ಅರ್ಜಿ ಆಹ್ವಾನ… ಅರ್ಜಿ ಆಹ್ವಾನ… ಅರ್ಜಿ ಆಹ್ವಾನ… ಪ್ರಶಸ್ತಿ, ಉದ್ಯೋಗ, ಸಾಲ, ಪ್ರೋತ್ಸಾಹ ಧನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವಿವಿಧ ಪ್ರಶಸ್ತಿ, ಉದ್ಯೋಗ, ಸಾಲಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಇಲ್ಲಿದೆ ವಿವರ –
ಏಕಲವ್ಯ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
ಯುವ ಸಬಲೀಕರಣ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಅಸಾಧಾರಣ ಪ್ರತಿಭೆಯನ್ನು ತೋರಿರುವ ರಾಜ್ಯದ ಕ್ರೀಡಾ ಪಟುಗಳಿಗೆ ೨೦೨೦ ನೇ ಸಾಲಿನ ಏಕಲವ್ಯ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಕ್ರೀಡಾಪಟುಗಳು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಅರ್ಜಿಗಳನ್ನು ಆಗಸ್ಟ ೨೩ ರ ಒಳಗಾಗಿ ಉಪನಿರ್ದೇಶಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ ಬೆಳಗಾವಿ ಈ ಕಚೇರಿಗೆ ಸಲ್ಲಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ರೀಡಾಪಟುಗಳಿಗೆ ಇರಬೇಕಾದ ಅರ್ಹತೆಗಳು:
ಕಳೆದ ೫ ವರ್ಷಗಳ ಕ್ರೀಡಾ ಸಾಧನೆಯನ್ನು ಪರಿಗಣ ಸಲಾಗುವುದು, ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಕರ್ನಾಟಕವನ್ನು
ಪ್ರತಿನಿಧಿಸಿದ ಕ್ರೀಡಾಪಟುಗಳು ಪ್ರಶಸ್ತಿಗೆ ಅರ್ಹರಾಗಿರುತ್ತಾರೆ ಹಾಗೂ ರಾಷ್ಟ್ರಮಟ್ಟದ ಕ್ರೀಡೆಗಳಲ್ಲಿ ಕರ್ನಾಟಕವನ್ನು ೫ ವರ್ಷ ಪ್ರತಿನಿಧಿಸಿದ ಭಾರತದ ನಿವಾಸಿಯಾದ ಕ್ರೀಡಾಪಟುಗಳು ಪ್ರಶಸ್ತಿಗೆ ಅರ್ಹರಾಗಿರುತ್ತಾರೆ.
ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಕರ್ನಾಟಕದ ಕ್ರೀಡಾಪಟುಗಳು ಪ್ರಶಸ್ತಿಗೆ ಅರ್ಹರಾಗಿರುತ್ತಾರೆ. ಇಂತಹ ಸಂದರ್ಭದಲ್ಲಿ ಕನಿಷ್ಠ ಒಂದು ವರ್ಷ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿರಲೇಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಳಗಾವಿ ಕಚೇರಿಯ ದೂರವಾಣಿ ೦೮೩೧-೨೪೭೪೧೦೧ ಗೆ ಸಂಪರ್ಕಿಸಬಹುದು.
