Kannada NewsKarnataka NewsNational

*ನಿನ್ನ ಹತ್ಯೆ ನೇಹಾ, ಅಂಜಲಿ ಹಾಗೆ ಆಗುತ್ತೆ: ಶಿಕ್ಷಕಿಗೆ ಬೆದರಿಕೆ ಪತ್ರ

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಭಾರಿ ಸದ್ದು ಮಾಡಿದ ಹುಬ್ಬಳಿಯ ಇಬ್ಬರು ಯುವತಿಯ ಕೊಲೆ ಆದ ಹಾಗೆ ನಿನ್ನ ಕೊಲೆ ಮಾಡುತ್ತೇವೆ ಎಂದು ಹುಬ್ಬಳ್ಳಿಯ ಖಾಸಗಿ ಶಾಲೆಯ ಮುಖ್ಯ ಶಿಕ್ಷಕಿ ದೀಪಾಗೆ ಬೆದರಿಕೆ ಪತ್ರ ಬಂದಿದೆ.

Home add -Advt

ಕಾಲೇಜು ವಿದ್ಯಾರ್ಥಿ ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರೆ ಕೊಲೆ ಆದ ಹಾಗೆ ನಿನ್ನ ಕೊಲೆ ಮಾಡುವದಾಗಿ ಶಿಕ್ಷಕಿ ದೀಪಾಳಿಗೆ ಆರೋಪಿ ಪತ್ರ ಬರೆದಿರುವ ಹಿನ್ನೆಲೆ ಭಾರಿ ಆತಂಕ ಸೃಷ್ಟಿಯಾಗಿದೆ.‌

ಹುಬ್ಬಳ್ಳಿಯ ಖಾಸಗಿ ಶಾಲೆ ಶಿಕ್ಷಕಿಗೆ ಬಂದಿರುವ ಪತ್ರದಲ್ಲಿ “ದೀಪಾ, ನಿನ್ನ ಹತ್ಯೆ ನೇಹಾ ಅಂಜಲಿ ಹಾಗೆಯೇ ಕೆಲವೆ ದಿನ” ಎಂದು ಬರೆದಿರುವ ಪತ್ರ ಬಂದಿದ್ದು, ಪತ್ರ ಕಂಡು ಆತಂಕಗೊಂಡ ಶಿಕ್ಷಕಿ ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. 

ಮೇ 28 ರಂದು ಬೆಳಗ್ಗೆ ಪೋಸ್ಟ್ ಮ್ಯಾನ್ ಬಂದು ಪತ್ರ ತಲುಪಿಸಿದ್ದರು. ಕಿಡಿಗೇಡಿ ಕೃತ್ಯವಾ? ಅಥವಾ ಉದ್ದೇಶ ಪೂರ್ವಕವಾಗಿ ಬರೆದಿದ್ದ‌? ಎಂಬುದರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

Related Articles

Back to top button