Belagavi NewsBelgaum NewsKannada NewsKarnataka NewsLatest

*ಗಿಡ ನೆಡುವುದರ ಜೊತೆಗೆ ರಕ್ಷಿಸಿ ಬೆಳೆಸುವುದೂ ಮುಖ್ಯ: ಚೈತನ್ಯ ಕುಲಕರ್ಣಿ* *ಚನ್ನಮ್ಮ ನಗರ ಸರಕಾರಿ ಶಾಲೆ ಆವರಣದಲ್ಲಿ ವನಮಹೋತ್ಸವ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವನಮಹೋತ್ಸವ ಮಾಡಿ ಗಿಡ ನೆಟ್ಟರೆ ಸಾಲದು, ಅವುಗಳನ್ನು ರಕ್ಷಿಸಿ ಬೆಳೆಸುವುದು ಸಹ ಅಷ್ಟೇ ಮುಖ್ಯ ಎಂದು ಸಿಜಿಕೆ  ಕನಸ್ಟ್ರಕ್ಷನ್ಸ್ ಮತ್ತು ರಿಯಲ್ ಎಸ್ಟೇಟ್ ಕಂಪನಿಯ ಚೇರಮನ್, ಕ್ರೆಡೈ ಮಾಜಿ ರಾಜ್ಯಾಧ್ಯಕ್ಷ ಚೈತನ್ಯ ಕುಲಕರ್ಣಿ ಹೇಳಿದ್ದಾರೆ.

ಮಂಗಳವಾರ ಬೆಳಗಾವಿಯ ರಾಣಿ ಚನ್ನಮ್ಮ ನಗರದ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಪ್ರಯತ್ನ ಸಂಘಟನೆ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಎಲ್ಲೆಡೆ ಹವಾಮಾನ ವೈಪರೀತ್ಯ ನೋಡುತ್ತಿದ್ದೇವೆ. ಹಾಗಾಗಿ ಹೆಚ್ಚಿನ ಪ್ರಮಾಣದಲ್ಲಿ ಗಿಡಗಳನ್ನು ನೆಡುವ ಅಗತ್ಯವಿದೆ. ಹಾಗೆ ನೆಟ್ಟ ಗಿಡಗಳ ರಕ್ಷಣೆ ಸಹ ಅಷ್ಟೇ ಮುಖ್ಯ. ಶಾಲೆಗಳ ಆವರಣದಲ್ಲಿ ಗಿಡಗಳನ್ನು ನೆಟ್ಟಾಗ ಒಬ್ಬೊಬ್ಬ ವಿದ್ಯಾರ್ಥಿಗೆ ಒಂದೊಂದು ಗಿಡದ ಜವಾಬ್ದಾರಿ ವಹಿಸುವುದರಿಂದ  ಗಿಡಗಳ ರಕ್ಷಣೆ ಜೊತೆಗೆ, ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಿದಂತಾಗುತ್ತದೆ ಎಂದು ಅವರು ಹೇಳಿದರು.

ಗಿಡಗಳ ರಕ್ಷಣೆಗೆ ತಮ್ಮದೇ ಫ್ಯಾಕ್ಟರಿಯಲ್ಲಿ ತಯಾರಿಸಿದ ಉತ್ತಮ ಗುಣಮಟ್ಟದ ಟ್ರೀ ಗಾರ್ಡ್ ಗಳನ್ನು ಚೈತನ್ಯ ಕುಲಕರ್ಣಿ ದೇಣಿಗೆಯಾಗಿ ನೀಡಿದರು. 

ಪ್ರಯತ್ನ ಸಂಘಟನೆ ಅಧ್ಯಕ್ಷೆ ಶಾಂತಾ ಆಚಾರ್ಯ, ಸಮಾಜ ಸೇವಕರಾದ ಶೀಲಾ ದೇಶಪಾಂಡೆ, ರಾಧಿಕಾ ಮಿರ್ಜಿ, ಹಿರಿಯ ಪತ್ರಕರ್ತ ಎಂ.ಕೆ.ಹೆಗಡೆ, ಶಾಲಾಭಿವೃದ್ದಿ ಸಮಿತಿ ಸದಸ್ಯ ಜಗದೀಶ ಬಡಿಗೇರ, ಪ್ರಯತ್ನ ಸಂಘಟನೆಯ ಕಾರ್ಯದರ್ಶಿ ಗೌರಿ ಸರ್ನೋಬತ್, ಸದಸ್ಯರಾದ ವೆಂಕಟೇಶ ಸರ್ನೋಬತ್, ಶ್ವೇತಾ ಬಿಜಾಪುರೆ, ಸುನೀತಾ ಭಟ್, ವರದಾ ಭಟ್, ಪದ್ಮಾ ವೇರ್ಣೇಕರ್, ಬೀನಾ ರಾವ್, ಶುಭಾ ಹೆಗಡೆ, ರೇವತಿ ಶರ್ಮಾ, ಹೇಮಾ ಮುತಾಲಿಕ, ಲತಾ ಕಟ್ಟಿ, ವೀಣಾ ಕುಲಕರ್ಣಿ, ಅಪರ್ಣಾ ಪವಾರ್, ಶುಭಾ ಕಡಗದಕೈ, ಎಂ.ಜಿ.ಭಟ್, ಶಿಕ್ಷಕರಾದ ಎ.ಕೆ. ಜೋಶಿ, ಎಲ್.ಬಿ.ಹೊಸಮನಿ, ಸೌಮ್ಯ ಮಾನೆ, ಶಿಲ್ಪಾ ಡಿ, ಯಶ್ ಬಡಾಲೆ ಮೊದಲಾದವರು ಇದ್ದರು. 

Home add -Advt

ಮುಖ್ಯಾಧ್ಯಾಪಕ ಎಸ್.ಬಿ. ಹುಬ್ಬಳ್ಳಿ ಸ್ವಾಗತಿಸಿದರು. ಶಿಕ್ಷಕಿ ಶುಭಾ ಭಟ್ ಕಾರ್ಯಕ್ರಮ ನಿರೂಪಿಸಿದರು. ಶ್ರೀದೇವಿ ಜೋಶಿ ಪರಿಸರ ಗೀತೆ ಹಾಡಿದಳು. ಮಹಾದೇವ ಮಾನೆ ವಂದಿಸಿದರು. ಇದೇ ವೇಳೆ ಉದ್ಯಮಿ ಭರತ್ ದೇಶಪಾಂಡೆ ಮಕ್ಕಳಿಗಾಗಿ ನೀಡಿದ ರೇನ್ ಕೋಟ್ ಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ರೂಪಕ ಪ್ರದರ್ಶನ ನಡೆಯಿತು.

Related Articles

Back to top button