ಮಹಿಳೆಯರ ಸ್ವಯಂ ಉದ್ಯೋಗಕ್ಕೆ ಅರ್ಜಿ ಆಹ್ವಾನ
ಬೆಳಗಾವಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದಿಂದ ೨೦೨೧-೨೨ ನೇ ಸಾಲಿನ ಉದ್ಯೊಗಿನಿ ಯೋಜನೆಯಡಿ ೧೮-೫೫ ವಯೋಮಿತಿಯ ಇತರೆ ಕುಟುಂಬ ವರ್ಗದ ವಾರ್ಷಿಕ ಆದಾಯವು ರೂ.೧.೫೦ ಲಕ್ಷ ಹಾಗೂ ಎಸ್.ಸಿ/ಎಸ್.ಟಿ ವರ್ಗದವರ ರೂ.೨ ಲಕ್ಷಕ್ಕಿಂತ ಮೀರದ ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಘಟಕ ವೆಚ್ಚ ಕನಿಷ್ಠ ರೂ.೧ ಲಕ್ಷ ಮತ್ತು ಗರಿಷ್ಠ ರೂ.೩ ಲಕ್ಷವಿದ್ದು, ಇತರೆ ವರ್ಗದ ಘಟಕ ವೆಚ್ಚದ ಪ್ರತಿಶತ ೩೦ ರಷ್ಟು, ಗರಿಷ್ಠ ರೂ.೯೦,೦೦೦ ಹಾಗೂ ಎಸ್.ಸಿ, ಎಸ್.ಟಿ ವರ್ಗದವರಿಗೆ ಪ್ರತಿಶತ ೫೦ ರಷ್ಟು ಗರಿಷ್ಠ ರೂ.೧,೫೦,೦೦೦ ನಿಗಮದಿಂದ ಸಹಾಯಧನ ಮತ್ತು ಬ್ಯಾಂಕ್ ಮುಲಕ ಸಾಲ ಒದಗಿಸಲಾಗುವುದು ಎಂದು ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಬಸವರಾಜ ವರವಟ್ಟಿ ತಿಳಿಸಿದ್ದಾರೆ.
ಆಸಕ್ತ ಮಹಿಳೆಯರು ತಮ್ಮ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯಿಂದ ಅರ್ಜಿಗಳನ್ನು ಪಡೆದು ಅಗಸ್ಟ ೨೧ ರ ಒಳಗಾಗಿ ಅಗತ್ಯ ದಾಖಲಾತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ಸಂಬಂಧಪಟ್ಟ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು, ಅವಧಿ ಮೀರಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಸಾಲ ಪಡೆಯಲು ಇರಬೇಕಾದ ಅರ್ಹತೆಗಳು:
ಅರ್ಜಿದಾರಳು ಕರ್ನಾಟಕ ರಾಜ್ಯದ ಖಾಯಂ ನಿವಾಸಿಗಳಾಗಿರಬೇಕು, ೧೮-೫೫ ವರ್ಷದೊಳಗಿರಬೇಕು, ರಾಷ್ಟ್ರೀಕೃತ ಬ್ಯಾಂಕ್ ಖಾತೆಯನ್ನು ಹೊಂದಿದ್ದು, ಚಾಲ್ತಿಯಲ್ಲಿರಬೇಕು.
ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಸಲ್ಲಿಸುವುದು, ಯೋಜನಾ ವರದಿ, ಆಯ್ಕೆಯಾದ ಫಲಾನುಭವಿಗಳಿಗೆ ಇ.ಡಿ.ಪಿ ತರಬೇತಿ ಪಡೆದು ಬ್ಯಾಂಕಿನಿಂದ ಸಾಲ ಮಂಜೂರಾತಿ ನಂತರ ಫಲಾನುಭವಿಗಳಿಗೆ ಸಹಾಯಧನ ಮಂಜೂರು ಮಾಡಲಾಗುವುದು.
ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು:
ಜಾತಿ ಪ್ರಮಾಣ ಪತ್ರ ದೃಢಿಕರಿಸಿದ, ಕುಟುಂಬ ವಾರ್ಷಿಕ ಆದಾಯ ಪ್ರಮಾಣಪತ್ರ, ವಿಳಾಸದ ದೃಢೀಕರಣ ದಾಖಲೆಗಳು, ಯೋಜನಾ ವರದಿ, ತರಬೇತಿ ಅಥವಾ ಅನುಭವ ಪತ್ರ, ೩ ಭಾವಚಿತ್ರ, ದ್ವಿ ಪ್ರತಿಯಲ್ಲಿ ಭರ್ತಿ ಮಾಡಿದ ಅರ್ಜಿ, ಸ್ತ್ರೀ ಶಕ್ತಿ ಸಂಘದ ನಡುವಳಿಕೆಗಳ ಪ್ರತಿ ಗುಂಪು ಸಾಲಕ್ಕೆ ಮಾತ್ರ, ರಾಷ್ಟ್ರೀಕೃತ ಬ್ಯಾಂಕಿನಲ್ಲಿ ತೆರೆಯಲಾದ ಬ್ಯಾಂಕ್ ಖಾತೆಯ ಪುಸ್ತಕದ ನಕಲು ಪ್ರತಿ ಮತ್ತು ಬ್ಯಾಂಕಿನ ಹೆಸರು ಐ.ಎಫ್‌ಎಸ್.ಸಿ ಕೋಡ್ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು ಎಂದು ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಬಸವರಾಜ ವರವಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ರಾಜ್ಯದಲ್ಲಿ ಕ್ರೀಡಾಪಟುಗಳು ಕ್ರೀಡಾ ಕ್ಷೇತ್ರದಲ್ಲಿ ಸಾಧಿಸಿದ ಅತ್ಯುತ್ತಮ ಸಾಧನೆಗಳನ್ನು ಗುರುತಿಸಿ ಕ್ರೀಡಾ ಪೋಷಕರಿಗೆ ೨೦೨೧-೨೨ನೇ ಸಾಲಿನ ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಇರಬೇಕಾದ ಅರ್ಹತೆಗಳು :
ಕ್ರೀಡಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಕ್ರೀಡೆಯ ಅಭಿವೃದ್ಧಿಗೆ ನೆರವು ನೀಡಿ ೫ ವರ್ಷಗಳಲ್ಲಿ ರಾಜ್ಯ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾ ಕ್ಷೇತ್ರದಲ್ಲಿ ಕೊಡುಗೆ ನೀಡಿದ ಕ್ರೀಡಾ ಪೋಷಕರು ಈ ಪ್ರಶಸ್ತಿಗೆ ಅರ್ಹರಾಗಿರುತ್ತಾರೆ. ಕರ್ನಾಟಕ ನಿವಾಸಿಗಳಲ್ಲದ ಹಾಗೂ ರಾಜ್ಯದ ಕ್ರೀಡಾ ಕ್ಷೇತ್ರಕ್ಕೆ ತೊಡಗಿಸದೇ ಇರುವ ಕ್ರೀಡಾ ಪೋಷಕರುಗಳು ಈ ಪ್ರಶಸ್ತಿಗೆ ಅರ್ಹರಾಗಿರುವುದಿಲ್ಲ ಮತ್ತು ಕ್ರಿಮಿನಲ್ ಹಿನ್ನೆಲೆ ಇಲ್ಲ ಎಂಬ ಬಗ್ಗೆ ಪೋಲಿಸ್ ವೆರಿಫಿಕೇಷನ್ ಸರ್ಟಿಫಿಕೇಟ್ ಕಡ್ಡಾಯವಾಗಿ ಸಲ್ಲಿಸಬೇಕು.
ಅರ್ಹ ಕ್ರೀಡಾ ಪೋಷಕರು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಉಪ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ, ಬೆಳಗಾವಿ ಈ ಕಚೇರಿಗೆ ಸಲ್ಲಿಸಬೇಕು.
ಅರ್ಜಿಗಳನ್ನು ಸಲ್ಲಿಸಲು ಆ.೨೩ ಕೊನೆಯ ದಿನಾಂಕವಾಗಿರುತ್ತದೆ. ನಂತರ ಬಂದ ಪ್ರಸ್ತಾವನೆಗಳನ್ನು ಸ್ವೀಕರಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಳಗಾವಿ ಕಚೇರಿಯ ದೂರವಾಣ ಸಂಖ್ಯೆ ೦೮೩೧-೨೪೭೪೧೦೧ ನ್ನು ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ರೀಡಾಪಟುಗಳಿಗೆ ನಗದು ಬಹುಮಾನಕ್ಕಾಗಿ ಅರ್ಜಿ ಆಹ್ವಾನ
ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ವಿಜೇತರಾದ ಕ್ರೀಡಾಪಟುಗಳಿಗೆ ನಗದು ಬಹುಮಾನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
೨೦೨೦ನೇ ಸಾಲಿನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಪದಕ ಪಡೆದ ಕ್ರೀಡಾಪಟುಗಳು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ರಾಷ್ಟ್ರಕ್ಕೆ ಕೀರ್ತಿ ತಂದ ಕರ್ನಾಟಕದ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದ ವತಿಯಿಂದ ನಗದು ಪುರಸ್ಕಾರವನ್ನು ನೀಡಲಾಗುತ್ತಿದೆ.
