*ಮಾದಕ ವಸ್ತು ಮಾರಾಟ ತಡೆಯುವಂತೆ ಪೊಲೀಸ್ ಆಯುಕ್ತರಿಗೆ ಮನವಿ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗಾಂಜಾ ಮತ್ತು ಮಾದಕ ವಸ್ತುಗಳ ಅನಧಿಕೃತ ಮಾರಾಟ ಹೆಚ್ಚಾಗುತ್ತಿದ್ದು, ಕ್ರಮ ಕೈಗೊಳ್ಳುವಂತೆ ಬಿಜೆಪಿ ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠ ಬೆಳಗಾವಿ ಮಹಾನಗರ ಜಿಲ್ಲೆ ವತಿಯಿಂದ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಮನವಿಯನ್ನು ಬೆಳಗಾವಿ ಮಹಾನಗರ ಪೋಲಿಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನಾಂಗ ಮತ್ತು ಡಿಸಿಪಿ ರೋಹನ್ ಜಗದೀಶ್ ಅವರಿಗೆ ಸಲ್ಲಿಸಿ, ಅನಧಿಕೃತ ಮಾದಕ ವಸ್ತುಗಳ ಮಾರಾಟ ಜಾಲ ಪತ್ತೆ ಹಚ್ಚಿ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಲಾಯಿತು.
ಈ ವೇಳೆ ಬಿಜೆಪಿ ರಾಜ್ಯ ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠದ ಸದಸ್ಯೆ ಜ್ಯೋತಿ ದೀಪಕ ಶೆಟ್ಟಿ, ಮಹಾನಗರ ಕಾರ್ಯದರ್ಶಿ ಈರಯ್ಯ ಖೋತ್, ಜಿಲ್ಲಾ ಪ್ರಕೋಷ್ಟದ ಸಂಯೋಜಕಿ ಮಹಾದೇವಿ ಹಿರೇಮಠ್, ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠದ ಸಂಚಾಲಕ ಚೇತನ್ ಕಟ್ಟಿ, ಜಿಲ್ಲಾ ಸಂಯೋಜಕ ನಾಗರಾಜ್ ಪಾಟೀಲ್, ಉತ್ತರ ಮಂಡಲ ಕಾರ್ಯದರ್ಶಿ ವಿನೋದ್ ಲಂಗೋಟಿ , ಯುವ ಮೋರ್ಚಾ ಅಧ್ಯಕ್ಷ ಮಹದೇವ ದರೆಣ್ಣವರ್, ಉತ್ತರ ಮಂಡಳ ಉಪಾಧ್ಯಕ್ಷ ವಿಜಯ್ ಭದ್ರ , ಯುವ ಮೋರ್ಚಾ ಕಾರ್ಯದರ್ಶಿ ಚೇತನ್ ಬಡಿಗೇರ್, ಬೂತ್ ಸಮಿತಿ ಅಧ್ಯಕ್ಷೆ ಮಂಜುಳಾ ರಾಜಮನೆ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