Kannada NewsKarnataka NewsLatest

ಕಾರ್ಮಿಕರು ಬೇಕೆ? -ಇಲ್ಲಿ ಸಂಪರ್ಕಿಸಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -: ಕೊವಿಡ್-೧೯ ಲಾಕ್‌ಡೌನ ಅವಧಿಯಲ್ಲಿ  ಹೆಚ್ಚಿನ ಕೈಗಾರಿಕೆಗಳು ಬಂಡವಾಳದ ಸಮಸ್ಯೆ, ಕಾರ್ಮಿಕರ ಕೊರತೆ, ಮಾರುಕಟ್ಟೆ ಸಮಸ್ಯೆ, ಕಚ್ಚಾಮಾಲು ಕೊರತೆ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದ್ದು ಹೆಚ್ಚಿನ ಕಾರ್ಮಿಕರು ಹೊರ ರಾಜ್ಯಗಳಿಂದ  ಜಿಲ್ಲೆಗೆ ವಲಸೆ ಬಂದಿದ್ದು ಹಾಗೂ ಈ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರು ಹೊರರಾಜ್ಯಗಳಗೆ ವಲಸೆ ಹೋಗಿರುವ ಕಾರಣ ಜಿಲ್ಲೆಯಲ್ಲಿ ಇರುವ ಕೈಗಾರಿಕೆಗಳು ಕಾರ್ಮಿಕರ ಸಮಸ್ಯೆಯನ್ನು ಎದುರಿಸುತ್ತಿದ್ದು, ಕೈಗಾರಿಕಾ ಅಭಿವೃದ್ದಿ ಕುಂಠಿತವಾಗಿದೆ.
ಹೊರರಾಜ್ಯಗಳಲ್ಲಿ ಕೆಲಸ ಮಾಡುತ್ತಿರುವ ಬೆಳಗಾವಿ ಜಿಲ್ಲೆಯ ಸುಮಾರು ೪೦೦೦ ಕಾರ್ಮಿಕರು ಕೊವಿಡ್-೧೯ ಲಾಕ್‌ಡೌನ ಅವಧಿಯಲ್ಲಿ ಜಿಲ್ಲೆಗೆ ಮರಳಿ ಬಂದಿರುತ್ತಾರೆ. ಈ ಕಾರ್ಮಿಕರ ವಿದ್ಯಾರ್ಹತೆ, ಕೌಶಲ್ಯ, ಅನುಭವ ಇತ್ಯಾದಿ ವಿವರಗಳನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ, ಬೆಳಗಾವಿ ಇವರು ಕ್ರೋಢಿಕರಿಸಿದ್ದಾರೆ.
ಹೊರರಾಜ್ಯಗಳಿಂದ ವಲಸೆ ಬಂದಿರುವ ಕಾರ್ಮಿಕರಿಗೆ ಉದ್ಯೋಗ ದೊರಕಿಸಿಕೊಡುವುದು ಮತ್ತು ಜಿಲ್ಲೆಯ ನಿರುದ್ಯೋಗಿ ಯುವಕ / ಯುವತಿಯರಿಗೆ ಕೈಗಾರಿಕೆಗಳಿಗೆ ಬೇಕಾಗಿರುವ ಕೌಶಲ್ಯಾಭಿವೃದ್ದಿಯನ್ನು ಒದಗಿಸಿ, ಕೈಗಾರಿಕೆಗಳಲ್ಲಿ ಉದ್ಯೋಗ ದೊರಕಿಸಿಕೊಡಲು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಸೇತುವೆಯಾಗಿ ಕಾರ್ಯನಿರ್ವಹಿಸಲು ಸಿದ್ದವಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡಬಸವರಾಜ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿರುವ ಕೈಗಾರಿಕೆಗಳಿಗೆ ಅವಶ್ಯವಿರುವ ಕಾರ್ಮಿಕರ ನೈಪುಣ್ಯತೆ ಹಾಗೂ ಕೆಲಸದ ಅನುಭವ ಇತ್ಯಾದಿ ಅವಶ್ಯಕತೆಗನುಗುಣವಾಗಿ ಕೈಗಾರಿಕೆಗಳು ತಮ್ಮ ಕಾರ್ಮಿಕರ ಬೇಡಿಕೆಯನ್ನು ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಉದ್ಯಮಬಾಗ, ಬೆಳಗಾವಿ ಇವರಿಗೆ ನೀಡುವಂತೆ ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಎಸ್. ಬಿ. ಹುಕ್ಕೇರಿ, ಉಪನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಬೆಳಗಾವಿ ಮೊಬೈಲ್ ಸಂಖ್ಯೆ : ೯೪೪೯೨೨೪೪೬೪ ಇವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡಬಸವರಾಜ್ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button