Latest

ಶಿವಸೇನೆಯಿಂದ ಮುಂದುವರೆದ ಪುಂಡಾಟ; ಕನ್ನಡದಲ್ಲಿರುವ ಬೋರ್ಡ್ ಗಳಿಗೆ ಕಪ್ಪು ಮಸಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಒಂದೆಡೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಶಿವಸೇನೆ ಪುಂಡಾಟ ಮುಂದುವರೆದಿದ್ದರೆ ಇದೀಗ ಕೊಲ್ಲಾಪುರದಲ್ಲಿಯೂ ಮಳಿಗೆಗಳಿಗೆ ಕನ್ನಡದಲ್ಲಿರುವ ಬೋರ್ಡ್ ಗಳ ಮೇಲೆ ಕಪ್ಪು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದೆ.

ಶಿವಸೇನೆ ಕಾರ್ಯಕರ್ತರು ಕೊಲ್ಲಾಪುರದ ಮಳಿಗೆಗಳ ಮೇಲಿರುವ ಕನ್ನಡ ಬೋರ್ಡ್ ಗಳಿಗೆ ಕಪ್ಪು ಮಸಿ ಬಳಿಯುವ ಕೆಲಸ ಮಾಡುತ್ತಿದ್ದು, ಕನ್ನಡ ಬೋರ್ಡ್ ಹಾಕಿದರೆ ವ್ಯಾಪಾರ ಮಾಡಲು ಬಿಡುವುದಿಲ್ಲ ಎಂದು ಅಂಗಡಿ ಹಾಗೂ ಮಳಿಗೆಗಳ ಮಾಲೀಕರಿಗೆ ಶಿವಸೇನೆ ಮುಖಂಡ ಸಂಜಯ್ ಪವಾರ್ ಬೆದರಿಕೆ ಹಾಕುತ್ತಿದ್ದಾರೆ.

ಇನ್ನು ಇಲ್ಲಿನ ಮಹಾಲಕ್ಷ್ಮಿ ದೇವಾಲಯದ ಬಳಿ ಇರುವ ಹಲವಾರು ಅಂಗಡಿಗಳಲ್ಲಿ ಕನ್ನಡದಲ್ಲಿ ಬೋರ್ಡ್ ಹಾಕಲಾಗಿದ್ದು, ಇಲ್ಲೂ ಕೂಡ ಶಿವಸೇನೆ ಕಾರ್ಯಕರ್ತರು ಪುಂಡಾಟ ಮೆರೆದಿದ್ದಾರೆ. ಶಿವಸೇನೆ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Related Articles

Back to top button