ಕರ್ನಾಟಕವನ್ನು ರಾಷ್ಟ್ರ ಮಟ್ಟದ ಕ್ರೀಡಾಕೂಟಗಳಲ್ಲಿ ಅಧಿಕೃತವಾಗಿ ಪ್ರತಿನಿಧಿಸಿ ಪದಕ ಪಡೆದ ಹಾಗೂ ಭಾರತವನ್ನು ಅಧಿಕೃತವಾಗಿ ಅಂತರರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿದ ಕರ್ನಾಟಕದ ಕ್ರೀಡಾಪಟುಗಳು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ, ಅಂಗೀಕೃತ ಕ್ರೀಡಾ ಸಂಸ್ಥೆಗಳಿಂದ/ಜಿಲ್ಲೆಗಳ ಉಪ ನಿರ್ದೇಶಕರು/ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,/ಕರ್ನಾಟಕ ಕ್ರೀಡಾ ಪ್ರಾಧಿಕಾರದ ಶಿಫಾರಸ್ಸಿನೊಂದಿಗೆ ಸಲ್ಲಿಸಬೇಕು.
ಆದ್ದರಿಂದ ಅರ್ಹ ಕ್ರೀಡಾಪಟುಗಳು ಅರ್ಜಿಗಳನ್ನು ಆಗಸ್ಟ ೨೩ ರ ಒಳಗಾಗಿ ಉಪ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಳಗಾವಿ ಇವರಿಗೆ ಸಲ್ಲಿಸಬೇಕು. ಆಗಸ್ಟ ೨೩ ರ ನಂತರ ಬಂದ ಪ್ರಸ್ತಾವನೆಗಳನ್ನು ಸ್ವೀಕರಿಸಲಾಗುವುದಿಲ್ಲ.
ಹೆಚ್ಚಿನ ವಿವರಗಳಿಗಾಗಿ ಬೆಳಗಾವಿಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕರ ಕಚೇರಿಯನ್ನು ಅಥವಾ ದೂರವಾಣ ಸಂಖ್ಯೆ ೦೮೩೧-೨೪೭೪೧೦೧ ನ್ನು ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಚ್.ಐ.ವಿ ಪೀಡಿತ/ಸೋಂಕಿತ ಮಹಿಳೆಯರ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹಿಳಾ ಅಭಿವೃದ್ಧಿ ನಿಗಮದಿಂದ ಧನಶ್ರೀ ಯೋಜನೆಯಡಿ ಎಚ್.ಐ.ವಿ ಪೀಡಿತ/ಸೋಂಕಿತ ಮಹಿಳೆಯರು ಸ್ವಯಂ ಉದ್ಯೋಗ ಕೈಗೊಳ್ಳಲು ಹಾಗೂ ಆರ್ಥಿಕವಾಗಿ ಸಮೃದ್ಧಿ ಹೊಂದಲು ರೂ.೩೦,೦೦೦ ಗಳ ನೇರ ಪ್ರೋತ್ಸಾಹ ಧನ ಸೌಲಭ್ಯ ಒದಗಿಸಲು ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ನಿಗದಿತ ಅರ್ಜಿ ಫಾರ್ಮಗಳನ್ನು ಪ್ರತಿ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಿಂದ ಪಡೆದು ಆಗಸ್ಟ ೨೧ ರ ಒಳಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಸಾಲ ಪಡೆಯಲು ಇರಬೇಕಾದ ಅರ್ಹತೆಗಳು:
ಅರ್ಜಿದಾರಳು ರಾಷ್ಟ್ರೀಕೃತ ಬ್ಯಾಂಕ್ ಖಾತೆಯನ್ನು ಹೊಂದಿದ್ದು, ಚಾಲ್ತಿಯಲ್ಲಿರಬೇಕು. ಕರ್ನಾಟಕ ರಾಜ್ಯದ ಖಾಯಂ ನಿವಾಸಿಗಳಾಗಿರಬೇಕು. ಅರ್ಜಿದಾರಳು ೧೮ ರಿಂದ ೬೦ ವರ್ಷದೊಳಗಿರಬೇಕು ಹಾಗೂ ಯಾವುದೇ ಆರ್ಥಿಕ ಸಂಸ್ಥೆ/ಬ್ಯಾಂಕುಗಳಲ್ಲಿ ಸಾಲಗಾರರಾಗಿರಬಾರದು.
