
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಡಾ.ಮಲ್ಲಿಕಾರ್ಜುನ ಮನ್ಸೂರ್ ಮತ್ತು ಡಾ.ದ.ರಾ.ಬೇಂದ್ರೆ ಸ್ಮಾರಕ ರಾಷ್ಟ್ರೀಯ ಟ್ರಸ್ಟ್ ಗಳಿಗೆ ಅಧ್ಯಕ್ಷ, ಸದಸ್ಯರುಗಳನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಮನ್ಸೂರ್ ಟ್ರಸ್ಟ್ ಗೆ ಪಂಡಿತ ವೆಂಕಟೇಶ ಕುಮಾರ ಅಧ್ಯಕ್ಷರಾಗಿದ್ದು, ಡಾ.ಶಕ್ತಿ ಪಾಟೀಲ, ಉಸ್ತಾದ ಶಫೀಕ್ ಖಾನ್, ಡಾ.ಪರಶುರಾಮ ಕಟ್ಟಿಸಂಗಾವಿ, ಡಾ.ಚಂದ್ರಿಕಾ ಕಾಮತ್, ಯಾದವೇಂದ್ರ ಪೂಜಾರ, ಅಕ್ಕಮಹಾದೇವಿ ಆಲೂರ, ಗುರುಪ್ರಸಾದ ಹೆಗಡೆ ಸದಸ್ಯರಾಗಿದ್ದು, ಕನ್ನಡ ಸಂಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.
ಬೇಂದ್ರ ಟ್ರಸ್ಟ್ ಗೆ ಡಾ.ಸರಜೂ ಕಾಟ್ಕರ್ ಅಧ್ಯಕ್ಷರಾಗಿದ್ದು, ಡಾ.ವೈ.ಎಂ.ಯಾಕೊಳ್ಳಿ, ಡಾ.ಅಶೇಕ ಶೆಟ್ಟರ್, ಶಿಲಾಧರ ಮುಗಳಿ, ಡಾ.ಶರಣಮ್ಮ ಗೋರಬಾಳ, ಪ್ರಭು ಕುಂದರಗಿ, ಇಮಾಮಸಾಬ ವಲ್ಲೆಪ್ಪನವರ್ ಸದಸ್ಯರಾಗಿದ್ದಾರೆ. ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.