Belagavi NewsBelgaum NewsKannada NewsKarnataka News

ಸಂಪನ್ಮೂಲ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪ್ರಸಕ್ತ ಸಾಲಿನಲ್ಲಿ ಸಮನ್ವಯ ಶಿಕ್ಷಣ ಕಾರ್ಯತಂತ್ರದಡಿಯಲ್ಲಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ 8 ವಲಯಗಳಲ್ಲಿ ಅಗತ್ಯವಿರುವ 12 ಪ್ರಾಥಮಿಕ ಹಾಗೂ 16 ಪ್ರೌಢ ಶಾಲಾ ಶಿಕ್ಷಕರು ಒಟ್ಟು 28 ಸಂಪನ್ಮೂಲ ಶಿಕ್ಷಕರ ಹುದ್ದೆಗಳಿಗೆ ನೇರಗುತ್ತಿಗೆ ಮೂಲಕ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲು ಡಿ.ಇಡಿ/ಬಿ.ಇಡಿ ಪಡೆದಿರುವ (ಆರ್.ಸಿ.ಐ ಪ್ರಮಾಣ ಪತ್ರ ಹೊಂದಿರುವ) ಅರ್ಜಿ ಆಹ್ವಾನಿಸಲಾಗಿದೆ.

ಸದರಿ ನೇರಗುತ್ತಿಗೆ ಅವಧಿಯು ಮಾ.31 (2025) ರವರೆಗೆ ಮಾತ್ರ ಇರುವುದು (ಸಾಮಾನ್ಯ ಡಿ.ಇಡಿ/ಬಿ.ಇಡಿ ವಿದ್ಯಾರ್ಹತೆ ಅನ್ವಯಾಗುವುದಿಲ್ಲ) ಪ್ರಯುಕ್ತ ಪ್ರಾಥಮಿಕ ಬಿ.ಐ.ಇ.ಆರ್.ಟಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿ.ಇಡಿ ಅಥವಾ ಎಮ್.ಸಿ.ಟಿ.ಟಿ ವಿದ್ಯಾರ್ಹತೆ (ಆರ್.ಸಿ.ಐ ನಿಯಮಗಳ ಪ್ರಕಾರ ಸಿ.ಆ‌ರ್.ಆರ್ ನಂಬರ) ಹೊಂದಿರಬೇಕು ಹಾಗೂ ಪ್ರೌಢ ಬಿ.ಐ.ಇ.ಆರ್.ಟಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

Home add -Advt

ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಜೂ.18 ಸಾಯಂಕಾಲ 5 ಗಂಟೆ ಒಳಗಾಗಿ ಉಪನಿರ್ದೇಶಕರು (ಆಡಳಿತ) ಹಾಗೂ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು ಸಮಗ್ರ ಶಿಕ್ಷಣ ಕರ್ನಾಟಕ ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿ ಯಲ್ಲಿ ಅರ್ಜಿ ಪಡೆದು ಉಪನಿರ್ದೇಶಕರ ಕಛೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ: 9448999432 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಉಪನಿದೇಶಕರು(ಆಡಳಿತ) ಹಾಗೂ ಜಿಲ್ಲಾಯೋಜನಾ ಸಮನ್ವಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button