ಗಂಡ, ಹೆಂಡತಿ, ಎರಡು ಮಕ್ಕಳು ಹೊಂದಿರುವ ಕುಟುಂಬದಲ್ಲಿ ಒಬ್ಬ ಮಹಿಳೆ ಮಾತ್ರ ಯೋಜನೆಯ ಸೌಲಭ್ಯ ಹೊಂದಲು ಅರ್ಹಳಾಗಿರುತ್ತಾಳೆ.
ಅರ್ಜಿದಾರಳ ಕುಟುಂಬದಲ್ಲಿ (೫.೧) ಮಹಿಳೆ ಹೆಚ್.ಐ.ಚಿ ಸೋಂಕಿತಳಾಗಿದ್ದರೆ, (೫.೨) ಮಹಿಲೆ ಹೆಚ್.ಐ.ಚಿ ಯಿಂದ ಬಾಧಿತಳಾಗಿದ್ದರೆ (ಹೆಂಡತಿ ಅಥವಾ ೧೮ ವರ್ಷ ಮೀರಿದ ಅವಿವಾಹಿತೆ ಮಗಳು) ಈ ಯೋಜನೆಯ ಸೌಲಭ್ಯ ಪಡೆಯಬಹುದಾಗಿರುತ್ತದೆ. ಈ ಕುರಿತಾಗಿ ಜಿಲ್ಲೆಯ ಹತ್ತಿರದ ಆರೋಗ್ಯ ಕೇಂದ್ರದಲ್ಲಿನ ಐ.ಸಿ.ಟಿ.ಸಿ ಕೇಂದ್ರಗಳಲ್ಲಿ ವೈದ್ಯಕೀಯ ವರದಿಯನ್ನು ಪಡೆದಿರಬೇಕು.
ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು:
ಸಾಲ ಪಡೆಯಲು ನಿಗಮಕ್ಕೆ ಸಲ್ಲಿಸಬೇಕಾದ ಸಾಲ ಮತ್ತು ಸಹಾಯಧನದ ಅರ್ಜಿ, .ಅರ್ಜಿದಾರಳ ೪ ಭಾವಚಿತ್ರಗಳು, ವಿಳಾಸದ ದೃಢೀಕರಣ ದಾಖಲೆಗಳು (ಮತದಾರರ ಗುರುತಿನ ಚೀಟಿ/ಆಧಾರ್‌ಕಾರ್ಡ್/ಪಡಿತರಚೀಟಿ) ಯಾವುದಾದರೊಂದು ದಾಖಲೆ ಸಲ್ಲಿಸಬೇಕು.
ಅರ್ಜಿದಾರಳು ಮತ್ತು ನಿಗಮದೊಂದಿಗೆ ಸಾಲದ ಕುರಿತಾಗಿ ಮಾಡಿಕೊಳ್ಳುವ ಒಪ್ಪಂದದ ಪತ್ರ (ರೂ.೨೦/- ಛಾಪಾಕಾಗದದಲ್ಲಿ) , ರಾಷ್ಟ್ರೀಕೃತ ಬ್ಯಾಂಕಿನಲ್ಲಿ ತೆರೆಯಲಾದ ಬ್ಯಾಂಕ್ ಖಾತೆಯ ಪುಸ್ತಕದ ನಕಲು ಪ್ರತಿ ಮತ್ತು ಬ್ಯಾಂಕಿನ ಹೆಸರು, ಐ.ಎಫ್.ಎಸ್.ಸಿ. ಕೋಡ್‌ನ ದಾಖಲೆಯೊಂದಿಗೆ ಸಲ್ಲಿಸಬೇಕು.
