Articles

Back to top button