*ರೆಸಾರ್ಟ್ ಸಭೆ ಬಂಡಾಯವಲ್ಲ, ಪಕ್ಷದ ಬಲವರ್ಧನೆಗೆ ಸಭೆ ಎಂದ ಅರವಿಂದ ಲಿಂಬಾವಳಿ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಾಧ್ಯಮಗಳಲ್ಲಿ ನಮ್ಮ ಸಭೆಯ ಬಗ್ಗೆ ಬಂಡಾಯ, ಅತೃಪ್ತರ ಸಭೆ ಎಂದು ಬರ್ತಾಯಿದೆ. ಆದರೆ ಇದು ಅತೃಪ್ತರ ಸಭೆಯಲ್ಲ ಎಂದು ಮಾಜಿ ಸಚಿವ ಅರವಿಂದ್ ಲಿಂಬಾವಳಿ ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿ ರೆಬೆಲ್ ನಾಯಕರ ಸಭೆ ವಿಚಾರವಾಗಿ ಬೆಳಗಾವಿಯ ಖಾಸಗಿ ರೆಸಾರ್ಟ್ ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಹಿನ್ನಡೆಯಾಗಿದೆ. ಬಿಜೆಪಿ ಬಲವರ್ಧನೆಗಾಗಿ ಈ ಸಭೆ ಮಾಡುತ್ತಿದ್ದೇವೆ.
ಬಿಜೆಪಿ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸಲು ಸಭೆ ಮಾಡುತ್ತಿದ್ದೇವೆ. ಪಕ್ಷದಲ್ಲಿ ಇರುವ ದೋಷಗಳನ್ನು ಸರಿ ಪಡಿಸಿಕೊಂಡು ಹೋಗಲು ಈ ಸಭೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ವಾಲ್ಮೀಕಿ ನಿಗಮದ ಹಣ ದುರ್ಬಳಕೆ. ಎಸ್ಸಿ, ಎಸ್ಟಿ ಹಣದ ದುರುಪಯೋಗದ ವಿಚಾರವನ್ನು ಹೈಕಮಾಂಡ್ ಗೆ ತಿಳಿಸಬೇಕು. ವಾಲ್ಮೀಕಿ ಹಗರಣದ ವಿಚಾರವಾಗಿ ಕೂಡಲಸಂಗಮದಿಂದ ಬಳ್ಳಾರಿ ವರೆಗೂ ಪಾದಯಾತ್ರೆ ಮಾಡಲಿದ್ದೇವೆ. ನಾವು 11 ಅಲ್ಲಾ 12 ಜನ ನಾಯಕರಿದ್ದೇವೆ. ನಾನು ಪಕ್ಷದ ಹಿರಿಯ ನಾಯಕ, ಪಕ್ಷದ ಬದ್ಧತೆ ನಮಗೆ ಗೊತ್ತಿದೆ. ಮುಡಾದಂತೆ ವಾಲ್ಮೀಕಿ ಪಾದಯಾತ್ರೆ ಬಗ್ಗೆ ತೀರ್ಮಾನ ಮಾಡುತ್ತೇವೆ. ಪಕ್ಷದ ವರಿಷ್ಠರೊಂದಿಗೆ ಚರ್ಚೆ ಮಾಡಿ ತೀರ್ಮಾನ ಮಾಡಲಿದ್ದೇವೆ ಎಂದು ಅರವಿಂದ್ ಲಿಂಬಾವಳಿ ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