ಅಲ್ಲದೇ, ಕುಟುಂಬದ ಬಿ.ಪಿ.ಎಲ್ ಕಾರ್ಡ್‌ನ ನಕಲು ಪ್ರತಿ, ಆಧಾರ್ ಕಾರ್ಡ್ ನಕಲು ಪ್ರತಿ, ಸಾಲ ಪಡೆಯಲು ಉದ್ದೇಶಿಸಿದ ಆದಾಯೋತ್ಪನ್ನ ಚಟುವಟಿಕೆಯ ಯೋಜನಾ ವರದಿ, ಬೇರೆ ಯಾವುದೇ ಆರ್ಥಿಕ ಸಂಸ್ಥೆ ಅಥವಾ ಬ್ಯಾಂಕುಗಳಿಂದ ಸಾಲ ಪಡೆದಿಲ್ಲ ಎಂಬ ಬಗ್ಗೆ ದೃಢೀಕರಣ ಪತ್ರ ಹಾಗೂ ಐ.ಸಿ.ಟಿ.ಸಿ./ ಪಿ.ಪಿ.ಟಿ.ಸಿ.ಟಿ. ಕೇಂದ್ರಗಳಲ್ಲಿ ಪಡೆದ ಹೆಚ್.ಐ.ವಿ. ಸೋಂಕು ಇರುವ ಸಂಬಂಧ ವೈದ್ಯಕೀಯ ವರದಿಯ ನಕಲು ಪ್ರತಿಗಳೊಂದಿಗೆ ಅರ್ಜಿಯನ್ನು ದ್ವಿಪ್ರತಿಯಲ್ಲಿ ಸಲ್ಲಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಬಸವರಾಜ ವರವಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
೨೦೨೧-೨೨ ನೇ ಸಾಲಿನ ಕಿರುಸಾಲ ಯೋಜನೆಯಡಿ ಸ್ತ್ರೀ ಶಕ್ತಿ ಸಂಘಗಳಿಂದ ಅರ್ಜಿ ಆಹ್ವಾನ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕರ್ನಾಟಕ ರಾಜ್ಯ ಬೆಳಗಾವಿ ಅಭಿವೃದ್ಧಿ ನಿಗಮದಿಂದ ಕಿರುಸಾಲ ಯೋಜನೆಯಡಿ ಸ್ತ್ರೀ ಶಕ್ತಿ ಗುಂಪುಗಳ ಬಲವರ್ಧನೆ ಮತ್ತು ಸಬಲೀಕರಣಕ್ಕಾಗಿ ಆದಾಯೋತ್ಪನ್ನ ಚಟುವಟಿಕೆಗಳ ಸಣ್ಣ ಉದ್ದಿಮೆಯನ್ನು ಸ್ತ್ರೀ ಶಕ್ತಿ ಸಂಘಗಳಿಂದ ಸ್ಥಾಪಿಸಲು ೨೦೨೧-೨೨ ನೇ ಸಾಲಿಗೆ ಕಿರುಸಾಲ ಯೋಜನೆಯಡಿ ಸ್ತ್ರೀ ಶಕ್ತಿ ಸಂಘಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಇತರೆ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿಗೆ ರೂ.೧-೨ ಲಕ್ಷಗಳವರೆಗೆ ಬಡ್ಡಿರಹಿತ ಸಾಲವನ್ನು ನೀಡಲಾಗುವುದು. ಕಿರುಸಾಲ ನಿಗದಿತ ಅರ್ಜಿಗಳ ಪ್ರತಿಯನ್ನು ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಿಂದ ಪಡೆದು ಆಗಸ್ಟ ೨೧ ರ ಒಳಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಂದ ದೃಢೀಕರಿಸಿ, ಸಂಬಂಧಪಟ್ಟ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ಪರಿಗಣ ಸಲಾಗುವುದಿಲ್ಲ.
