Latest

*ಪ್ರೇಯಸಿಯನ್ನು ಕೊಂದು ಮ್ಯಾನ್ ಹೋಲ್ ಗೆ ಎಸೆದ ಅರ್ಚಕ; ಕೊಲೆಗೈದು ಏನೂ ಗೊತ್ತಿಲ್ಲದಂತೆ ನಾಟಕವಾಡಿದ್ದ ಎರಡು ಮಕ್ಕಳ ತಂದೆ*

ಪ್ರಗತಿವಾಹಿನಿ ಸುದ್ದಿ; ಹೈದಾರಾಬದ್: ಪ್ರೇಯಸಿಯನ್ನೇ ಹತ್ಯೆಗೈದ ಅರ್ಚಕ ಬಳಿಕ ಆಕೆಯ ಶವವನ್ನು ಮ್ಯಾನ್ ಹೋಲ್ ಗೆ ಎಸೆದು ಹೋಗಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಶಂಶಾಬಾದ್ ನಲ್ಲಿರುವ ಬಂಗಾರು ಮೈಸಮ್ಮ ದೇವಸ್ಥಾನದ ಅರ್ಚಕ 36 ವರ್ಷದ ಸಾಯಿಕೃಷ್ಣ ತನ್ನ ಪ್ರಿಯತಮೆ ಕುರುಗಂಟೆ ಅಪ್ಸರಾ (30) ಎಂಬ ಯುವತಿಯನ್ನು ಹತ್ಯೆಗೈದು ಮ್ಯಾನ್ ಹೋಲ್ ನಲ್ಲಿ ಶವ ಎಸೆದು ಹೋಗಿದ್ದಲ್ಲದೇ ಆಕೆಯ ಕುಟುಂಬದವರಿಗೆ ಕರೆ ಮಾಡಿ ನಿಮ್ಮ ಮಗಳು ಫೋನ್ ರಿಸಿವ್ ಮಾಡುತ್ತಿಲ್ಲ ಎಂದು ನಾಟಕವಾಡಿದ್ದಾನೆ.

ವೃತ್ತಿಯಲ್ಲಿ ಅರ್ಚರಕ ಹಾಗೂ ಬಿಲ್ಡರ್ ಆಗಿರುವ ಸಾಯಿಕೃಷ್ಣ, ಅದಾಗಲೇ ವಿವಾಹವಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದಾನೆ. ಆದರೆ ಅಪ್ಸರಾ ಎಂಬ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಇತ್ತೀಚೆಗೆ ಅಪ್ಸರಾ, ಮೊದಲ ಪತ್ನಿಗೆ ವಿಚ್ಛೇದನ ಕೊಟ್ಟು ತನ್ನನ್ನು ವಿವಾಹವಾಗುವಂತೆ ಒತ್ತಾಯಿಸಿದ್ದಳು. ಅಪ್ಸರಾ ಕಾಟಕ್ಕೆ ಆಕೆ ಜೊತೆ ಮಾತನಾಡುವ ನೆಪದಲ್ಲಿ ಕರೆದು ಆಕೆಯನ್ನು ಹತ್ಯೆಗೈದ ಸಾಯಿಕೃಷ್ಣ, ಕೊಲೆ ಬಳಿಕ ಶವವನ್ನು ಮ್ಯಾನ್ ಹೋಲ್ ನಲ್ಲಿ ಹಾಕಿ ಮುಚ್ಚಿಟ್ಟಿದ್ದಾನೆ.

ಬಳಿಕ ಮೃತ ಅಪ್ಸರಾ ಮನೆಯವರಿಗೆ ಆಕೆ ಫೋನ್ ರಿಸಿವ್ ಮಾಡುತ್ತಿಲ್ಲ ಎಂದು ಹೇಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡುವಂತೆ ತಿಳಿಸಿದ್ದಾನೆ. ಅಪ್ಸರಾ ಪೋಷಕರು ಮಗಳು ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಪ್ಸರಾ ಫೋನ್ ಟ್ರೇಸ್ ಮಾಡಿ ಆಕೆಯ ಕಾಲ್ ಕಡೆಯದಾಗಿ ಪತ್ತೆಯಾದ ಸ್ಥಳಕ್ಕೆ ತೆರಳಿ ಸಿಸಿಟಿವಿ ಪರಿಶೀಲಿಸಿದಾಗ ಅರ್ಚಕನ ಕೃತ್ಯ ಬಯಲಾಗಿದೆ.

Home add -Advt

ಆರೋಪಿ ಸಾಯಿಕೃಷ್ಣನನ್ನು ಬಂಧಿಸಿ ವಿಚಾರಿಸಿದಾಗ ಎಲ್ಲವಿಚಾರ ಬಾಯ್ಬಿಟ್ಟಿದ್ದು, ತಪ್ಪೊಪ್ಪಿಕೊಂಡಿದ್ದಾನೆ.

https://pragati.taskdun.com/9-months-babydeathmentho-plus-boxbellary/

Related Articles

Back to top button