
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೆಲವೇ ದಿನಗಳ ಹಿಂದೆ ಆತಂಕಕ್ಕೆ ಕಾರಣವಾಗಿದ್ದ ಕೊರೋನಾ ಬೆಳಗಾವಿಯಲ್ಲಿ ಸೋಮವಾರ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ.
ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಕೇವಲ 11 ಜನರಿಗೆ ಸೋಂಕು ದೃಢಪಟ್ಟಿದೆ. ಶನಿವಾರ ಭಾನುವಾರ 50ರ ಆಸುಪಾಸಿನಲ್ಲಿದ್ದ ಕೊರೋನಾ ಸೋಂಕಿತರ ಸಂಖ್ಯೆ ಸೋಮವಾರ ಹಠಾತ್ ಕಡಿಮೆಯಾಗಿದೆ. ಕಳೆದ ವಾರ ಸಾವಿರ ದಾಟುವ ಮೂಲಕ ಆತಂಕ ಸೃಷ್ಟಿಸಿತ್ತು.
ಸೋಮವಾರ ಬೆಳಗಾವಿ ತಾಲೂಕಿನಲ್ಲಿ 3, ಸವದತ್ತಿಯಲ್ಲಿ 2, ರಾಮದುರ್ಗದಲ್ಲಿ 3, ಖಾನಾಪುರ, ಗೋಕಾಕ ಹಾಗೂ ರಾಯಬಾಗದಲ್ಲಿ ತಲಾ ಒಬ್ಬರಿಗೆ ಮಾತ್ರ ಕೊರೋನಾ ದೃಢಪಟ್ಟಿದೆ.
ಬೆಳಗಾವಿಯಲ್ಲಿ ನಿಲ್ಲದ ಕೊರೋನಾ ಅಟ್ಟಹಾಸ: ಗುರುವಾರ 3ನೇ ಅಲೆಯ ಹೊಸ ದಾಖಲೆ