*ಖಾನಾಪುರ ಕ್ಷೇತ್ರದ ಈ 30 ರಸ್ತೆಗಳ ಅಭಿವೃದ್ಧಿಗೆ ಅನುಮೋದನೆ: ಹಲಗೇಕರ*

ಪ್ರಗತಿವಾಹಿನಿ ಸುದ್ದಿ, ಖಾನಾಪುರ: “ನನ್ನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 37.62ಕಿಮೀ ಉದ್ದದ ಒಟ್ಟು 30 ಗ್ರಾಮೀಣ ರಸ್ತೆಗಳನ್ನು ಪ್ರಗತಿಪಥ ಯೋಜನೆಯಡಿ ಅಭಿವೃದ್ಧಿಗೊಳಿಸಲು ಉದ್ದೇಶಿಸಿದ್ದು, ಈಗಾಗಲೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆಯ ಮೂಲಕ ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇವುಗಳ ಪೈಕಿ 23 ರಸ್ತೆ ಕಾಮಗಾರಿಗಳಿಗೆ ಅನುಮೋದನೆ ಸಿಕ್ಕಿದೆ” ಎಂದು ಶಾಸಕ ವಿಠ್ಠಲ ಹಲಗೇಕರ ಹೇಳಿದರು.
ಭಾನುವಾರ ಪಟ್ಟಣದಲ್ಲಿ ಸುದ್ದಿಗಾರರಿಗೆ ಈ ಮಾಹಿತಿ ನೀಡಿದ ಅವರು, “ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ನಡೆಯಲಿರುವ ಪ್ರಗತಿಪಥ ಯೋಜನೆಯಡಿ ತಾಲ್ಲೂಕಿನ ಗುಂಡೇನಟ್ಟಿ -ಭೂರಣಕಿ ಕ್ರಾಸ್, ರಾಮಗುರವಾಡಿ -ರಾಜ್ಯ ಹೆದ್ದಾರಿ ಸಂಪರ್ಕ ರಸ್ತೆ, ಗಣೇಬೈಲ-ಕಾಟಗಾಳಿ ರಸ್ತೆ, ಕಾಟಗಾಳಿ- ರಾಷ್ಟ್ರೀಯ ಹೆದ್ದಾರಿ ಸಂಪರ್ಕ ರಸ್ತೆ, ಇದ್ದಲಹೊಂಡ -ಖೇಮೆವಾಡಿ, ಗುಂಜಿ -ಗುಂಜಿ ರೈಲು ನಿಲ್ದಾಣ, ಗಂದಿಗವಾಡ-ಬಿದರನಟ್ಟಿ, ಕಿರಾವಳೆ- ರಾಷ್ಟ್ರೀಯ ಹೆದ್ದಾರಿ ಸಂಪರ್ಕ ರಸ್ತೆ,
ಅಸೋಗಾ-ಹರನಸವಾಡಿ- ಕಾಂಜಳೆ, ಮುಗವಡೆ -ಕಬನಾಳಿ, ಕಣಕುಂಬಿ -ಚಿಗುಳೆ, ಬಿಳಕಿ- ಬಂಕಿ, ಲಿಂಗನಮಠ- ಚುಂಚವಾಡ, ಚಿಕ್ಕ ಅಂಗ್ರೊಳ್ಳಿ- ಹಂದೂರ, ಯಡೋಗಾ -ಚಾಪಗಾಂವ, ಕುರಾಡವಾಡಾ-ಲೋಹಾರವಾಡಾ- ರಾಷ್ಟ್ರೀಯ ಹೆದ್ದಾರಿ ಸಂಪರ್ಕ ರಸ್ತೆ, ಭಾಲ್ಕೆ-ರಾಷ್ಟ್ರೀಯ ಹೆದ್ದಾರಿ ಸಂಪರ್ಕ ರಸ್ತೆ, ಮಾನ-ರಾಜ್ಯ ಹೆದ್ದಾರಿ ಸಂಪರ್ಕ ರಸ್ತೆ, ಕಣಕುಂಬಿ-ತಳಾವಡೆ, ಅಕ್ರಾಳಿ-ರಾಷ್ಟ್ರೀಯ ಹೆದ್ದಾರಿ ಸಂಪರ್ಕ ರಸ್ತೆ, ಘಷ್ಟೊಳ್ಳಿ-ಚಣಕೆಬೈಲ-ಸೋನೆನಟ್ಟಿ-ಮಾಸ್ಕೇನಟ್ಟಿ, ಚುಂಚವಾಡ-ಕರೀಕಟ್ಟಿ-ಕಕ್ಕೇರಿ ಮಾರ್ಗಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಅನುಮೋದನೆ ದೊರೆತಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ” ಎಂದು ವಿವರಿಸಿದರು.
“ಈಗಾಗಲೇ ಮೊದಲ ಪಟ್ಟಿಯಲ್ಲಿ ಸಲ್ಲಿಸಲಾಗಿದ್ದ ಗುಂಡೊಳ್ಳಿ-ಹೊಸ ಲಿಂಗನಮಠ, ಚಿಕಲೆ-ಪಾರವಾಡ, ಸಡಾ-ರಾಜ್ಯ ಹೆದ್ದಾರಿ ಸಂಪರ್ಕ ರಸ್ತೆ, ಕಕ್ಕೇರಿ-ಪ್ರಾಜ್ಞ ಆಶ್ರಮ ಮಠ, ಮಂಗೇನಕೊಪ್ಪ-ಘಷ್ಟೊಳ್ಳಿ ಮತ್ತು ಪಾರವಾಡ-ಕಣಕುಂಬಿ ರಸ್ತೆ ಕಾಮಗಾರಿಗಳನ್ನು ಮರುಪರಿಶೀಲಿಸಿ ಸಲ್ಲಿಸುವಂತೆ ಸೂಚಿಸಿದ್ದರಿಂದ ಅವುಗಳನ್ನು ಕೆಲ ಮಾರ್ಪಾಡುಗಳೊಂದಿಗೆ ಪ್ರಸ್ತಾವನೆ ತಯಾರಿಸಿ ಮರು ಸಲ್ಲಿಸಲಾಗಿದೆ. ಈ ಕಾಮಗಾರಿಗಳಿಗೂ ಅನುಮೋದನೆ ದೊರೆಯುವ ವಿಶ್ವಾಸವಿದೆ” ಎಂದು ಶಾಸಕರು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಬ್ಲಾಕ್ ಅಧ್ಯಕ್ಷ ಬಸವರಾಜ ಸಾಣಿಕೊಪ್ಪ, ಮುಖಂಡರಾದ ಸುಂದರ ಕುಲಕರ್ಣಿ, ಸಂಜಯ ಕಂಚಿ, ಸದಾನಂದ ಪಾಟೀಲ, ಮಲ್ಲಪ್ಪ ಮಾರಿಹಾಳ, ಅಪ್ಪಯ್ಯ ಕೋಡೊಳ್ಳಿ, ಪ್ರಮೋದ ಕೊಚೇರಿ ಮತ್ತಿತರರು ಇದ್ದರು.