ಸಾಲ ಪಡೆಯಲು ಅರ್ಹತೆಗಳು:
ಸ್ತ್ರೀ ಶಕ್ತಿ ಗುಂಪುಗಳು ಬ್ಯಾಂಕ್ ಖಾತೆಯನ್ನು ಹೊಂದಿದ್ದು, ಚಾಲ್ತಿಯಲ್ಲಿರಬೇಕು. ಗುಂಪಿನ ಸದಸ್ಯರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಗಳಾಗಿರಬೇಕು ಹಾಗೂ ಗುಂಪು ಬೇರೆ ಯಾವುದೇ ಆರ್ಥಿಕ ಸಂಸ್ಥೆಗಳಲ್ಲಿ ಸಾಲಗಾರರಾಗಿರಬಾರದು.
ಈಗಾಗಲೇ ಕಿರುಸಾಲ ಯೋಜನೆಯಡಿ ಪ್ರಯೋಜನೆ ಪಡೆಯದೇ ಇರುವ ಸಂಘಗಳು ಮಾತ್ರ ಸಾಲ ಪಡೆಯಲು ಅರ್ಹರಾಗಿರುತ್ತಾರೆ. ಸ್ತ್ರೀ ಶಕ್ತಿ ಗುಂಪು ಆರ್ಥಿಕವಾಗಿ ಸದೃಢವಾಗಿದ್ದು, ಗುಂಪು ಕನಿಷ್ಠ ರೂ.೧ ಲಕ್ಷ ಉಳಿತಾಯ ಹೊಂದಿರಬೇಕು. ಸಂಘದ ಉಳಿತಾಯಕ್ಕೆ ಅನುಗುಣವಾಗಿ ನಿಗಮದಿಂದ ನೇರವಾಗಿ ಸಂಘದ ಖಾತೆಗೆ ಸಾಲವನ್ನು ಬಿಡುಗಡೆ ಮಾಡಲಾಗುವುದು.
ಒಂದು ಸ್ತ್ರೀ ಶಕ್ತಿ ಗುಂಪಿನಲ್ಲಿ ೧೦-೧೫ ಸದಸ್ಯರಿದ್ದು, ಅದರಲ್ಲಿ ಶೇ.೭೫ ರಷ್ಟು ಪ್ರತಿಶತ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಮಹಿಳೆಯರು ಇರತಕ್ಕದ್ದು.
ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು:
ಸಾಲ ಪಡೆಯಲು ನಿಗಮಕ್ಕೆ ಸಲ್ಲಿಸಬೇಕಾದ ಸಾಲದ ಅರ್ಜಿ, ಗ್ರೇಡಿಂಗ್ ಮಾಡಿರುವ ದಾಖಲೆಗಳನ್ನು ಸಂಬಂಧಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ದೃಢೀಕರಿಸಿ ನೀಡುವುದು. ಸದಸ್ಯರೆಲ್ಲರೂ ಸಹಿ ಮಾಡಿರುವ ರೂ.೫೦/- ಛಾಪಾ ಕಾಗದ, ಬ್ಯಾಂಕ್ ಖಾತೆಯ ಪುಸ್ತಕದ ನಕಲು ಪ್ರತಿ ಮತ್ತು ಬ್ಯಾಂಕಿನ ಹೆಸರು ಮತ್ತು ಅದರ ಐ.ಎಫ್‌ಎಸ್..ಸಿ ಕೋಡ್ ದಾಖಲೆ ಸಲ್ಲಿಬೇಕು.
ಸಾಲ ಪಡೆಯಲು ಉದ್ದೇಶಿಸಿದ ಉತ್ಪಾದನಾ ಘಟಕದ ಯೋಜನಾ ವರದಿ ಅದರಲ್ಲಿ ಘಟಕದ ಸ್ಥಿರ ಮತ್ತು ಚರಾಸ್ತಿಯ ಸಂಪೂರ್ಣ ವಿವರ ಮತ್ತು ಘಟಕದ ಉತ್ಪಾದನಾ ಸಾಮರ್ಥ್ಯದಿಂದ ಗುಂಪು ಮಾನಸಿಕವಾಗಿ ಗಳಿಸುವ ನಿವ್ವಳ ಲಾಭದ ವಿವರ ಹೊಂದಿರಬೇಕು.
