ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನುಬೆಳಗಾವಿಯ ಎಪಿಎಂಸಿ ಠಾಣೆ ಪೊಲೀಸರು ವಶಕ್ಕೆ ಪಡೆದು ಆತನಿಂದ 8 ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ-111/2024 ಕಲಂ-303(2) ಬಿಎನ್‌ಎಸ್-2023 ಪ್ರಕರಣದ ತನಿಖೆ ಕೈಕೊಂಡಿದ್ದ ಪೊಲೀಸ್‌ರು ಕೆಎಲ್‌ಇ ಆಸ್ಪತ್ರೆ ರಸ್ತೆಯಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಹೇಮಂತ ಶಿವಾಜಿ ಜಾಂಗಳೆ ಎಂಬ ವ್ಯಕ್ತಿಯನ್ನು ವಿಚಾರಣೆ ನಡೆಸಿದಾಗ ಆತ ಒಟ್ಟು 8 ಬೈಕ್ ಗಳನ್ನು ನಗರದ ವಿವಿಧ ಸ್ಥಳಗಳಿಂದ ಕಳವು ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ.
ಎಪಿಎಂಸಿ ಪೊಲೀಸ್ ಠಾಣೆ ಮತ್ತು ಸಂಕೇಶ್ವರ ಪೊಲೀಸ್ ಠಾಣೆ ಅಪರಾಧ ಪ್ರಕರಣಗಳಲ್ಲಿ ತಲಾ ಒಂದೊಂದು ಮೋಟರ್ ಸೈಕಲ್‌ಗಳು ಪತ್ತೆ ಆಗಿದ್ದು ಬಾಕಿ ಉಳಿದ ಒಟ್ಟು 6 ಮೋಟರ್‌ಸೈಕಲ್‌ಗಳ ವಾಹನ ಮಾಲೀಕರ ಪತ್ತೆ ಕಾರ್ಯ ಮುಂದುವರೆದಿದೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಪ್ರಕರಣದಲ್ಲಿ ವಿಶೇಷ ಕರ್ತವ್ಯಪ್ರಜ್ಞೆ ತೋರಿದ ಪೊಲೀಸ್ ಇನ್ಸ್‌ಪೆಕ್ಟರ್ ಆರ್ ಆರ್ ಪಾಟೀಲ ಪಿಎಸ್‌ಐಗಳಾದ ಮಂಜುನಾಥ ಭಜಂತ್ರಿ, ತ್ರಿವೇಣಿ ನಾಟಿಕಾರ್, ಬಿ ಕೆ ಮಿಟಗಾರ, ಎಎಸ್‌ಐ, ಹಾಗೂ ಸಿಬ್ಬಂದಿಗಳಾದ ಬಿ ಎಂ ನರಗುಂದ, ಎಫ್ ಬಿ ಮುಜಾವರ, ಖಾದರ ಖಾನಮ್ಮನವರ, ಗೋವಿಂದ ಪೂಜಾರಿ, ಮತ್ತು ಎನ್ ಡಿ ಬಿರಗೊಂಡ ರವರನ್ನು ಹಿರಿಯ ಅಧಿಕಾರಿಗಳು ಪ್ರಶಂಸಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