ಗುಂಪು ಕೈಗೊಳ್ಳುವ ಘಟಕದ ಸ್ಥಾಪನೆಯ ಬಗ್ಗೆ ಗುಂಪಿನ ಸಭೆಯಲ್ಲಿ ಎಲ್ಲಾ ಸದಸ್ಯರು ಸಹಿ ಮಾಡಿ ಕೈಗೊಳ್ಳುವ ನಿರ್ಣಯದ ಪ್ರತಿ, ಬೇರೆ ಯಾವುದೇ ಆರ್ಥಿಕ ಸಂಸ್ಥೆ ಅಥವಾ ಬ್ಯಾಂಕುಗಳಿಂದ ಸಾಲ ಪಡೆದಿಲ್ಲ ಎಂಬ ಬಗ್ಗೆ ದೃಢೀಕರಣವನ್ನು ಗುಂಪು ಇರುವ ಭೌಗೋಳಿಕ ವ್ಯಾಪ್ತಿಯ ಕನಿಷ್ಠ ೩ ಬ್ಯಾಂಕುಗಳು ಮತ್ತು ಸಂಬಂಧಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ನೀಡುವುದು.
ಗುಂಪು ತಾಲೂಕು ಸ್ತ್ರೀ ಶಕ್ತಿ ಗುಂಪುಗಳ ಒಕ್ಕೂಟದಲ್ಲಿ ಪಡೆದ ಸದಸ್ಯತ್ವದ ಪ್ರತಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಂದ ಗುಂಪು ಉಳಿತಾಯದ ದೃಢೀಕರಣ ಪ್ರತಿ ಎಲ್ಲ ದಾಖಲೆಗಳನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಂದ ದೃಢೀಕರಿಸಿ ನೀಡಬೇಕು ಎಂದು ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಬಸವರಾಜ ವರವಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರವಣದೋಷವುಳ್ಳ ಬಾಲಕಿಯರ ವಸತಿಯುತ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ
ಇಲ್ಲಿನ ಆಜಮ್ ನಗರದ ಬಳಿಯ ವಿದ್ಯಾನಗರದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಶ್ರವಣದೋಷವುಳ್ಳ ವಿಶೇಷಚೇತನ ಬಾಲಕಿಯರ ವಸತಿಯುತ ಶಾಲೆಯಲ್ಲಿ ೧ ರಿಂದ ೧೦ ನೇ ತರಗತಿವರೆಗೆ ವ್ಯಾಸಂಗ ನೀಡುವ ಸಲುವಾಗಿ ೨೦೨೧-೨೨ ನೇ ಸಾಲಿಗೆ ಹೊಸದಾಗಿ ಪ್ರವೇಶಗಳನ್ನು ಪ್ರಾರಂಭಿಸಲಾಗಿದೆ.
ಉಚಿತ ಊಟ ಹಾಗೂ ವಸತಿ ಮತ್ತು ಇನ್ನಿತರೆ ಸೌಲಭ್ಯಗಳನ್ನು ನೀಡಲಾಗುತ್ತಿದೆ.
ಶ್ರವಣದೋಷವುಳ್ಳ ಬಾಲಕಿಯರ ಪಾಲಕರು/ ಪೋಷಕರು ತಮ್ಮ ಮಕ್ಕಳಿಗೆ ಉಚಿತ ಪ್ರವೇಶ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಶಾಲೆಗೆ ಖುದ್ದಾಗಿ ಭೇಟಿ ನೀಡಲು ಅಥವಾ ದೂರವಾಣ ಸಂಖ್ಯೆ: ೦೮೩೧-೨೪೭೨೨೫೦ ಅಥವಾ ಮೊಬೈಲ್ ಸಂಖ್ಯೆ: ೯೪೪೯೪೪೨೨೧೨ ಇದನ್ನು ಸಂಪರ್ಕಿಸಬಹುದು ಎಂದು ಕಿವುಡ ಮಕ್ಕಳ ಸರ್ಕಾರಿ ಶಾಲೆಯ ಪ್ರಭಾರ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಗ್ರಾಮೀಣದಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಚಾಲನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